ಕನ್ನಡಪ್ರಭ ವಾರ್ತೆ ಮೈಸೂರು
ಕಾರ್ಯಕ್ರಮಕ್ಕೆ ಮೈಸೂರು-ಕೊಡಗು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಅನುಪಸ್ಥಿತಿಯಲ್ಲಿ ಅವರ ಶುಭಾಶಯಗಳನ್ನು ತಿಳಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್. ಸುಬ್ರಮಣ್ಯ ಹಾಗೂ ಕಲಾ ಸಂದೇಶ ಪ್ರತಿಷ್ಠಾನದ ಸಂಸ್ಥಾಪಕ ಸಂದೇಶ್ ಭಾರ್ಗವ ಮುಖ್ಯಅತಿಥಿಗಳಾಗಿ ಭಾಗವಹಿಸಿ, ದೀಕ್ಷಿತಾ ವೇಣುಗೋಪಾಲ್ ಅವರ ನೃತ್ಯ ಪ್ರತಿಭೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ತೋಡಿಯ ಮಂಗಳಂನೊಂದಿಗೆ ಆರಂಭವಾದ ದೀಕ್ಷಿತಾ ವೇಣುಗೋಪಾಲ್ ಅವರ ರಂಗಪ್ರವೇಶವು ನಂತರದಲ್ಲಿ ಸೂರ್ಯಾಷ್ಟಕಂ, ತತ್ವಪದ, ಪದವರ್ಣ, ಜಾವಳಿ, ತಿಲ್ಲಾನ ಹಾಗೂ ಬ್ರಹ್ಮಮೊಕಟೆ ನೃತ್ಯ ಪ್ರಸ್ತುತಿಗಳ ಮೂಲಕ ಸಾಂಪ್ರದಾಯಿಕ ಭರತನಾಟ್ಯದ ವಿವಿಧ ಆಯಾಮಗಳನ್ನು ಮನೋಜ್ಞವಾಗಿ ಅನಾವರಣಗೊಳಿಸಿತು, ಭಾವ, ರಾಗ, ತಾಳ ಮತ್ತು ಲಯಗಳ ಸಮನ್ವಯದೊಂದಿಗೆ ಅವರು ನೀಡಿದ ನೃತ್ಯ ಪ್ರದರ್ಶನವು ನೆರೆದಿದ್ದ ಕಲಾರಸಿಕರ ಮೆಚ್ಚುಗೆಗೆಗ ಪಾತ್ರವಾಗಿ, ಕರತಾಡನದ ಮೂಲಕ ಅಪಾರ ಪ್ರಶಂಸೆಯನ್ನು ಗಳಿಸಿತು.ಕಿಕ್ಕಿರಿದು ತುಂಬಿದ ಸಭಾಂಗಣದಲ್ಲಿ ನೆರೆದಿದ್ದ ಕಲಾರಸಿಕರು ದೀಕ್ಷಿತಾ ವೇಣುಗೋಪಾಲ್ ಅವರ ಅಂಗಶುದ್ಧಿ, ಲಯಬದ್ಧತೆ, ಭಾವಾಭಿನಯ ಹಾಗೂ ಮನೋಜ್ಞ ನೃತ್ಯ ಪ್ರಸ್ತುತಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಂತ್ರಮುಗ್ಧರಾಗಿ ಕಾರ್ಯಕ್ರಮವನ್ನು ವೀಕ್ಷಿಸಿದ ಪ್ರೇಕ್ಷಕರು ಕರತಾಡನದ ಮೂಲಕ ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಉಪಸ್ಥಿತರಿದ್ದ ಗಣ್ಯರು, ಗುರುಗಳು ಹಾಗೂ ಕಲಾಭಿಮಾನಿಗಳು ಯು ಕಲಾವಿದೆ ದೀಕ್ಷಿತಾ ವೇಣುಗೋಪಾಲ್ ಅವರ ಕಲಾಪ್ರತಿಭೆ ಮತ್ತು ಕಲಾಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.