ಸೂಲಿಬೆಲೆ: ನಮ್ಮ ಪೂರ್ವಜರು ನಮಗೆ ನೀಡಿರುವ ಬಳುವಳಿಗಳಲ್ಲಿ ಪೌರಾಣಿಕ ನಾಟಕಗಳದ್ದು ಪ್ರಮುಖ ಪಾತ್ರ. ಪೌರಾಣಿಕ ನಾಟಕಗಳು ನಮ್ಮ ಹಿಂದು ಧರ್ಮದ ಪ್ರತೀಕ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು.ಹೋಬಳಿಯ ಗುಳ್ಳಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ರಾಮಾಂಜನೇಯ ಯುದ್ದ ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಇಂದಿಗೂ ನಾಟಕಗಳು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿವೆ. ಗುಳ್ಳಹಳ್ಳಿಯ ರಂಗ ಕಲಾವಿದರೆಲ್ಲಾ ಸೇರಿ ರಂಗ ನಿರ್ದೇಶಕ ಡಿ.ಲಕ್ಷ್ಮೀನಾರಾಯಣ ಅವರ ನಿರ್ದೇಶನದಲ್ಲಿ ವರ್ಷಕ್ಕೊಂದು ನಾಟಕ ಪ್ರದರ್ಶನ ಮಾಡುತ್ತಾರೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ನಾಟಕಗಳು ಗ್ರಾಮೀಣ ಭಾಗದಲ್ಲಿನ ಜನರ ಮನರಂಜನೆ ಜೊತೆಯಲ್ಲಿ ಧಾರ್ಮಿಕ ಭಾವನೆಗಳ ಕೊಂಡಿಯಾಗಿವೆ. ಹಿಂದು ಧರ್ಮದಲ್ಲಿ ಬರುವ ಪೌರಾಣಿಕ ನಾಟಕ ರೂಪದಲ್ಲಿ ಜನಮನದಲ್ಲಿ ಉಳಿಸುವ ಪ್ರಯತ್ನ ಇದಾಗಿದೆ. ಯುವ ಸಮುದಾಯ ಧರ್ಮದ ಕಾರ್ಯಕ್ರಮದಂತೆ ನಾಟಕಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ನಾಟಕ ನಿರ್ದೇಶಕರಾದ ಡಿ.ಲಕ್ಷ್ಮೀನಾರಾಯಣ್, ಕಲಾವಿದ ಸ್ಟುಡಿಯೋ ಆನಂದ್, ಮೋಹನ್‌ರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಜಿ.ಸಿ.ಮುನಿಯಪ್ಪ, ತಾಪಂ ಮಾಜಿ ಸದಸ್ಯರಾದ ಡಾ.ಡಿ.ಟಿ.ವೆಂಕಟೇಶ್, ನಗರೇನಹಳ್ಳಿ ನಾಗರಾಜಪ್ಪ, ಸೂಲಿಬೆಲೆ ಗ್ರಾಪಂ ಅಧ್ಯಕ್ಷ ಜನಾರ್ದನರೆಡ್ಡಿ, ಕಂಬಳಿಪುರ ಗ್ರಾಪಂ ಅಧ್ಯಕ್ಷೆ ನರಸಮ್ಮ ನರಸಿಂಹಮೂರ್ತಿ, ಮಾಜಿ ಅಧ್ಯಕ್ಷ ಆನಂದಪ್ಪ, ಡೇರಿ ಅಧ್ಯಕ್ಷ ಮುನಿರಾಜು, ಮುಖಂಡರಾದ ಮುನಿಶಾಮಪ್ಪ, ಶ್ರೀರಾಮ್, ಸೋಮಣ್ಣ, ರವಿ, ಆಂಜಿನಪ್ಪ, ಸಹಕಾರ ಬ್ಯಾಂಕ್ ಲೆಕ್ಕಿಗ ನಾಗೇಶ್, ಚಿಕ್ಕಹರಳಗೆರೆ ಜಗದೀಶ್, ಸ್ಟುಡಿಯೋ ಆನಂದ್, ಸಿದ್ದೇಗೌಡ ಇತರರಿದ್ದರು.ಕೋಟ್....ದೃಶ್ಯ ಮಾಧ್ಯಮದ ಹಾವಳಿಯಿಂದ ಇಂದು ನಾಟಕಗಳನ್ನು ನೋಡುವ ಅಭಿಮಾನ ಕ್ಷೀಣಿಸುತ್ತಿದೆ. ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ಸಮುದಾಯ ಮುಂದಾಗಬೇಕು.
-ಡಿ.ಲಕ್ಷ್ಮೀನಾರಾಯಣ್, ನಾಟಕ ನಿರ್ದೇಶಕರು, ದೊಡ್ಡಸಣ್ಣೆ(ಸನ್ಮಾನದ ಫೋಟೋ ಪ್ಯಾನಲ್‌ನಲ್ಲಿ ಬಳಸಿ, ಮತ್ತೊಂದು ಸುದ್ದಿಯೊಂದಿಗೆ ಬಳಸಿ)ಸೂಲಿಬೆಲೆ ಹೋಬಳಿಯ ಗುಳ್ಳಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ರಾಮಾಂಜನೇಯ ಯುದ್ದ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ನಾಟಕ ನಿರ್ದೇಶಕರಾದ ಡಿ.ಲಕ್ಷ್ಮೀನಾರಾಯಣ್, ಕಲಾವಿದ ಸ್ಟುಡಿಯೋ ಆನಂದ್, ಮೋಹನ್‌ರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.