ಕನ್ನಡಪ್ರಭ ವಾರ್ತೆ ಶಿರಾ
ಅವರು ಶಿರಾ ತಾಲೂಕಿನ ಚಿಕ್ಕಹುಲಿಕುಂಟೆ ಗ್ರಾಮದಲ್ಲಿ ಶನಿವಾರ ನಡೆದ ನಾಡಪ್ರಭು ಕೆಂಪೇಗೌಡರ ೫೧೭ನೇ ಜಯಂತಿ ಅಂಗವಾಗಿ ನಾಡಪ್ರಭು ಕೆಂಪೇ ಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಬೃಹತ್ ಬೆಂಗಳೂರು ಆಗಿ ವಿಶ್ವ ಮಟ್ಟದಲ್ಲಿ ಹೆಸರು ಗಳಿಸಲು ನಾಡಪ್ರಭು ಕೆಂಪೇಗೌಡ ದೂರ ದೃಷ್ಟಿ ಯೋಜನೆಗಳು ಹಾಗೂ ಜನಪರ ಆಡಳಿತವೇ ಕಾರಣ, ಇಂದಿನ ಯುವಕರು ಕೆಂಪೇಗೌಡರ ಆದರ್ಶ ಗಳನ್ನು ಮೈಗೂಡಿಸಿಕೊಂಡು ಪ್ರಗತಿಯತ್ತ ಮುನ್ನಡೆಯಬೇಕು ಎಂದು ಹೇಳಿದರು.
ಯುವ ಕಾಂಗ್ರೆಸ್ ಮುಖಂಡ ತಡಕಲೂರು ಕಿರಣ್ ಗೌಡ ಮಾತನಾಡಿ, ಕೆಂಪೇಗೌಡರ ಬೃಹತ್ ಪುತ್ಥಳಿಯನ್ನು ಚಿಕ್ಕ ಹುಲಿಕುಂಟೆ ಗ್ರಾಮದಲ್ಲಿ ಯುವಕರು ನಿರ್ಮಾಣ ಮಾಡಿದ್ದು ಅವರ ಸೇವೆ ಅಭಿಮಾನ ಮೆಚ್ಚುವಂತಹದ್ದು ಎಂದರು. ಈ ಸಂದರ್ಭದಲ್ಲಿ ಚಂದ್ರಶೇಖರ್, ಸುಧಾಕರ ಗೌಡ, ಜನಾರ್ಧನ್, ಮಂಜುನಾಥ್, ರವಿಕುಮಾರ್, ದಯಾನಂದ ಗೌಡ, ಗಿಡುಗನಹಳ್ಳಿ ಪವನ್ ಗೌಡ, ಹುಲಿಕುಂಟೆ, ಗಿರೀಶ್, ಶಿವರಾಂ, ಜಿ. ಆರ್. ರಮೇಶ್ ಪಟೇಲ್, ನಟರಾಜು, ಅರುಣ ಕುಮಾರ, ರತ್ನಮ್ಮ ಬಾಲಕೃಷ್ಣ ಗೌಡ, ಲಕ್ಷ್ಮಣ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.