ಕನ್ನಡಪ್ರಭ ವಾರ್ತೆ ಮೈಸೂರು
ಮಹಿಳಾ ವಿಶೇಷ. ಜಿಲ್ಲಾ ಕಸಾಪ ಹಾಗೂ ಅಸೋಸಿಯೇಷನ್ ಆಫ್ ಅಲೈಯನ್ಸ್ ಕ್ಲಬ್ ಸರಸ್ವತಿಪುರಂ ವತಿಯಿಂದ ವಿಜಯನಗರ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ತಾಯಂದಿರ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಯಿಯವರ ಸ್ಫೂರ್ತಿಯಿಂದಲೇ ನಾಲ್ವಡಿಯವರು ಕನ್ನಂಬಾಡಿ ಕಟ್ಟೆ, ಮಾರಿಕಣಿವೆ ಜಲಾಶಯ ಮತ್ತಿತರವುಗಳನ್ನು ಕಟ್ಟಿಸಿದರು. ಶಿವಾಜಿ ಮಹಾರಾಜ್ ಶತ್ರುಗಳಿಂದ ದೇಶವನ್ನು ಕಾಪಾಡಿದರು. ಸ್ವಾಮಿ ವಿವೇಕಾನಂದರು ವಿಶ್ವದೆಲ್ಲೆಡೆ ಭಾತೃತ್ವ ಪಸರಿಸಿದರು ಎಂದರು.
ಹೀಗಾಗಿ ಪ್ರತಿಯೊಬ್ಬರೂ ತಾಯಂದಿರನ್ನು ಸದಾಕಾಲ ಸ್ಮರಿಸಬೇಕು. ಕೊನೆಗಾಲದವರೆಗೂ ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.ಸ್ರ್ತೀ ಎಂದರೇ ಶಕ್ತಿ. ತಾಯಿಯೇ ದೇವರು. ತಾಯಿ ಒಬ್ಬರಿದ್ದರೆ ಯಾವುದೇ ದೇವರು ಬೇಕಾಗಿಲ್ಲ. ಆದರೂ ಎಷ್ಟೇ ಮಂದಿ ತಾಯಿಯ ತ್ಯಾಗವನ್ನು ಮರೆತು ವೃದ್ಶಾಶ್ರಮಗಳಿಗೆ ಹಾಕಿದ್ದಾರೆ. ಅವರ ಕಣ್ಣೀರಿನ ಕಥೆ ಕೇಳಿದರೆ ವ್ಯಥೆಯಾಗುತ್ತದೆ. ಯಾವ ತಾಯಿಗೂ ಈ ಪರಿಸ್ಥಿತಿ ಬರಬಾರದು. ಈ ರೀತಿ ಆತ್ಮವಂಚನೆ ಮಾಡಿಕೊಂಡು ಯಾವ ಮಕ್ಕಳೂ ಬದುಕಾಟ ನಡೆಸಬಾರದು ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಅಸೋಸಿಯೇಷನ್ ಆಫ್ ಅಲೆಯನ್ಸ್ ಕ್ಲಬ್ ಸರಸ್ವತಿಪುರಂ ಅಧ್ಯಕ್ಷ ಎಸ್. ವೆಂಕಟರವಣಪ್ಪ, ಮಾತನಾಡುವ ಗೊಂಬೆ ಖ್ಯಾತಿಯ ಸುಮಾ ರಾಜಕುಮಾರ್, ದಂತ ವೈದ್ಯೆ ಡಾ.ಪಾಯಲ್ ಮುಖ್ಯ ಅತಿಥಿಗಳಾಗಿದ್ದರು. ಕಸಾಪ ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಕೋಶಾಧ್ಯಕ್ಷ ಜಿ. ಪ್ರಕಾಶ್ ಮೊದಲಾದವರು ಇದ್ದರು. ಶಿಕ್ಷಣ ತಜ್ಞ, ಕಾರ್ಯಕ್ರಮ ಸಂಘಟಕ ಎಚ್.ವಿ.ಸುಬ್ಬರಾವ್ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು.