ಕನ್ನಡಪ್ರಭ ವಾರ್ತೆ ಮೈಸೂರು
ಪಾವನಾ, ಎಂ. ಪರಮೇಶ್, ಪ್ರಮಥ ಮಂಜು, ವೈ.ಎಂ. ನಾಗೇಂದ್ರ, ತೇಜಾವತಿ, ರವಿರಾಜ್ ಹಾಸು, ಪಿ.ಎಂ.ಸುರೇಶ್, ಸುಮಾ, ಚೆಲುವರಾಜ್ ಅವರು ಗೀತೆಗಳನ್ನು ಹಾಡಿ, ಸಭಿಕರನ್ನು ರಂಜಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ.ಬೈರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾವನಾ ಹಾಗೂ ಪರಮೇಶ್ ಅವರು ಸರ್ಕಾರಿ ನೌಕರಿಯಲ್ಲಿದ್ದುಕೊಂಡು ಗಾಯನ ತಂಡವನ್ನು ಕಟ್ಟಿ ಮೈಸೂರು ನಗರ ಮಾತ್ರವಲ್ಲದೇ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡುತ್ತಾ ಪ್ರಸಿದ್ಧರಾಗಿದ್ದಾರೆ. ಅವರಿಗೆ ಕಾರ್ಪೋರೇಷನ್ ಮಂಜುನಾಥ್ ಸಾಥ್ ನೀಡುತ್ತಿದ್ದಾರೆ ಎಂದರು.ಪ್ರಮಥ ಮಂಜು, ವೈ.ಎಂ. ನಾಗೇಂದ್ರ, ರವಿರಾಜ್, ತೇಜಾವತಿ, ಸುಮಾ, ಪಿ.ಎಂ. ಸುರೇಶ್ ಕೂಡ ಉತ್ತಮವಾಗಿ ಹಾಡುತ್ತಿದ್ದಾರೆ ಎಂದು ಹೇಳಿದರು.
ರಾಜಮಹಾರಾಜರ ಕಾಲದಿಂದಲೂ ಮೈಸೂರು ನಗರ ಕಲೆ- ಸಂಸ್ಕೃತಿಗೆ ಹೆಸರುವಾಸಿ. ಈಗಲೂ ಕೂಡ ನಾನಾ ಸಂಘ, ಸಂಸ್ಥೆಗಳು ನಿರಂತರಾಗಿ ಕಾರ್ಯಕ್ರಮಗಳನ್ನು ನೀಡುತ್ತಾ ಆ ಹೆಸರನ್ನು ಉಳಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾದಬ್ರಹ್ಮ ಸಭಾಂಗಣ ಸಭಿಕರಿಂದ ಕಿಕ್ಕಿರಿದು ತುಂಬಿತ್ತು. ಎಲ್ಲರೂ ಕನ್ನಡ- ಹಿಂದಿ ಚಲನಚಿತ್ರಗೀತೆಗಳನ್ನು ಆಸ್ವಾದಿಸಿದರು.