ಕನ್ನಡಪ್ರಭ ವಾರ್ತೆ ಹಲಗೂರು
5 ವರ್ಷಗಳ ಕಾಲ ಅವಧಿಗೆ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯಲ್ಲಿ ಎನ್.ರಾಜೇಗೌಡ ಹಾಗೂ ತಾಯಮ್ಮ ಶಿವಶಂಕರಚಾರಿ ಅವರನ್ನು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಅಧಿಕಾರಿಯಾಗಿದ್ದ ತ್ಯಾಗರಾಜ್ ಪ್ರಸಾದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.
ನಂತರ ಮಾತನಾಡಿದ ಅಧ್ಯಕ್ಷ ರಾಜೇಗೌಡ, ಡೇರಿ ಅಧ್ಯಕ್ಷನಾಗುತ್ತೇನೆ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಎಲ್ಲಾ ನಿರ್ದೇಶಕರ ಸಹಕಾರದಲ್ಲಿ ಅಧ್ಯಕ್ಷನಾಗಿದ್ದು, ಡೇರಿ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮತ್ತು ಮನ್ಮುಲ್ ನಿರ್ದೇಶಕ ಕೃಷ್ಣೇಗೌಡರ ಸಲಹೆ ಸಹಕಾರದೊಡನೆ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಧ್ಯಕ್ಷನಾಗಿ ಆಯ್ಕೆ ಮಾಡಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಸಂಘಕ್ಕೆ ಯಾವುದೇ ಚ್ಯುತಿ ಬರದಂತೆ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಭರವಸೆ ನೀಡುತ್ತೇನೆ ಎಂದು ಹೇಳಿದರು.ನಂತರ ಸಂಘದ ನಿರ್ದೇಶಕರು ಮತ್ತು ಅಭಿಮಾನಿಗಳು ರಾಜೇಗೌಡರನ್ನು ಸನ್ಮಾನಿಸಿ ಪಟಾಕಿ ಸಿಡಿಸಿ ಸಿಹಿಹಂಚಿದರು.
ಎಚ್.ಮಲ್ಲಿಗೆರೆ ಗ್ರಾಪಂ ಉಪಾಧ್ಯಕ್ಷರಾಗಿ ಸಂತೋಷ್ ಕುಮಾರ್ ಆಯ್ಕೆ
ನೂತನ ಉಪಾಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಇದ್ದರೂ ಎಲ್ಲರ ಸಹಮತದಿಂದ ಪರಿಶಿಷ್ಟ ಜಾತಿಗೆ ಅವಕಾಶ ಮಾಡಿ ಸಂಪಹಳ್ಳಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದ ನನಗೆ ಕೊಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಮುಖಂಡರಾದ ಸಿ.ಮಾದಪ್ಪ, ಎಂ.ಕೆ.ಜ್ಞಾನಮೂರ್ತಿ, ಎಂ.ಮಾದೇಗೌಡ, ಯೋಗಾನಂದ, ಶಿವಶಂಕರ್, ಎಸ್ ಎಸ್ ವಿನಯ್, ಎಸ್.ಸಿ. ಬಸವರಾಜು, ಎಸ್.ಕೆ.ಬಸವರಾಜ್, ಎಸ್.ಈ.ರಾಮಕೃಷ್ಣ, ಎಸ್.ವಿ.ವೆಂಕಟೇಶ್, ಎಸ್.ಅಯ್ಯಪ್ಪ, ಪಾರ್ಥಸಾರಥಿ, ಮೋಹನ್, ಜೆಡಿಎಸ್‌ನ ಕಾರ್ಯಕರ್ತರು ಹಾಜರಿದ್ದು ಅಭಿನಂದಿಸಿದರು.