ನಾಗಣ್ಣ ಮುಳಜಿ ಅಧ್ಯಕ್ಷ, ಪಿಡ್ಡಪ್ಪ ಗಣಜಲಿ ಉಪಾಧ್ಯಕ್ಷ

KannadaprabhaNewsNetwork |  
Published : Jan 11, 2025, 12:46 AM IST
೧೦ಡಿಎಚಪಿ೧ | Kannada Prabha

ಸಾರಾಂಶ

ದೇವರಹಿಪ್ಪರಗಿತಾಲೂಕಿನ ಚಿಕ್ಕರೂಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಜರುಗಿತು. ಅಧ್ಯಕ್ಷ ಸ್ಥಾನಕ್ಕೆ ನಾಗಣ್ಣ ಮುಳಜಿ, ಉಪಾಧ್ಯಕ್ಷ ಸ್ಥಾನಕ್ಕೆ ಪಿಡ್ಡಪ್ಪ ಗಣಜಲಿ ನಾಪಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ತಾಲೂಕಿನ ಚಿಕ್ಕರೂಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಜರುಗಿತು. ಅಧ್ಯಕ್ಷ ಸ್ಥಾನಕ್ಕೆ ನಾಗಣ್ಣ ಮುಳಜಿ, ಉಪಾಧ್ಯಕ್ಷ ಸ್ಥಾನಕ್ಕೆ ಪಿಡ್ಡಪ್ಪ ಗಣಜಲಿ ನಾಪಪತ್ರ ಸಲ್ಲಿಸಿದರು.

ಪ್ರತಿಯಾಗಿ ಯಾವುದೇ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಅಧ್ಯಕ್ಷರಾಗಿ ನಾಗಣ್ಣ ಮುಳಜಿ, ಉಪಾಧ್ಯಕ್ಷರಾಗಿ ಪಿಡ್ಡಪ್ಪ ಗಣಜಲಿ ಆಯ್ಕೆಯಾದರು. ಗ್ರಾಮದ ಹಿರಿಯರಾದ ಎ.ಬಿ.ಕೊಂಡಗೂಳಿ ಮಾತನಾಡಿ, ನಮ್ಮ ಸಂಘವು ಹಿಂದೆ ₹2 ಸಾವಿರದ ಶೇರ್‌ನಿಂದ ಪ್ರಾರಂಭವಾದ ಸಂಸ್ಥೆ ಇಂದಿನ ₹20 ಕೋಟಿಗಿಂತ ಹೆಚ್ಚು ವ್ಯವಹಾರ ಹೊಂದಿ ಹೆಮ್ಮರವಾಗಿ ಬೆಳೆದು ನಿಂತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಿಂದೆ ಆಡಳಿತ ವರ್ಗ ಮಾಡಿದ ಪರಿಶ್ರಮವೇ ಇದಕ್ಕೆ ಕಾರಣ. ಮುಂದೆ ಕೂಡಾ ಹೊಸ ಆಡಳಿತ ಮಂಡಳಿಯು ಸಂಘದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ತಾವುಗಳು ಕೆಲಸ ಮಾಡಬೇಕು ಎಂದು ತಿಳಿಸಿದರು.ಸಂಘದ ಮಾಜಿ ಅಧ್ಯಕ್ಷ ಜವಾಹರ್ ದೇಶಪಾಂಡೆ ಹಾಗೂ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಗುಂಡಪ್ಪಗೌಡ ಬಿರಾದಾರ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಭೀಮರಾಯಗೌಡ ಬಿರಾದಾರ ಗ್ರಾಮ ಪಂಚಾಯತಿ ಅಧ್ಯಕ್ಷ ಸಿದಗೊಂಡಪ್ಪಗೌಡ ಪಾಟೀಲ, ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ಆನಂದಿ, ನ್ಯಾಯವಾದಿ ಶ್ರೀಶೈಲ ಮುಳಜಿ ರಾಜುಸಾಹುಕಾರ ಚಂಡಕಿ, ಅಶೋಕ‌ ಸಾಹುಕಾರ ಸೂಳಿಬಾವಿ, ವಿಠ್ಠಲ ಸಾಹುಕಾರ ಕನ್ನೂಳ್ಳಿ, ತಾ.ಪಂ ಮಾಜಿ ಸದಸ್ಯರಾದ ವಿಠ್ಠಲ ದೇಗಿನಾಳ, ಸಂಘದ ನಿರ್ದೇಶಕರಗಳಾದ ಸೋಮನಗೌಡ ಪಾಟೀಲ ಕಡ್ಲೇವಾಡ, ಜಟ್ಟೇಪ್ಪಸಾಹುಕಾರ ಚಂಡಕಿ, ಸುಜಾತಾ ಬಾಗಲಕೋಟೆ, ಪುನ್ನಪ್ಪ ಖೈರಾವಿಕರ, ಹಣಮಂತ್ರಾಯ ಬಿರಾದಾರ, ಗುರಣ್ಣ ಅಂಜುಟಗಿ, ಚಂದ್ರಕಾಂತ ಬಿರಾದಾರ, ಲಕ್ಷ್ಮಣ ತಳಕೇರಿ, ಸುಂದ್ರಬಾಯಿ ನಾಟೀಕಾರ, ರಾಜಬಕ್ಸರ ಚಾಂದಕವಠೆ, ಶೇಖು ಗಣಜಲಿ, ವಿದ್ಯಾಧರ ಸಂಗೋಗಿ, ಕುಮಾರಗೌಡ ಬಿರಾದಾರ, ಹಣಮಂತ್ರಾಯ ಮುಳಜಿ, ಈರಣ್ಣಶಾಸ್ತ್ರಿ, ದಾದಾ ಸಿಂದಗಿ, ಮಹಾಂತೇಶ ಉಡಗಿ, ಚನ್ನಪ್ಪ ಬನಸೋಡೆ, ಬಾಬು ಖೋಜಗೀರ, ಜಾವೀದ್ ಕೊಲ್ಹಾರ, ಸಿದ್ದು ಬೋಳೆಗಾಂವ, ಮಲ್ಲಪ್ಪ ಮಾಶ್ಯಾಳ, ಶಿರಾಜ ಇನಮದಾರ ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.

ಅಧ್ಯಕ್ಷ, ಉಪಾಧ್ಯಕ್ಷರಿಂದ ಸಚಿವರಿಗೆ ಸನ್ಮಾನ

ದೇವರಹಿಪ್ಪರಗಿ: ತಾಲೂಕಿನ ಚಿಕ್ಕರೂಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಹಿನ್ನೆಲೆ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರು ಸಚಿವರಾದ ಶಿವಾನಂದ ಪಾಟೀಲ ಅವರನ್ನು ಭೇಟಿ ಮಾಡಿ ಸನ್ಮಾನಿಸಿ, ಸತ್ಕರಿಸಲಾಯಿತು. ಸಂಘದ ಅಧ್ಯಕ್ಷರಾದ ನಾಗಣ್ಣ ಮುಳಜಿ ಉಪಾಧ್ಯಕ್ಷರಾದ ಪಿಡ್ಡಪ್ಪ ಗಣಜಲಿ, ಮಾಜಿ ಅಧ್ಯಕ್ಷ ಭಿಮರಾಯಗೌಡ ಬಿರಾದಾರ, ಜವಾಹರ್ ದೇಶಪಾಂಡೆ, ಸೋಮನಗೌಡ ಪಾಟೀಲ ಕಡ್ಲೇವಾಡ, ನ್ಯಾಯವಾದಿ ಶ್ರೀಶೈಲ ಮುಳಜಿ ,ಸಂಘದ ಕಾರ್ಯನಿರ್ವಾಹಕ ಅಧಿಕಾರಿಯಾದ ಎಸ್.ಎಂ.ಆನಂದಿ, ಚಂದ್ರಕಾಂತ ಬಿರಾದಾರ, ಲಕ್ಷ್ಮಣ ತಳಕೇರಿ, ದಾದಾ ಸಿಂದಗಿ, ಶಂಕರಗೌಡ ಪಾಟೀಲ ಇದ್ದರು. ನಮ್ಮ ಸಂಘವು ಮೊದಲಿನಿಂದಲೂ ರೈತರ ಹಿತದೃಷ್ಟಿಯಿಂದ ನಾವು ಕೆಲಸ ಮಾಡುತ್ತ ಬಂದಿದ್ದು, ಮುಂದೆ ಕೂಡಾ ನಮ್ಮ ಆಡಳಿತ ಮಂಡಳಿಯು ಸಂಘದ ಅಭಿವೃದ್ಧಿಯತ್ತ ಸಾಗಲು ಕೆಲಸ ಮಾಡುತ್ತಾರೆ ಎಂದು ವಿಶ್ವಾಸವಿದೆ.

-ಜವಾಹರ್ ದೇಶಪಾಂಡೆ, ಸಂಘದ ಮಾಜಿ ಅಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!