ಕನ್ನಡಪ್ರಭವಾರ್ತೆ ನಾಗಮಂಗಲ
ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ತಾಲೂಕಿನ ಗಡಿ ಗ್ರಾಮ ಗೊಂದಿಹಳ್ಳಿಗೆ ಆಗಮಿಸಿದ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಶಿಷ್ಟಾಚಾರದಂತೆ ತಾಲೂಕು ಆಡಳಿತದಿಂದ ತಹಸೀಲ್ದಾರ್ ಅಶೋಕ್, ತಾಪಂ ಇಒ ಸತೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹೂಗುಚ್ಚ ನೀಡಿ ಸ್ವಾಗತ ಕೋರಿದರು.
ನಂತರ ನೆಲ್ಲಿಗೆರೆ ಕ್ರಾಸ್ ಬಳಿಯಿರುವ ಟೋಲ್ ಕೇಂದ್ರಕ್ಕೆ ಸಚಿವರು ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೃಹತ್ ಪಟಾಕಿ ಸಿಡಿಸಿ ಜಯಘೋಷದೊಂದಿಗೆ ಹೂಮಾಲೆ ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರು. ಮಹಿಳಾ ಕಾಂಗ್ರೆಸ್ಕಾರ್ಯಕರ್ತರು ಬೆಲ್ಲದಾರತಿ ಮಾಡಿ ಸ್ವಾಗತ ಕೋರಿದರು.
ಬಳಿಕ ಬೆಳ್ಳೂರು ಕ್ರಾಸ್‌ನಿಂದ ನಾಗಮಂಗಲ ಪಟ್ಟಣದವೆರೆಗೂ ಸಿಗುವ ಹಲವು ಗ್ರಾಮಗಳು ಮತ್ತು ಗೇಟ್‌ಗಳಲ್ಲಿ ಪಟಾಕಿ ಸಿಡಿಸಿ ಜಯಘೋಷದೊಂದಿಗೆ ಚಲುವರಾಯಸ್ವಾಮಿ ಅವರಿಗೆ ಸ್ವಾಗತ ಕೋರಲಾಯಿತು. ದಾರಿಯುದ್ದಕ್ಕೂ ನಿಂತಿದ್ದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸಚಿವರತ್ತ ಕೈ ಬೀಸಿ ಸ್ವಾಗತ ಕೋರಿದರೆ ಹಿರಿಯರು ಆಶೀರ್ವದಿಸಿ ಶುಭಕೋರಿದರು.
ಮೆರುಗು ನೀಡಿದ ಜಾನಪದ ಕಲಾತಂಡ ಪಟ್ಟಣದ ಹೊರವಲಯ ಎಪಿಎಂಸಿ ಯಾರ್ಡ್‌ನಿಂದ ನೂರಾರು ಮಹಿಳೆಯರೂ ಕೂಡ ಬೈಕ್ ರ್ಯಾಲಿ ನಡೆಸಿದರು. ಟಿ.ಬಿ.ಬಡಾವಣೆಯ ಉಪ್ಪಾರಹಳ್ಳಿ ಗೇಟ್‌ನಿಂದ ಪಟ್ಟಣದ ಟಿ.ಮರಿಯಪ್ಪ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ ಕುಣಿತ, ತಮಟೆ ಮೇಳ, ಸ್ಥಬ್ದಚಿತ್ರ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರಗು ನೀಡಿದವು.
ಸಚಿವ ಚಲುವರಾಯಸ್ವಾಮಿ ಅವರಿಗೆ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಲ್ಲಿ ಕ್ರೇನ್ ಯಂತ್ರದ ಮೂಲಕ ಬೃಹತ್ ಗಾತ್ರದ ಮುಸುಕಿನ ಜೋಳದ ಹಾರ ಹಾಕಿದರೆ, ಬ್ಲಾಕ್ ಕಾಂಗ್ರೆಸ್ ಕಚೇರಿ ಮುಂಭಾಗ ವಿವಿಧ ಬಗೆಯ ಹಣ್ಣುಗಳ ಹಾರ, ಟಿ.ಮರಿಯಪ್ಪ ವೃತ್ತದಲ್ಲಿ ಸೇಬಿನ ಹಾರ, ಮಂಡ್ಯ ವೃತ್ತದಲ್ಲಿ ಮೋಸಂಬಿ ಹಾರದ ಜೊತೆಗೆ ಜೆಸಿಬಿ ಯಂತ್ರಗಳಿಂದ ಪುಷ್ಪವೃಷ್ಟಿ ಮಾಡಿ
ಸಚಿವರ ಆಗಮನದ ಹಿನ್ನೆಲೆಯಲ್ಲಿ ತಾಲೂಕಿನ ಗಡಿ ಗ್ರಾಮದಿಂದ ಪಟ್ಟಣದ ವರೆಗೂ ದಾರಿಯುದ್ದಕ್ಕೂ ತಳಿರು ತೋರಣ, ಕಾಂಗ್ರೆಸ್ ಪಕ್ಷದ ಬಾವುಟ, ಸ್ವಾಗತ ಕೋರುವ ಬ್ಯಾನರ್‌ಗಳನ್ನು ಕಟ್ಟಲಾಗಿತ್ತು. ಪಟ್ಟಣ ವ್ಯಾಪ್ತಿಯ ಎರಡೂ ರಸ್ತೆ ಬದಿಗಳಲ್ಲಿ
ತುಂತುರು ಮಳೆಯ ಸಿಂಚನ:
ಹೊಸ ಇತಿಹಾಸ ಸೃಷ್ಟಿಸಿದ ಕಾರ್ಯಕರ್ತರು:
ನಾಲ್ಕನೇ ಬಾರಿ ಸಚಿವರಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಅಭೂತಪೂರ್ವ ಸ್ವಾಗತ ಕೋರಲು ಕಾಂಗ್ರೆಸ್ ಪಕ್ಷದ ಸಹಸ್ರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಉತ್ಸುಕರಾಗಿ ನಿಂತಿದ್ದರು. ಹಿಂದೆಂದೂ ಕಂಡರಿಯದ ರೀತಿ ಯಲ್ಲಿ ಸ್ವಾಗತ ಕೋರುವ ಕಟೌಟ್, ಬ್ಯಾನರ್, ಬಂಟಿಂಗ್ಸ್‌ಗಳನ್ನು ಕಟ್ಟಿ ಸಾವಿರಕ್ಕೂ ಹೆಚ್ಚು ಬೈಕ್‌ಗಳು, ನೂರಾರು ಕಾರುಗಳ ರ್ಯಾಲಿ ನಡೆಸಿ ಸಚಿವರನ್ನು ತವರು ಕ್ಷೇತ್ರಕ್ಕೆ ಬರಮಾಡಿಕೊಂಡ ಕೈ ಪಕ್ಷದ ಕಾರ್ಯಕರ್ತರು ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದರು.