ನಾಡ್ ಕೊಡವ ಸೌಹಾರ್ದ ಪತ್ತಿನ ಸಂಘ ವಾರ್ಷಿಕ ಮಹಾಸಭೆ

KannadaprabhaNewsNetwork |  
Published : Sep 22, 2025, 01:02 AM IST
ನಾಪೋಕ್ಲು ನಾಡ್ ಕೊಡವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ, 2024-25ನೇ ಸಾಲಿನ ಸಹಕಾರಿಯ ೦೭ನೇ ವಾರ್ಷಿಕ ಮಹಾಸಭೆ ನಾಪೋಕ್ಲು ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಸಭಾಂಗಣದಲ್ಲಿ ಸಹಕಾರಿಯ ಅಧ್ಯಕ್ಷರಾದ  ಅಪ್ಪಾರಂಡ.ಎಸ್.ಅಯ್ಯಪ್ಪ ನವರ ಅಧ್ಯಕ್ಷತೆಯಲ್ಲಿ ನಡೆಯಿತ್ತು. | Kannada Prabha

ಸಾರಾಂಶ

ಪ್ರಸ್ತುತ ಸಂಘದಲ್ಲಿ ಒಟ್ಟು 793 ಸದಸ್ಯರಿದ್ದು ಈ ವರ್ಷ ನಮ್ಮ ಸಂಘವು 4, 12, 605 ರಷ್ಟು ಲಾಭಗಳಿಸಿ ಉತ್ತಮ ರೀತಿಯಲ್ಲಿ ಸಾಗುತ್ತಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಾಪೋಕ್ಲು ನಾಡ್ ಕೊಡವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ 2024-25ನೇ ಸಾಲಿನ ಸಹಕಾರಿಯ 07ನೇ ವಾರ್ಷಿಕ ಮಹಾಸಭೆ ಇಲ್ಲಿಯ ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಸಹಕಾರಿಯ ಅಧ್ಯಕ್ಷರಾದ ಅಪ್ಪಾರಂಡ ಎಸ್.ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷರು ಸಂಘದ ಅಭಿವೃದ್ಧಿ ಬಗ್ಗೆ ಮಾತನಾಡಿ, ಪ್ರಸ್ತುತ ಸಂಘದಲ್ಲಿ ಒಟ್ಟು 793 ಸದಸ್ಯರಿದ್ದು ಈ ವರ್ಷ ನಮ್ಮ ಸಂಘವು 4, 12, 605 ರು. ರಷ್ಟು ಲಾಭಗಳಿಸಿ ಉತ್ತಮ ರೀತಿಯಲ್ಲಿ ಸಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷರಾದ ಮುಂಡಂಡ.ಸಿ.ನಾಣಯ್ಯ ನಿರ್ದೇಶಕರಾದ, ಬಿದ್ದಾಟಂಡ ರಮೇಶ್ ಚಂಗಪ್ಪ , ಬೊಳ್ಯಂಡ.ಪಿ.ಹರೀಶ್ ಕಾರ್ಯಪ್ಪ, ಕನ್ನಂಬೀರ.ಸಿ.ತಿಮ್ಮಯ್ಯ , ಕುಂಡ್ಯೋಳಂಡ.ಸಿ.ಪೂವಯ್ಯ , ಕಾಟುಮಣಿಯಂಡ.ಎಮ್.ಉಮೇಶ್, ಅರೇಯಡ ಎಂ.ಆಶೋಕ , ಚೋಕಿರ.ಎಸ್.ಚಿಣ್ಣಪ್ಪ , ಚೇನಂಡ ಈ.ಗಿರೀಶ್ ಪೂಣಚ್ಚ , ಕುಲ್ಲೇಟ್ಟಿರ ಎಂ.ದೇವಯ್ಯ, ಪಾಡೆಯಂಡ.ಸಿ.ಕುಶಾಲಪ್ಪ , ಮೂವೇರ ರೇಖಾ ಪ್ರಕಾಶ್, ಕೋಟೇರ. ನೈಲಾ ಚಂಗಪ್ಪ, ಮುಖ್ಯಕಾರ್ಯನಿರ್ವಹಕರಾದ ಎಸ್.ಪಿ.ದೇವಯ್ಯ ಹಾಗೂ ಸಿಬ್ಬಂದಿ ಕೆ.ಜಿ.ಸರಸ್ವತಿ ಹಾಗೂ ಕೊಡವ ಸಮಾಜದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಸಹನಾ ಎನ್.ವಿ. ಉಪಸ್ಥಿತರಿದ್ದರು.

ನಿರ್ದೇಶಕರಾದ ಚೋಕಿರ.ಎಸ್.ಚಿಣ್ಣಪ್ಪ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಮಾಳೆಯಂಡ.ಎ.ಅಯ್ಯಪ್ಪ ಸ್ವಾಗತಿಸಿ ನಿರ್ದೇಶಕರಾದ ಕರವಂಡ.ಪಿ.ಲವ ನಾಣಯ್ಯ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