ನಾಡಹಬ್ಬವು ರಾಜ್ಯದ ಸಾಂಸ್ಕೃತಿಕ ಪರಂಪರೆಯ ಜೀವಂತ ಪಳೆಯುಳಿಕೆ: ಸಾಹಿತಿ ಶಂಭು ಬಳಿಗಾರ

KannadaprabhaNewsNetwork | Published : Oct 7, 2024 1:35 AM

ಸಾರಾಂಶ

ಕನ್ನಡ ನಾಡಿನಲ್ಲಿ ವಿಶಿಷ್ಟವಾಗಿ ಆಚರಿಸುತ್ತಿರುವ ನಾಡಹಬ್ಬವು ರಾಜ್ಯದ ಸಾಂಸ್ಕೃತಿಕ ಪರಂಪರೆಯ ಜೀವಂತ ಪಳೆಯುಳಿಕೆಯಾಗಿದ್ದು ಪ್ರಾಚೀನ ಮತ್ತು ಐತಿಹಾಸಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತಿದೆ. ಅವುಗಳ ಉಳಿವು ಮತ್ತು ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಮಹತ್ತರ ಜವಾಬ್ದಾರಿ ಪ್ರತಿ ನಾಗರಿಕನ ಮೇಲಿದೆ ಎಂದು ಇಳಕಲ್‌ನ ಜಾನಪದ ವಿದ್ವಾಂಸ ಶಂಭು ಬಳಿಗಾರ ಹೇಳಿದರು.

