ಹಳೆಯ ಚಿತ್ರಗೀತೆಗಳ ಗಾಯನ, ವಿಶೇಷ ಮಕ್ಕಳಿಗೆ ಧನಸಹಾಯ, ಪ್ರತಿಭಾ ಪುರಸ್ಕಾರ

KannadaprabhaNewsNetwork |  
Published : Jun 28, 2025, 12:18 AM IST
20 | Kannada Prabha

ಸಾರಾಂಶ

ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡಿದರೆ ಹೆಚ್ಚಿನ ಸಾದನೆ ಮಾಡಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಜೆಎಲ್ ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ iಗುರುವಾರ ಪಾತಿ ಫೌಂಡೇಶನ್ 125ನೇ ಕಾರ್ಯಕ್ರಮದ ಅಂಗವಾಗಿ ಸಾಹಸಸಿಂಹ ವಿಷ್ಣುವರ್ಧನ್, ಪ್ರಣಯ ರಾಜ ಶ್ರೀನಾಥ್, ಅನಂತ್ ನಾಗ್ ಅವರು ನಟಿಸಿರುವ ಚಿತ್ರದ ಹಾಡುಗಳ ಕಾರ್ಯಕ್ರಮ ಹಾಗೂ ವಿಶೇಷ ಅಂದ ಮಕ್ಕಳಿಗೆ ಸಹಾಯಧನ, ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡಿದರೆ ಹೆಚ್ಚಿನ ಸಾದನೆ ಮಾಡಲು ಸಾಧ್ಯವಾಗುತ್ತದೆ. ಅಂಧ ಮಕ್ಕಳಿಗೆ ನೆರವು ನೀಡಿರುವುದು ಉತ್ತಮವಾದುದು ಎಂದರು.

ನಗರಪಾಲಿಕೆ ಮಾಜಿ ಸದಸ್ಯರೂ ಆದ ಎಂ.ಡಿ. ಪಾರ್ಥಸಾರಥಿ ಅವರು ಚಲನಚಿತ್ರ ನಿರ್ಮಾಪಕರಾಗಿದ್ದಾರೆ. ತಾವು ಗಳಿಸಿದ ಒಂದಂಶವನ್ನು ಸಮಾಜಕ್ಕೆ ವಾಪಸ್‌ ಕೊಡುವ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.

ಪಾತಿ ಫೌಂಡೇಶನ್ ಅಧ್ಯಕ್ಷ ಎಂ.ಡಿ. ಪಾರ್ಥಸಾರಥಿ ಮಾತನಾಡಿ, ಪ್ರತಿ ಬಾರಿಯೂ ಫೌಂಡೇಷನ್‌ ವಿಭಿನ್ನ ಕಾರ್ಯಕ್ರಮ ರೂಪಿಸುತ್ತಿದೆ. ಈ ಬಾರಿ ಮೈತ್ರಿ ವಿಶೇಷ ಶಾಲೆಗೆ ನೆರವು ನೀಡಲಾಗಿದೆ. ಅದೇ ರೀತಿ ಪ್ರತಿಭಾವಂತರು ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೂ ನೆರವು ನೀಡಲಾಗಿದೆ ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ,ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ನಾಗರಾಜ್ ವಿ ಬೈರಿ, ಚಲನಚಿತ್ರ ನಿರ್ಮಾಪಕ ಎಸ್.ಎ. ಶ್ರೀನಿವಾಸ್‌, ಕೆ.ಆರ್‌. ಬ್ಯಾಂಕ್‌ ಅಧ್ಯಕ್ಷ ಬಸವರಾಜು, ವಿಕ್ರಂ ಅಯ್ಯಂಗಾರ್‌ ಮುಖ್ಯ ಅತಿಥಿಗಳಾಗಿದ್ದರು.

ಮುಖಂಡರಾದ ಜೋಗಿ ಮಂಜು, ಸಂತೋಷ್, ಎಸ್.ಎನ್. ರಾಜೇಶ್, ಮನೋಜ್, ಹೇಮಂತ್, ಅಭಿ, ಲಕ್ಷ್ಮಣ್, ಯೋಗೇಂದ್ರ, ಪುರುಷೋತ್ತಮ್‌, ಕಾರ್ಪೋರೇಷನ್‌ ಮಂಜುನಾಥ್‌ ಮೊದಲಾದವರು ಇದ್ದರು.

ನಂತರ ವಿಷ್ಣುವರ್ಧನ್‌, ಶ್ರೀನಾಥ್‌ ಹಾಗೂ ಅನಂತನಾಗ್‌ ಅಭಿನಯದ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಿದ ತಂಡದ ಗಾಯಕರು ಸಭಾಂಗಣಧಲ್ಲಿ ಕಿಕ್ಕಿರಿದು ಸೇರಿದ್ದ ಸಭಿಕರನ್ನು ರಂಜಿಸಿದರು.

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು