ನಾಲಾ ತೂಬು ದುರಸ್ತಿ: 1 ಕೋಟಿ ರು. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ

KannadaprabhaNewsNetwork |  
Published : Jun 16, 2025, 11:59 PM ISTUpdated : Jun 17, 2025, 12:00 AM IST
16ಕೆಎಂಎನ್‌ಡಿ-3ಮಂಡ್ಯ ತಾಲೂಕಿನ ವಿವಿಧೆಡೆ ನಾಲೆಗಳು ಮತ್ತು ನಾಲಾ ತೂಬುಗಳ ದುರಸ್ತಿ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್‌ ಗುದ್ದಲಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

15 ತೂಬುಗಳು ದುರಸ್ತಿ ಆದರೆ ರೈತರಿಗೆ ಅನುಕೂಲವಾಗಲಿದೆ. ಕುಣಿಗಲ್‌ ಎಕ್ಸ್‌ಪ್ರೆಸ್‌ ನಾಲೆಯಿಂದ ಬಸರಾಳು ಭಾಗಕ್ಕೆ ನೀರು ಬರಲು ತೊಂದರೆ ಆಗುತ್ತಿದ್ದು, ಮಾಗಡಿ, ರಾಮನಗರ ಹಾಗೂ ಚನ್ನಪಟ್ಟಣಕ್ಕೆ ತೆಗೆದುಕೊಂಡು ಹೋದರೆ ತೊಂದರೆ ಆಗುತ್ತದೆ. ಇದನ್ನು ಕೈಬಿಡಬೇಕು. ಇಲ್ಲವಾದರೆ ಮಂಡ್ಯ ರೈತರ ವಿರೋಧವನ್ನು ಎದುರಿಸಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಬಂಡಾರೆಕೊಪ್ಪಲು, ಹುಲ್ಲಹಳ್ಳಿ, ವಿಸ್ತೀರ್ಣ ನಾಲೆಗಳ, ನಾಲಾ ತೂಬುಗಳ ದುರಸ್ತಿ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್‌ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಪಿ.ರವಿಕುಮಾರ್‌ಗೌಡ, ಬಂಡಾರೆಕೊಪ್ಪಲು, ಹಟ್ನಾ, ಹುನುಗನಹಳ್ಳಿ, ಬೇಬಿ ಹಾಗೂ ಬಸರಾಳುವಿನ ತೂಬುಗಳ ದುರಸ್ತಿ ಕಾಮಗಾರಿಗೆ ಸರ್ಕಾರವು 1 ಕೋಟಿ ರು. ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗಿದೆ ಎಂದರು.

15 ತೂಬುಗಳು ದುರಸ್ತಿ ಆದರೆ ರೈತರಿಗೆ ಅನುಕೂಲವಾಗಲಿದೆ. ಕುಣಿಗಲ್‌ ಎಕ್ಸ್‌ಪ್ರೆಸ್‌ ನಾಲೆಯಿಂದ ಬಸರಾಳು ಭಾಗಕ್ಕೆ ನೀರು ಬರಲು ತೊಂದರೆ ಆಗುತ್ತಿದ್ದು, ಮಾಗಡಿ, ರಾಮನಗರ ಹಾಗೂ ಚನ್ನಪಟ್ಟಣಕ್ಕೆ ತೆಗೆದುಕೊಂಡು ಹೋದರೆ ತೊಂದರೆ ಆಗುತ್ತದೆ. ಇದನ್ನು ಕೈಬಿಡಬೇಕು. ಇಲ್ಲವಾದರೆ ಮಂಡ್ಯ ರೈತರ ವಿರೋಧವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಎಕ್ಸ್‌ಪ್ರೆಸ್‌ ನಾಲಾ ಕಾಮಗಾರಿ ನಿಲ್ಲಬೇಕು ಎಂದು ಎಚ್ಚರಿಕೆ ನೀಡಿದರು.

ಪ್ರಥಮ ದರ್ಜೆ ಗುತ್ತಿಗೆದಾರ ಜಿ.ಬಿ.ಭೈರವ, ಗ್ರಾಮ ಪಂಚಾಯ್ತಿ ಸದಸ್ಯೆ ನಿಂಗಮ್ಮ, ಗ್ರಾಮ ಆಡಳಿತ ಲೆಕ್ಕಾಧಿಕಾರಿ ರವಿಕುಮಾರ್‌, ಮುಖಂಡರಾದ ಕೃಷ್ಣೇಗೌಡ, ನಾಗೇಗೌಡ, ರಾಮಲಿಂಗೇಗೌಡ, ಮಾರಸೀಗೌಡ, ದುಬೈ ಕೃಷ್ಣೇಗೌಡ ಭಾಗವಹಿಸಿದ್ದರು.

ಕಮ್ಮನಾಯಕನಹಳ್ಳಿ ಡೈರಿ ಚುನಾವಣೆ: ಮೈತ್ರಿಕೂಟದ ಬೆಂಬಲಿತರಿಗೆ ಗೆಲುವು

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಕಮ್ಮನಾಯಕನಹಳ್ಳಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಮಮತಾ ಟಿ.ಕೆ.ಸಿದ್ದರಾಜು, ಉಪಾಧ್ಯಕ್ಷರಾಗಿ ಪವಿತ್ರ ಕೆ.ಮಹೇಶ್ ಅವಿರೋಧವಾಗಿ ಆಯ್ಕೆಯಾದರು.

ಜಿದ್ದಾಜಿದ್ದಿನಿಂದ ಕೂಡಿದ ಡೈರಿ ಚುನಾವಣೆಯಲ್ಲಿ 8 ಸ್ಥಾನಗಳ ಪೈಕಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಕೂಟದಿಂದ 7 ಸ್ಥಾನಗಳಲ್ಲಿ ಮಮತಾ, ಪವಿತ್ರ, ರಾಧಿಕಾ ಸಿ., ಮಂಜುಳ, ಭಾರತಿ, ಮೀನಾ, ರಶ್ಮಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಬೆಂಬಲಿತ 1 ಸ್ಥಾನಗಳಲ್ಲಿ ಮಾತ್ರ ಗೆಲವು ಸಾಧಿಸಿದ್ದರು.

ಸೋಮವಾರ ಡೈರಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮೈತ್ರಿಕೂಟದ ಮಮತಾ ಟಿಕೆ ಸಿದ್ದರಾಜು ಅಧ್ಯಕ್ಷರಾಗಿ, ಪವಿತ್ರ ಮಹೇಶ್ ಕೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ನಂತರ ಮುಖಂಡರು, ಗ್ರಾಮಸ್ಥರು ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು. ಈ ವೇಳೆ ಮುಖಂಡರಾದ ನಿಂಗೇಗೌಡ, ಶಂಕರೇಗೌಡ, ಟಿ.ಡಿ.ದೇವೇಗೌಡ, ಮಹೇಶ್ ಕೆ.ಡಿ, ಜಯಪ್ರಕಾಶ್, ಪ್ರದೀಪ್, ರಾಜು, ನಾಗೇಶ್, ದೇಶಿ ಗೌಡ, ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರುಗಳು, ಗ್ರಾಮಸ್ಥರು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