ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಸೋಮವಾರ ಕಾಲೇಜಿನ ಸಭಾಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನಕ್ಕೆ ಕರ್ನಾಟಕ, ಮಹಾರಾಷ್ಟ್ರ, ಗೋವಾ, ತೆಲಂಗಣ, ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳಿಂದ ಸುಮಾರು 2000ಕ್ಕೂ ಹೆಚ್ಚು ಇಂಜೀನಿಯರಿಂಗ್, ಪದವಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಸಮ್ಮೇಳನದಲ್ಲಿ ಸಿವಿಲ್ ವಿಭಾಗದಿಂದ ಪ್ರಬಂಧ ಮಂಡನೆ, ಕ್ಲ್ಯಾಶ್ ಆಫ್ ಸಿವಿಲಿಯನ್ಸ್(ಕ್ವಿಜ್ ಸ್ಪರ್ಧೆ), ಸ್ಟ್ರಕ್ಚರ್ ಮಾಡೆಲಿಂಗ್, ಕಂಟೆಸ್ಟ್ ಆಫ್ ಕ್ಯೂಬ್ ಸ್ಪರ್ಧೆಗಳನ್ನು ಹಾಗೂ ಮೆಕ್ಯಾನಿಕಲ್ ವಿಭಾಗದಿಂದ ಪ್ರಬಂಧ ಮಂಡನೆ, ಟೆಕ್ನಿಕಲ್ ಕ್ವಿಜ್, ಮೆಕ್ಕ ಸ್ಟಾರ್, 3ಡಿ ಮಾಡೆಲಿಂಗ್‌ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದಿಂದ ಪ್ರಬಂಧ ಮಂಡನೆ, ರೊಬೊ ರೇಸ್, ಬ್ರೆನ್ ಟೀಸರ್, ರಿವರ್ಸ್ ಕೋಡಿಂಗ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಂಪ್ಯೂಟರ್ ಸೈನ್ಸ್ ಹಾಗೂ ಆರ್ಟಿಫಿಸಿಯಲ್ ಇಂಟಲಿಜೆನ್ಸ್ & ಡೇಟಾ ಸೈನ್ಸ್ ವಿಭಾಗದಿಂದ ಪ್ರಬಂಧ ಮಂಡನೆ, ಕೋಟ್ ಕ್ರಾಫ್ಟ್, ಟ್ರಿಕ್ಕಿ ಟ್ರಾಕ್ ಹಂಟ್, ಝೆಸ್ಟ ಗೇಮ್ ಆಫ್ ಲಾಜಿಕ್ ಸ್ಪರ್ಧೆಗಳನ್ನು ಹಾಗೂ ಎಂಬಿಎ ವಿಭಾಗದಿಂದ ಪ್ರಬಂಧ ಮಂಡನೆ, ಬಿ-ಪ್ಲಾನ್, ಬಿಜ್ ಕ್ವಿಜ್, ಬೆಸ್ಟ್ ಮ್ಯಾನೇಜರ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದರ ಜೊತೆಗೆ ಕ್ಯಾಪ್ಚರಿಸ್ಟಾ (ಫೋಟೊಗ್ರಾಫಿ) ಮತ್ತು ನೃತ್ಯಂ-2ಕೆ24 (ಡಾನ್ಸ್ ಸ್ಪರ್ಧೆ) ಎರ್ಪಡಿಸಲಾಗಿದೆ. ಈ ತಾಂತ್ರಿಕ ಸಮ್ಮೇಳನದಲ್ಲಿ 26 ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಫೆಬ್ರುವರಿ 29 ರಂದು ಬೆ.10ಕ್ಕೆ ಈ ತಾಂತ್ರಿಕ ಸಮ್ಮೇಳನವನ್ನು ವಿಟಿಯು ಕಲುಪತಿ ಡಾ.ವಿದ್ಯಾಶಂಕರ ಎಸ್. ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಡಾ.ಪ್ರಸಾದ ರಾಂಪುರೆ ವಹಿಸಲಿದ್ದಾರೆ. ಮಾ.1 ರಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು. ಪ್ರತಿಯೊಂದು ಸ್ಪರ್ಧೆಗೆ ಪ್ರಥಮ ಬಹುಮಾನ ₹3000, ದ್ವಿತೀಯ ಬಹುಮಾನ ₹2000, ತೃತೀಯ ಬಹುಮಾನ ₹1000 ನೀಡಲಾಗುವುದು ಎಂದರು.
ವಿನೋದ ಬಿರಾದರ ಹಾಗೂ ಡಾ. ಸಂಜಯ ಪುಜಾರಿ ಈ ತಾಂತ್ರೀಕ ಸಮ್ಮೇಳನದ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅನಿರುಧ್ಧ ಪಾಟೀಲ, ಅನುಶಾ ಗುಳಗೊಂಡ ಡಾ. ಸಚೀನ ಮೆಕ್ಕಳಕಿ ಉಪಸ್ಥಿತರಿದ್ದರು.ಮಾಹಿತಿಗಾಗಿ ವೆಬ್‌ಸೈಟ್ <ತಿತಿತಿ.ಞಟಛಿಣ.ಜ.ಟಿ/ಖಂಘಿ2ಏ24> ಮೊಬೈಲ್ ಸಂಖ್ಯೆ: 9986383703, 7204091533. ಸಂಪರ್ಕಿಸಿ.