ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ರಿದಮ್ಸ್ ಕರೋಕೆ ಕ್ಲಬ್ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಜೆಎಲ್ ಬಿ ರಸ್ತೆಯ ನಾದಬ್ರಹ್ಮ ಸಂಗೀತಸಭಾದಲ್ಲಿ ಕನ್ನಡದ ಕಂಪು ಚಿತ್ರಗೀತೆಗಳ ಇಂಪು- ಜನಪ್ರಿಯ ಚಿತ್ರಗೀತೆಗಳ ಲೈವ್ ಮ್ಯೂಸಿಕ್ ರಸಸಂಜೆ ಕಾರ್ಯಕ್ರಮ ಗುರುವಾರ ಜರುಗಿತು.ಕನ್ನಡದ ಸುಪ್ರಸಿದ್ಧ ಹಳೆಯ ಹಾಗೂ ಹೊಸ ಸಿನಿಮಾಗಳ ಚಿತ್ರಗೀತೆಗಳನ್ನು ತಂಡದ ಸದಸ್ಯರಾದ ಎಸ್. ಅಮರ್, ಡಾ.ಎಲ್. ಸುಮಾ, ನಾಗೇಂದ್ರ, ಅಶ್ವಿನ್ ಅತ್ರಿ, ಜಿ.ಪಿ. ಚೇತನ್, ಸಂತೋಷ್ ನಾಯರ್, ರವಿಕುಮಾರ್, ಡಾ. ಪ್ರಕಾಶ್, ಡಾ. ಬಾಲಕಿರಣ್, ನಾಗೇಶ್ ಶೃಂಗೇರಿ, ಡಾ. ಪೂರ್ಣಿಮಾ, ಡೌ. ಸೌಮ್ಯಾ, ಶರಣ್ಯಾ, ನಾಗೇಶ್ ಹಾಗೂ ಪ್ರವೀಣ್ ಗಾಡ್ಕೆ ಪ್ರಸ್ತುತಪಡಿಸಿದರು. ವಾದ್ಯವೃಂದದಲ್ಲಿ ನಾಗೇಶ್- ಡ್ರಮ್ಸ್, ಶರತ್, ರಾಜೇಶ್- ಕೀಬೋರ್ಡ್, ವಿಲ್ಸನ್- ಗಿಟಾರ್, ಕಿರಣ್- ರಿದಂ ಪ್ಯಾಡ್, ರೋಶನ್ ಸೂರ್ಯ- ತಬಲ, ಕಿಶೋರ್- ಡೋಲಕ್ ಸಾಥ್ ನೀಡಿದರು. ಯಡಿಯೂರು ಸಮೀವುಲ್ಲಾ ಕಾರ್ಯಕ್ರಮ ನಿರೂಪಿಸಿದರು.ಇದೇ ವೇಳೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ, ಕಲಾವಿದ ಎ.ಡಿ. ಶ್ರೀನಿವಾಸ್, ಅಂತಾರಾಷ್ಟ್ರೀಯ ಕ್ರೀಡಾಪಟು ಎಸ್. ಜ್ಞಾನೇಶ್ವರ್, ಜಿಲ್ಲಾ ಕಸಾಪ ಮಾಜಿ ಅಧ್ಯತ್ರ ಡಾ.ವೈ.ಡಿ. ರಾಜಣ್ಣ ಅವರನ್ನು ಅಭಿನಂದಿಸಲಾಯಿತು,.--ಬಾಕ್ಸ್....ಕನ್ನಡ ಬದುಕು- ನಾಗರಾಜ ವಿ. ಬೈರಿಸನ್ಮಾನಿತರ ಪರವಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಮಾತನಾಡಿ, ಕನ್ನಡವೆಂದರೆ ಬದುಕು. ಕನ್ನಡದಿಂದಲೇ ನಮ್ಮ ಜೀವನ ಸಾಗುತ್ತಿದೆ ಎಂದರು. ಮೈಸೂರು ರಿದಮ್ಸ್ ತಂಡದವರು ಕನ್ನಡಮಯ ವಾತಾವರಣವನ್ನು ನಿರ್ಮಿಸಿ, ರಾಜ್ಯೋತ್ಸವ ಆಚರಿಸುತ್ತಿರುವುದರ ಜೊತೆಗೆ ಕನ್ನಡದ ಕಂಪು- ಚಿತ್ರಗೀತೆಗಳ ಇಂಪು ಶೀರ್ಷಿಕೆಯಡಿ ನೈಜ ವಾದ್ಯಸಂಗೀತದೊಂದಿಗೆ ರಸಸಂಜೆ ಏರ್ಪಡಿಸಿರುವುದು ಶ್ಲಾಘನೀಯ. ಈ ರೀತಿಯ ಕಾರ್ಯಕ್ರಮಗಳಿಗೆ ಸಭಿಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.