ಕಾರೇಹಳ್ಳಿ ಸೊಸೈಟಿ ನೂತನ ಅಧ್ಯಕ್ಷರಾಗಿ ನಾಗೇಶ್ ಆಯ್ಕೆ

KannadaprabhaNewsNetwork |  
Published : Sep 05, 2025, 01:00 AM IST
4ಎಚ್ಎಸ್ಎನ್6 : ಬಾಗೂರು  ಹೋಬಳಿಯ  ಕಾರೇಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ  ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ  ಬುಧವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ  ರೇಚಿಹಳ್ಳಿ ಗ್ರಾಮದ ನಾಗೇಶ್ ಆರ್‌ಜಿ ಹಾಗೂ ಉಪಾಧ್ಯಕ್ಷರಾಗಿ  ಸಿದ್ದೇಗೌಡ( ಗಣೇಶ್) ಅವಿರೋಧವಾಗಿ  ಆಯ್ಕೆಗೊಂಡ ಅವರನ್ನು  ಸಂಘದ ನಿರ್ದೇಶಕರು ಮುಖಂಡರುಗಳು  ಅಭಿನಂದಿಸಿದರು. | Kannada Prabha

ಸಾರಾಂಶ

ಕಾರೇಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ರೇಚಿಹಳ್ಳಿ ಗ್ರಾಮದ ನಾಗೇಶ್ ಆರ್‌.ಜಿ. ಹಾಗೂ ಉಪಾಧ್ಯಕ್ಷರಾಗಿ ಸಿದ್ದೇಗೌಡ( ಗಣೇಶ್) ಅವಿರೋಧವಾಗಿ ಆಯ್ಕೆಯಾದರು. ಜಿಲ್ಲಾ ಬ್ಯಾಂಕ್ ನ ನಿರ್ದೇಶಕ ಸಿ.ಎನ್. ಬಾಲಕೃಷ್ಣರವರ ಸಹಕಾರದಿಂದ ಕೃಷಿ ಪತ್ತಿನ ಷೇರುದಾರ ರೈತರಿಗೆ 4 ಕೋಟಿಗೂ ಹೆಚ್ಚು ಸಾಲ ನೀಡಲಾಗಿದೆ, ಮುಂಬರುವ ದಿನಗಳಲ್ಲಿ ಹೆಚ್ಚುವರಿಯಾಗಿ 1 ಕೋಟಿ ಸಾಲವನ್ನು ತಂದು ಹೊಸ ಷೇರುದಾರ ರೈತರಿಗೆ ಸಾಲ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಹೋಬಳಿಯ ಕಾರೇಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ರೇಚಿಹಳ್ಳಿ ಗ್ರಾಮದ ನಾಗೇಶ್ ಆರ್‌.ಜಿ. ಹಾಗೂ ಉಪಾಧ್ಯಕ್ಷರಾಗಿ ಸಿದ್ದೇಗೌಡ( ಗಣೇಶ್) ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಗಂಗಾಧರಯ್ಯ ಜೆ. ಹಾಗೂ ಉಪಾಧ್ಯಕ್ಷರಾಗಿದ್ದ ಕವಿತಾ ವಿಜೇಶ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ನಾಗೇಶ್ ಆರ್. ಜಿ. ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಿದ್ದೇಗೌಡ( ಗಣೇಶ್) ನಾಮಪತ್ರ ಸಲ್ಲಿಸಿದರು. ಇವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ವಿಜಯೇಂದ್ರ ಘೋಷಿಸಿದರು.

ನೂತನ ಅಧ್ಯಕ್ಷ ನಾಗೇಶ್ ಆರ್. ಜಿ. ಮಾತನಾಡಿ, ಈಗಾಗಲೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಈ ಭಾಗದ ರೈತರಿಗೆ ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಬ್ಯಾಂಕ್ ನ ನಿರ್ದೇಶಕ ಸಿ.ಎನ್. ಬಾಲಕೃಷ್ಣರವರ ಸಹಕಾರದಿಂದ ಕೃಷಿ ಪತ್ತಿನ ಷೇರುದಾರ ರೈತರಿಗೆ 4 ಕೋಟಿಗೂ ಹೆಚ್ಚು ಸಾಲ ನೀಡಲಾಗಿದೆ, ಮುಂಬರುವ ದಿನಗಳಲ್ಲಿ ಹೆಚ್ಚುವರಿಯಾಗಿ 1 ಕೋಟಿ ಸಾಲವನ್ನು ತಂದು ಹೊಸ ಷೇರುದಾರ ರೈತರಿಗೆ ಸಾಲ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷ ಕೆ. ಎ. ಸತೀಶ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಕೆ ಟಿ ನಟೇಶ್, ಗುತ್ತಿಗೆದಾರ ರಾಮಚಂದ್ರ, ಉದ್ಯಮಿ ಚಿಪ್ಪಿನ ಚಂದ್ರು, ಕೃಷಿ ಪತ್ತಿನ ನಿರ್ದೇಶಕರಾದ ಕೆ.ಬಿ. ನಟರಾಜ್, ಸಿಡಿ ರೇವಣ್ಣ, ಕೆ.ಎನ್. ಪುನೀತ್, ಕೆ.ಎಸ್. ದೇವರಾಜ್, ಗಂಗಾಣ್ಣಮ್ಮ ರಾಜಣ್ಣ, ಸಿ.ಎಂ. ಚಿಕ್ಕೇಗೌಡ, ಎಚ್. ಎಚ್. ಶಿವಸ್ವಾಮಿ, ಕೃಷಿ ಪತ್ತಿನ ಸಿಇಒ ಎಸ್. ಕೆ. ರಾಜೇಶ್, ಮುಖಂಡರಾದ ಬ್ಯಾಂಕ್ ಚಂದ್ರು, ಎ.ಟಿ. ಶಿವಣ್ಣ, ಉಮಯಿನ್, ಗ್ಯಾಸ್ ಮುಮ್ತಾಜ್ , ಸಮೀವುಲ್ಲಾ, ಸುಜಾತ ನಾಗೇಶ್, ಸಿ.ಜೆ. ಕುಮಾರ್, ವಿಜಯಕುಮಾರ್, ಹೊಸೂರು ಚಂದ್ರಪ್ಪ, ಧನಂಜಯ್, ಅಂಗಡಿ ಜಗದೀಶ್, ಸುರೇಶ್, ಬಸವಣ್ಣ, ರವಿಶಂಕರ್, ಕಾಂತರಾಜ್, ಗಿರೀಶ್, ಕುಂಠು ಲಕ್ಕಪ್ಪ, ನಂಜ ಮರಿ, ಆರ್. ಜಿ. ಜಗದೀಶ್, ನಾಗೇಶ್, ವಿಶ್ವನಾಥ್, ಬಸವಲಿಂಗ ಸೇರಿ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು