ಲೀಡ್‌.. ನಾಗರಪಂಚಮಿ ಸಂಭ್ರಮ: ಹುತ್ತಕ್ಕೆ ಹಾಲೆರೆದ ಸುಮಂಗಲಿಯರು

KannadaprabhaNewsNetwork |  
Published : Aug 18, 2026, 01:30 AM IST
ಫೋಟೋಗಳು- ನಾಗರ ಪಂಚಮ | Kannada Prabha

ಸಾರಾಂಶ

ಪ್ರಶಾಂತ ನಗರದ ಹನ್ನೆರಡು ಜ್ಯೋತಿಲಿರ್ಂಗ ದೇಗುಲದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನಾಗರಪಂಚಮಿ ಹಬ್ಬವನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಶ್ರಾವಣ ಸೋಮವಾರದವಾದ್ದರಿಂದ ದೇವಸ್ಥಾನದ ಪ್ರಧಾನ ಅರ್ಚಕ ಮಹೇಶ್ವರ ಶಾಸ್ತ್ರಿಗಳಿಂದ ಶಿವನಿಗೆ ಮಹಾಭಿಷೇಕ ಹಾಗೂ ಮಹಾಮಂಗಳಾರತಿ ನಡೆಸಲಾಯಿತು.

- ಶ್ರೀ ಹನ್ನೆರಡು ಜ್ಯೋತಿಲಿರ್ಂಗ ದೇವಸ್ಥಾನದಲ್ಲಿ ಶ್ರದ್ಧಾ-ಭಕ್ತಿಯಿಂದ ನಾಗರಪಂಚಮಿ ಆಚರಣೆ । ಕಲ್ಲುನಾಗರ ಪ್ರತಿಮೆಗಳಿಗೆ ಪುಷ್ಪಾರ್ಚನೆ

----

ಕನ್ನಡಪ್ರಭ ವಾರ್ತೆ ಕಲಬುರಗಿ

ನಗರ ಹಾಗೂ ಜಿಲ್ಲಾದ್ಯಂತ ನಾಗರ ಪಂಚಮಿ ಹಬ್ಬವನ್ನು ಮಹಿಳೆಯರು ಸಂಭ್ರಮದಿಂದ ಆಚರಿಸಿದರು.

ತಮ್ಮ ಮನೆಗಳ ಸುತ್ತಲಿರುವ ನಾಗರ ಹುತ್ತಗಳಿಗೆ ಹಾಲೆರೆದರು. ಕಲ್ಲಿನ ನಾಗರ ಪ್ರತಿಮೆಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು.

ಶಿಲಾ ನಾಗರಗಲಿರುವ ಮಂದಿರಕ್ಕೆ ತೆರಳಿ ಮಹಿಳೆಯರು ಭಕ್ತಿ ಭಾವದಿಂದ ನಮಿಸಿದರು.

ಪ್ರಶಾಂತ ನಗರದ ಹನ್ನೆರಡು ಜ್ಯೋತಿಲಿರ್ಂಗ ದೇಗುಲದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನಾಗರಪಂಚಮಿ ಹಬ್ಬವನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಶ್ರಾವಣ ಸೋಮವಾರದವಾದ್ದರಿಂದ ದೇವಸ್ಥಾನದ ಪ್ರಧಾನ ಅರ್ಚಕ ಮಹೇಶ್ವರ ಶಾಸ್ತ್ರಿಗಳಿಂದ ಶಿವನಿಗೆ ಮಹಾಭಿಷೇಕ ಹಾಗೂ ಮಹಾಮಂಗಳಾರತಿ ನಡೆಸಲಾಯಿತು.

ಚಿತ್ತಪುರದಲ್ಲಿ ನಾಗರ ಮೂರ್ತಿಗಳಿಗೆ ಹಾಲೆರೆದು ಭಕ್ತಿಭಾವ ಅರ್ಪಿಸಿದ ಮಹಿಳೆಯರು

ಚಿತ್ತಾಪುರ ಸೇರಿದಂತೆ ತಾಲೂಕಿನಾದ್ಯಂತ ಸಡಗರ ಸಂಭ್ರಮದಿಂದ ನಾಗರಪಂಚಮಿ ಹಬ್ಬ ಆಚರಿಸಲಾಯಿತು.

ಪಟ್ಟಣದ ರಾಯಲ್ ಮೈದಾನದಲ್ಲಿ ನಾಗರ ಮೂರ್ತಿಗಳಿಗೆ ಮಹಿಳೆಯರು ವಿವಿಧ ಬತ್ತಿಗಳಿಂದ ನಾಗರ ಮೂರ್ತಿಗೆ ಅಲಂಕಾರ ಮಾಡಿದರು.

ನಂತರ ಕುಟುಂಬದ ಸದಸ್ಯರು ಹಾಲೆರೆದು ಭಕ್ತಿಭಾವ ಅರ್ಪಿಸಿದರು. ಕರ್ಪೂರ ಬೆಳಗಿ ಹೂವು ಕಾಯಿ ಅರ್ಪಿಸಿ, ಪ್ರಾರ್ಥನೆ ಸಲ್ಲಿಸಿದರು.

ಅಳ್ಳು, ಕಡಲೆ ಗುಗ್ಗರಿ, ಶೇಂಗಾದ ಉಂಡೆ, ತಂಬಿಟ್ಟು ಕಡಲೆಕಾಳು ಪಲ್ಲೆ ಮುಟಿಗಿ ಉಂಡಿಗಳನ್ನು ನಾಗರ ಮೂರ್ತಿಗೆ ನೈವೇದ್ಯ ಸಲ್ಲಿಸಿದರು.

ಕಲ್ಲಿನ ನಾಗರಕ್ಕೆ ಹಾಲೆರೆದು, ಮಹಿಳೆಯರು, ಹೆಣ್ಣು ಮಕ್ಕಳು ಉಪವಾಸ ಮಾಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ತಮ್ಮ ಆಪ್ತರಿಗೆ, ಬಂಧುಗಳಿಗೆ ಕುಪ್ಪಸ, ಕೊಬ್ಬರಿ, ಅಳ್ಳಿಟ್ಟು ಮತ್ತು ಗುಗ್ಗರಿ ಕೊಟ್ಟರು. ಹಬ್ಬಕ್ಕೆ ತಯಾರಿಸಿದ ಖಾದ್ಯಗಳನ್ನು ಪರಸ್ಪರ ಹಂಚಿಕೊಂಡು ಸವಿದರು.

ಪಂಚಮಿ ಅಂಗವಾಗಿ ಯುವಕರು ಭಾರ ಎತ್ತುವುದು, ನಿಗದಿಪಡಿಸಿದ ಗುರಿಯತ್ತ ನಿಂಬೆ ಹಣ್ಣು, ತೆಂಗಿನ ಕಾಯಿ ಎಸೆಯುವುದು, ಕಣ್ಣಿಗೆ ಬಟ್ಟೆ ಕಟ್ಟಿ ಸ್ಥಳ ಗುರುತಿಸುವುದು, ಎತ್ತಿನ ಗಾಡಿಗಳನ್ನು ಜಗ್ಗುವ ಸಾಹಸದ ಬಾಜಿ ಕಟ್ಟಿ ಸಂಭ್ರಮಿಸಿದರು.

