ಪ್ರಮುಖ ವೃತ್ತಗಳಿಗೆ ಗಣ್ಯರ ಹೆಸರಿಡಿ

KannadaprabhaNewsNetwork |  
Published : Nov 13, 2025, 12:05 AM IST
12ಕೆಆರ್ ಎಂಎನ್ 3.ಜೆಪಿಜಿರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರಿಗೆ ಶಾಂತಲಾ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಕವಿತಾರಾವ್ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ರಾಮನಗರ: ಜಿಲ್ಲಾ ಕೇಂದ್ರ ರಾಮನಗರದ ಪ್ರಮುಖ ವೃತ್ತಗಳಿಗೆ ಗಣ್ಯರ ಹೆಸರುಗಳನ್ನು ಇಡಬೇಕು ಎಂದು ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಮನಗರ: ಜಿಲ್ಲಾ ಕೇಂದ್ರ ರಾಮನಗರದ ಪ್ರಮುಖ ವೃತ್ತಗಳಿಗೆ ಗಣ್ಯರ ಹೆಸರುಗಳನ್ನು ಇಡಬೇಕು ಎಂದು ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಮನಗರದಲ್ಲಿ ಹಲವಾರು ಲೇಖಕರು ಮತ್ತು ಚಿಂತಕರು ಜನ್ಮ ತಾಳಿದ್ದಾರೆ. ಡಾ.ಜಿ.ಪಿ.ರಾಜರತ್ನಂ ಅವರು ರಾಮನಗರದ ಅಗ್ರಹಾರದಲ್ಲಿ ಜನಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧಿಯಾಗಿದ್ದಾರೆ ಎಂದು ಶಾಂತಲಾ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಕವಿತಾರಾವ್ ತಿಳಿಸಿದರು.

ಹಾಗೆಯೇ ಧ್ವನ್ಯಾಲೋಕ ಖ್ಯಾತಿಯ ಪ್ರೊ. ಸಿ.ಡಿ.ನರಸಿಂಹಯ್ಯ (ಕ್ಲೋಸ್ ಪೇಟೆ ದಾಸಪ್ಪ ನರಸಿಂಹಯ್ಯ) ರಾಮನಗರದಲ್ಲಿ ಜನಿಸಿದವರು. ಆಗ ರಾಮನಗರವು ಕ್ಲೋಸ್ಪೇಟೆ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಸಿ.ಡಿ.ನರಸಿಂಹಯ್ಯ ಭಾರತೀಯ ಇಂಗ್ಲಿಷ್ನ ಪ್ರಸಿದ್ಧ ಲೇಖಕರು. ಇವರು ಇಂಗ್ಲಿಷ್ ಸಾಹಿತ್ಯ ಬೋಧನೆ ಹಾಗೂ ಖಚಿತ ವಿಮರ್ಶಾ ನಿಲವುಗಳಿಂದ ಭಾರತೀಯ ಸಾಹಿತ್ಯ ವಲಯದಲ್ಲಿ ಸಿಡಿಎನ್ ಎಂದೇ ಖ್ಯಾತರಾದವರು. ಮೈಸೂರು ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ವ್ಯಾಸಂಗ ಮುಗಿಸಿ ಅನಂತರದಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾನಿಯಲದಲ್ಲಿ ರಾಕ್ಫೆಲ್ಲರ್ ಶಿಷ್ಯವೇತನ ಪಡೆದುಕೊಂಡಿದ್ದಾರೆ ಎಂದರು.

ಮಹಾತ್ಮಗಾಂಧೀಜಿ ರಾಮನಗರಕ್ಕೆ ಬಂದು ಹೋಗಲು ಕಾರಣರಾದ ಗಾಂಧಿ ಕೃಷ್ಣಯ್ಯ ಅವರ ಹೆಸರನ್ನು ಸೇರಿದಂತೆ ರಾಮನಗರದಲ್ಲಿ ಜನಿಸಿದ ಮಹನೀಯರ ಹೆಸರುಗಳನ್ನು ನಗರದ ಪ್ರಮುಖ ವೃತ್ತಗಳಿಗೆ ಇಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ನಿಜಾಮುದ್ದೀನ್ ಷರೀಫ್ , ನರಸಿಂಹ, ಅಕ್ಲಿಂ ಮತ್ತಿತರರು ಹಾಜರಿದ್ದರು.

12ಕೆಆರ್ ಎಂಎನ್ 3.ಜೆಪಿಜಿ

ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರಿಗೆ ಶಾಂತಲಾ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಕವಿತಾರಾವ್ ಅವರಿಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ
ಜನಾಶೀರ್ವಾದದಿಂದ ದೀರ್ಘಾವಧಿ ಸಿಎಂ : ಸಿದ್ದು