-ಸ್ಮಾಲ್ ಕಿಕ್ಕರ್
--
-ಅದ್ಧೂರಿ ಕಾವ್ಯ ಮಹಿಳಾ ಸಮ್ಮೇಳನ: ನೂರಾರು ಜನ ಕವಯಿತ್ರಿಯರ ಸಮಾಗಮ--
ಸಮಾಜ ಪ್ರಗತಿಗೆ ಸ್ತ್ರೀವಾದಿ ಸಾಹಿತ್ಯ ಪೂರಕ. ಜಿಲ್ಲೆಯಲ್ಲಿ ಮಹಿಳಾ ಬರಹಗಾರರ ಕೊರತೆಯಿಲ್ಲ. ಆದರೆ ಮಹಿಳಾ ಸಾಹಿತಿಗಳಿಗೆ ವೇದಿಕೆಯ ಕೊರತೆ, ಅಕಾಡೆಮಿಗಳಲ್ಲಿ ಸ್ಥಾನಮಾನ ದೊರೆಯುತ್ತಿಲ್ಲ. ನಶಿಸುತ್ತಿರುವ ಮಹಿಳಾ ವಚನಕಾರ್ತಿಯರ ಸ್ಮಾರಕಗಳು, ದೇಗುಲಗಳ ಸಂರಕ್ಷಣೆ ಅವಶ್ಯವಾಗಿದೆ. ಈ ದಿಸೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸಮ್ಮೇಳನಾಧ್ಯಕ್ಷ ಶಕುಂತಲಾ ಪಾಟೀಲ ಜಾವಳಿ ಮನವಿ ಮಾಡಿದರು.
ಜಿಲ್ಲಾ , ತಾಲೂಕು ಕಸಾಪ , ಮಹಿಳಾ ನೌಕರರ ಸಂಘ, ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ನಿಂಬೆವ್ವ ಪಡಶೆಟ್ಟಿ ವೇದಿಕೆಯಡಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ ಕಲಬುರಗಿ ಜಿಲ್ಲಾ ಪ್ರಥಮ ಕಾವ್ಯ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷತೆವಹಿಸಿ ಮಾತನಾಡಿದರು.
ಸಮ್ಮೇಳನವನ್ನು ಸಿಯುಕೆ ಪ್ರಾಧ್ಯಾಪಕಿ ಡಾ. ಜಯದೇವಿ ಜಂಗಮಶೆಟ್ಟಿ ಉದ್ಘಾಟಿಸಿದರು.
ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ. ಅಮರೇಶ್ವರಿ ಬಾಬುರಾವ್ ಚಿಂಚನಸೂರ ಶಕ್ತಿ ಸಿಂಚನ ಕೃತಿ ಬಿಡುಗಡೆಗೊಳಿಸಿದರು. ಜಗದೀಶ್ವರಿ ನಾಸಿ, ರೇಣುಕಾ ಡಾಂಗೆ, ನಂದಿನಿ ಸನಬಾಳ, ಶಿವಲೀಲಾ ಕಲಗುರ್ಕಿ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಕುಪೇಂದ್ರ ಬರಗಾಲಿ, ವಿಶಾಲಾಕ್ಷಿ ಮಾಯಣ್ಣವರ್, ರಾಜೇಂದ್ರ ಮಾಡಬೂಳ, ಬಾಬುರಾವ ಪಾಟೀಲ, ಗಣೇಶ ಚಿನ್ನಾಕಾರ, ಎಸ್.ಕೆ. ಬಿರಾದಾರ, ಸುರೇಶ ಲೇಂಗಟಿ, ಸುರೇಶ ದೇಶಪಾಂಡೆ, ಭುವನೇಶ್ವರಿ ಹಳ್ಳಿಖೇಡ, ಶಾರದಾ ಆವಟೆ, ಮಾಯಾದೇವಿ ತುರಂಗ, ಜಗದೀಶ ಮರಪಳ್ಳಿ, ವಿದ್ಯಾಸಾಗರ ದೇಶಮುಖ, ಕಲ್ಯಾಣಕುಮಾರ ಶೀಲವಂತ ಮಾತನಾಡಿದರು.
ಗೋಷ್ಟಿಯಲ್ಲಿ ಮಹಿಳೆ ಮತ್ತು ಮೂಢನಂಬಿಕೆ ಕುರಿತು ಡಾ. ಶಿವಲೀಲಾ ಚಟ್ನಳ್ಳಿ, ಸಮಾಜದ ಕಣ್ಣು ತೆರೆಸುವಲ್ಲಿ ಸ್ತ್ರೀವಾದಿ ಸಾಹಿತ್ಯದ ಪಾತ್ರ ಡಾ. ಕಾವ್ಯಶ್ರೀ ಮಹಾಗಾಂವಕರ್ ಮಾತನಾಡಿದರು. ಲೇಖಕಿ ಡಾ. ಕರುಣಾ ಜಮದರಖಾನಿ ಅಧ್ಯಕ್ಷತೆಯಲ್ಲಿ ನಡೆದ ಶಕ್ತಿ ಕವಿಗೋಷ್ಠಿಯಲ್ಲಿ ನೀತಾ ಡಿ ಕಾಬಾ ಅವರ ಅವಳು ವೇಶ್ಯೆ ಅಲ್ಲ ಕವನ ಕೇಳುಗರ ಮನ ಸೆಳೆಯಿತು.
ಫೋಟೋ- ಕಾವ್ಯ 1 ಮತ್ತು ಕಾವ್ಯ 2