ಕನಕಪುರ: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಚಿಂತನೆ ಮತ್ತು ಆಲೋಚನೆಯಿಂದ ಬೆಂಗಳೂರು ನಗರ ಇಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಇತಿಹಾಸಕಾರ ಹೇಮಂತ್ ಕುಮಾರ್ ತಿಳಿಸಿದರು.
ಬೆಂಗಳೂರನ್ನು ನಿರ್ಮಿಸುವಾಗ ಪ್ರತಿ ಕಸುಬಿನ ಜನಾಂಗಕ್ಕೂ ಒಂದೊಂದು ಪೇಟೆ, ಗುಡಿ ಗೋಪುರ, ರೈತರ ಅನುಕೂಲಕ್ಕೆ ಕೆರೆಗಳನ್ನು ನಿರ್ಮಿಸಿ ಕುವೆಂಪುರವರ ಸರ್ವ ಜನಾಂಗದ ಶಾಂತಿಯ ತೋಟದಂತೆ ಬೆಂಗಳೂರು ನಗರವನ್ನು ಸರ್ವ ಜನಾಂಗದ ಮಹಾನಗರವನ್ನಾಗಿ ಮಾಡಿ ನಾಡಪ್ರಭುಗಳಾಗಿದ್ದಾರೆ. 500 ವರ್ಷಗಳ ಹಿಂದೆ ಇದ್ದಂತಹ ಕೆಂಪೇಗೌಡರನ್ನು ಇಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಅವರ ಕೆಲಸಗಳು ಮಾಡಿವೆ. ಕೆಂಪೇಗೌಡರ ವಿಚಾರಧಾರೆಗಳನ್ನು ಯುವ ಜನಾಂಗಕ್ಕೆ ತಿಳಿಸಿ ಕೊಡಬೇಕು ಎಂದರು.
ಟ್ರಸ್ಟ್ ಅಧ್ಯಕ್ಷ ಗಬ್ಬಾಡಿ ಕಾಡೇಗೌಡ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ, ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಹುಚ್ಚಪ್ಪ, ಜಿಲ್ಲಾ ಉಪಾಧ್ಯಕ್ಷ ಚಿಕ್ಕರಂಗಯ್ಯ, ಪದಾಧಿಕಾರಿಗಳಾದ ಯು.ವಿ. ಸ್ವಾಮಿಗೌಡ, ಟಿ.ಎನ್. ರಾಮಯ್ಯ, ಹೊಂಬಾಳೆಗೌಡ, ಬೈರೇಗೌಡ, ಶಿವರಾಮೇಗೌಡ, ರಮೇಶ್, ಓಂಕಾರೇಶ್ವರ, ನಿಂಗೇಗೌಡ, ರಾಮಚಂದ್ರ, ಕಂಡೇಗೌಡ, ಬನ್ನಿಕೊಪ್ಪ ಪ್ರಕಾಶ್, ಅಂಗಡಿ ರಮೇಶ್, ತೋಕತಿಮ್ಮನದೊಡ್ಡಿ ಸುರೇಶ್, ತೊಪ್ಪಗನಹಳ್ಳಿ ನಾಗರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕೆಂಪೇಗೌಡರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಜಯಂತಿ ಆಚರಿಸಿದರು.