ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ನ ಕಚೇರಿಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡರು ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆ ಸಂಸ್ಥಾಪಕರಾದ ಬಿ.ವೈ.ನೀಲೇಗೌಡರ ಜಯಂತಿ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಪ್ರತಿಭಾಪುರಸ್ಕಾರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡಪ್ರಭು ಕೆಂಪೇಗೌಡರು ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದರು. ಪ್ರಸ್ತುತ ಬೆಂಗಳೂರು ನಗರ ಬೃಹತ್ ಆಕಾರದಲ್ಲಿ ಬೆಳೆದು ಎಲ್ಲಾ ಕ್ಷೇತ್ರದಲ್ಲೂ ಪ್ರಗತಿ ಸಾಧನೆ ಮಾಡಿ ವಿಶ್ವದಲ್ಲಿಯೇ ಮನ್ನಣೆ ಪಡೆದುಕೊಂಡಿದೆ. ಜೊತೆಗೆ ಇದೊಂದು ಅತ್ಯಂತ ಸುರಕ್ಷಿತ ನಗರವಾಗಿದೆ ಎಂದರು.ಕೆಂಪೇಗೌಡರ ಜನಿಸಿ 516 ವರ್ಷಗಳು ಕಳೆದರೂ ಅವರ ದೂರದೃಷ್ಟಿ ಹಾಗೂ ಸಾಧನೆ ಎಷ್ಟರ ಮಟ್ಟಿಗೆ ಭದ್ರಬುನಾದಿಯಾಗಿ ನೆಲೆಯೂರಿದೆ ಎಂದರೆ ಅದಕ್ಕೆ ಉದಾಹರಣೆ ಬೆಂಗಳೂರು ನಗರವಾಗಿದೆ. ಇದನ್ನು ಅರ್ಥೈಸಿಕೊಂಡು ಅವರು ಹಾಕಿ ಕೊಟ್ಟು ಮಾರ್ಗದಲ್ಲಿ ನಾವೆಲ್ಲರು ಮುನ್ನಡೆಯಬೇಕು ಎಂದರು.
ಉಪನ್ಯಾಸಕ ಜೆ.ಬಿ.ಮಂಜುನಾಥ್ ಅವರು ನಾಡಪ್ರಭು ಕೆಂಪೇಗೌಡ ಹಾಗೂ ಬಿ.ವೈ.ನೀಲೇಗೌಡರ ಕುರಿತು ಉಪನ್ಯಾಸ ನೀಡಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಈರೇಗೌಡನಕೊಪ್ಪಲು ಗ್ರಾಮದ ಪ್ರೀತಮ್‌ಗೌಡ ಇ.ಎಸ್ (ಶಿಕ್ಷಣ ಕ್ಷೇತ್ರ), ಹಿರೇಮರಳಿ ಗ್ರಾಮದ ದುವನ್‌ಗೌಡ ಎಚ್.ಎ.(ಸ್ಕೇಟಿಂಗ್), ಲಾವಣ್ಯ ಪಿ.ಎನ್.ಗೌಡ (ಬ್ಯಾಸ್ಕೆಟ್ ಬಾಲ್), ಯಶ್ ಆರ್.ಗೌಡ(ಅಥ್ಲೇಟಿಕ್ಸ್), ರಚನ್‌ಗೌಡ ಎಂ.ಎಸ್.(ಲಾನ್‌ಟೆನ್ನಿಸ್) ಸನ್ಮಾನಿಸಿ ಗೌರವಿಸಲಾಯಿತು.