ಹಾವೇರಿ: ಕನ್ನಡ ನಾಡಿನಲ್ಲಿ ವಿಶಿಷ್ಟವಾಗಿ ಆಚರಿಸುತ್ತಿರುವ ನಾಡಹಬ್ಬವು ರಾಜ್ಯದ ಸಾಂಸ್ಕೃತಿಕ ಪರಂಪರೆಯ ಜೀವಂತ ಪಳೆಯುಳಿಕೆಯಾಗಿದ್ದು ಪ್ರಾಚೀನ ಮತ್ತು ಐತಿಹಾಸಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತಿದೆ. ಅವುಗಳ ಉಳಿವು ಮತ್ತು ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಮಹತ್ತರ ಜವಾಬ್ದಾರಿ ಪ್ರತಿ ನಾಗರಿಕನ ಮೇಲಿದೆ ಎಂದು ಇಳಕಲ್‌ನ ಜಾನಪದ ವಿದ್ವಾಂಸ ಶಂಭು ಬಳಿಗಾರ ಹೇಳಿದರು.ನಗರದ ಗುರುಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ 27ನೇ ನಾಡಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ ಆಚರಿಸುವ ಯಾವುದೇ ಹಬ್ಬಗಳು ತನ್ನದೇ ಆದ ವಿಶಿಷ್ಟ ಐತಿಹ್ಯವನ್ನು ಹೊಂದಿವೆ. ಮಹಾಭಾರತದ ಕಾಲದಲ್ಲಿ ಈ ನಾಡಹಬ್ಬದ ಆಚರಣೆ ಪ್ರಾರಂಭವಾಗಿದೆ. ಶಿಷ್ಟ ರಕ್ಷಣೆ ದುಷ್ಟ ಶಿಕ್ಷಣೆಯ ಜೊತೆಗೆ ವ್ಯಕ್ತಿ ವ್ಯಕ್ತಿಗಳ ನಡುವೆ ಪ್ರೀತಿ ವಿಶ್ವಾಸ, ನಂಬಿಕೆ ಹೆಚ್ಚಿಸಿ, ಕೌಟುಂಬಿಕ ಮೌಲ್ಯಗಳು ಹಾಗೂ ಪ್ರಕೃತಿಯೊಂದಿಗೆ ಮಾನವ ಸಂಬಂಧದ ಸುಧಾರಣೆಯ ಪ್ರತಿಪಾದನೆಯೂ ಹಬ್ಬದ ಆಚರಣೆಯ ಮೂಲ ಆಶಯವಾಗಿದೆ ಎಂದು ಹೇಳಿದರು.ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಕನ್ನಡ ಸಾಹಿತ್ಯ ಭವನವು ಮುಕ್ತಾಯದ ಹಂತದಲ್ಲಿದ್ದು, ಮುಂದಿನ ನಾಡಹಬ್ಬ ಕಾರ್ಯಕ್ರಮಗಳು ಹೊಸ ಸಾಹಿತ್ಯ ಭವನದಲ್ಲಿಯೇ ನಡೆಯುತ್ತವೆ. ಇದಕ್ಕೆ ಸಾರ್ವಜನಿಕರ ಸಹಾಯ ಸಹಕಾರ ಬೇಕಾಗಿದೆ ಎಂದು ಹೇಳಿದರು.ಮಾಜಿ ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ ಶಿವಣ್ಣ ಶಿರೂರ, ಹೊನ್ನಪ್ಪ ತಿಮ್ಮಾಪುರ, ಮುರುಗೆಪ್ಪ ಕಡೇಕೊಪ್ಪ, ಸಾವೇಂತ್ರವ್ವ ಹುಳಬುತ್ತಿ, ದುರುಗಮ್ಮ ಬಾರ್ಕಿ, ಸುರೇಶ ಚಲುವಾದಿ, ಅಬ್ದುಲ್ ಹುಬ್ಬಳ್ಳಿ, ನಾಗಪ್ಪ ಶೇಷಗಿರಿ ಅವರನ್ನು ಸನ್ಮಾನಿಸಲಾಯಿತು.ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಶಂಕರ ಸುತಾರ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ಮಲ್ಲಣ್ಣ ಸಾತೇನಹಳ್ಳಿ, ಎಸ್.ಎನ್. ದೊಡ್ಡಗೌಡರ, ವಿ.ಪಿ. ದ್ಯಾಮಣ್ಣನವರ, ಅಮೃತಮ್ಮ ಶೀಲವಂತರ, ಚಂಪಾ ಹುಣಸಿಕಟ್ಟಿ, ಈರಣ್ಣ ಬೆಳವಡಿ, ಲಲಿತಕ್ಕ ಹೊರಡಿ, ಮಲ್ಲಿಕಾರ್ಜುನ ಹಿಂಚಿಗೇರಿ, ಸಿ.ಎಸ್.ಮರಳಿಹಳ್ಳಿ, ರಾಜೇಂದ್ರ ಹೆಗಡೆ, ಪೃಥ್ವೀರಾಜ ಬೆಟಗೇರಿ, ಸಿ.ಸಿ.ಪ್ರಭುಗೌಡರ, ಭರತರಾಜ ಹಜಾರೆ, ದಾಕ್ಷಾಯಣಿ ಗಾಣಗೇರಿ, ಗೀತಾ ಸುತ್ತಕೋಟಿ, ಮಮತಾ ನಂದೀಹಳ್ಳಿ, ಮಾಲತೇಶ ಮರಿಗೂಳಪ್ಪನವರ, ಕೆ.ಆರ್. ಹಿರೇಮಠ ಇತರರಿದ್ದರು.ಸಮತಾ ಕಲಾ ತಂಡ ಪ್ರಾರ್ಥಿಸಿದರು. ಎಸ್.ಆರ್. ಹಿರೇಮಠ ಸ್ವಾಗತಿಸಿದರು. ತಾಲೂಕು ಕಸಾಪ ಅಧ್ಯಕ್ಷ ವೈ.ಬಿ. ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಕಮ್ಮ ಹಾನಗಲ್ಲ ಮತ್ತು ಶೋಭಾ ಜಾಗಟಗೇರಿ ನಿರೂಪಿಸಿದರು. ಶಂಕರ ಬಡಗೇರ ವಂದಿಸಿದರು. ನಂತರ ಹಲವು ಕಲಾ ತಂಡಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

Share this article