ಮಕ್ಕಳಿಗೆ ಹಾಲು ಕುಡಿಸಿ ಬಸವ ಪಂಚಮಿ ಆಚರಣೆ

ನಾಗರ ಪಂಚಮಿ ದಿನವೇ ಪ್ರಭುದೇವ ನಗರದಲ್ಲಿ ಮಕ್ಕಳಿಗೆ ಹಾಲು ಕುಡಿಸಿ ನಾಗರ ಪಂಚಮಿ ಆಚರಿಸಲಾಯಿತು. ನೀಲಂಠೇಶ್ವರ ಶಾಲೆ’ಯ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದಿಂದ ಏರ್ಪಡಿಸಿದ್ದ ‘ಬಸವ ಪಂಚಮಿ ಪ್ರಯುಕ್ತ ಬಡಾವಣೆಯ ಮಕ್ಕಳಿಗೆ ಹಾಲು ಕುಡಿಸುವ ಕಾರ್ಯಕ್ರಮ ಮತ್ತು ಶರಣೆ ಅಕ್ಕನಾಗಮ್ಮನವರ ಜಯಂತಿಯಲ್ಲಿ ಅನೇಕರು ಪಾಲ್ಗೊಂಡಿದ್ದರು.

ಚಿಂತಕರಾದ ಎಚ್‌ಬಿ ಪಾಟೀಲ್‌, ಷಣ್ಮುಖ್ಯಯ್ಯ ಹಿರೇಮಠ, ಡಾ.ರಾಜಶೇಖರ ಪಾಟೀಲ್, ಶಿವಲಿಂಗಪ್ಪ ಸಂಗೋಳಗಿ ಮಾತನಾಡಿ, ಪ್ರತಿವರ್ಷ ನಾಗರ ಪಂಚಮಿ ನೆಪದಲ್ಲಿ ಲಕ್ಷಾಂತರ ಲೀಟರ್‌ ಹಾಲು ಹುತ್ತಕ್ಕೆ, ನಾಗರ ಪ್ರತಿಮೆಗಳಿಗೆ ಸುರಿದು ಪೋಲು ಮಾಡಲಾಗುತ್ತಿದೆ. ಅದನ್ನೇ ಮಕ್ಕಳಿಗೆ ಕುಡಿಯಲು ಕೊಡಬೇಕೆಂದರು.

ಶಿವಯೋಗೆಪ್ಪಾ ಬಿರಾದಾರ, ದಿನೇಶ್ ಮಿಶ್ರಾ, ಪಂಡಿತರಾವ ಪಾಟೀಲ್, ಗುಂಡೇರಾವ್ ಪಾಟೀಲ್, ಸಂಗಣ್ಣ ಪಾಟೀಲ್, ಮಂಜುನಾಥ ಅಂಬಾಜಿ, ಸಂಗಮೇಶ ಕಡಗಂಚಿ, ಮಲ್ಲಿಕಾರ್ಜುನ ಮೇತ್ರೆ, ಮಹೇಶ ನಾಗೂರೆ, ಶಂಕರ ಮೂಲಗೆ, ಗುಂಡುರಾವ್ ಶೀಲವಂತ, ರಾಚಣ್ಣ, ಈರಣ್ಣ ಸೇರಿದಂತೆ ಬಡಾವಣೆಯ ಅನೇಕರು ಭಾಗವಹಿಸಿದ್ದರು.

ಫೋಟೋಗಳು

ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ನಾಗರ ಪಂಚಮಿ ಹಬ್ಬವನ್ನು ಮಹಿಳೆಯರು ಸಂಭ್ರಮದಿಂದ ಆಚರಿಸಿದರು. ತಮ್ಮ ಮನೆಗಳ ಸಮೀಪದಲ್ಲಿರುವ ನಾಗರ ಹುತ್ತಗಳಿಗೆ ಹಾಲೆರೆದರು. ಮತ್ತೆ ಕೆಲವರು ಕಲ್ಲಿನ ನಾಗರ ಪ್ರತಿಮೆಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಿಡಲ್‌ ಪಕ್ಕ...ಕಮಲನಗರದಲ್ಲಿ ಸಂಭ್ರಮದ ನಾಗರ ಪಂಚಮಿ
ದೇವೇಗೌಡರ ಮುಖ ತೋರಿಸದೇ ಗೆದ್ದು ಬನ್ನಿ