ನೊಬೆಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ನಾಲ್ಕು ತಿಂಗಳ ಮಗುವಿನ ಹೆಸರು

KannadaprabhaNewsNetwork |  
Published : Oct 03, 2024, 01:19 AM IST
ಶಾಸಕರಾದ ಟಿ ರಘುಮೂರ್ತಿ ಅವರು ಮಗುವಿಗೆ ಪ್ರಮಾಣ ಪತ್ರವನ್ನು ನೀಡುವುದರ ಮೂಲಕ ಗೌರವ ಸಲ್ಲಿಸಿದರು  | Kannada Prabha

ಸಾರಾಂಶ

ಹೋಬಳಿಯ ಕಾಮಸಮುದ್ರ ಗ್ರಾಮದ ಶ್ರೀಮತಿ ದಾನೇಶ್ವರಿ ಮತ್ತು ರಾಮಾಂಜನೇಯ ದಂಪತಿಯ ನಾಲ್ಕು ತಿಂಗಳ ಮಗನಾದ ಯಶಶ್ವಿಕ್ ಅರ್ಜುನ್ ಆರ್. ಅಗಾಧ ಜ್ಞಾಪಕ ಶಕ್ತಿ ಹೊಂದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಮಗು ಪಕ್ಷಗಳು, ಬಣ್ಣಗಳು, ಅಕ್ಷರ, ಹಣ್ಣು, ತರಕಾರಿ, ವರ್ಣಮಾಲೆ ಆಕಾರಗಳು, 216 ಫ್ಲಾಶ್ ಕಾರ್ಡುಗಳನ್ನು ಗುರುತಿಸುವ ಮೂಲಕ ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ದಾಖಲೆ ಬರೆಸಿದೆ.

ಪರಶುರಾಂಪುರ: ಹೋಬಳಿಯ ಕಾಮಸಮುದ್ರ ಗ್ರಾಮದ ಶ್ರೀಮತಿ ದಾನೇಶ್ವರಿ ಮತ್ತು ರಾಮಾಂಜನೇಯ ದಂಪತಿಯ ನಾಲ್ಕು ತಿಂಗಳ ಮಗನಾದ ಯಶಶ್ವಿಕ್ ಅರ್ಜುನ್ ಆರ್. ಅಗಾಧ ಜ್ಞಾಪಕ ಶಕ್ತಿ ಹೊಂದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಮಗು ಪಕ್ಷಗಳು, ಬಣ್ಣಗಳು, ಅಕ್ಷರ, ಹಣ್ಣು, ತರಕಾರಿ, ವರ್ಣಮಾಲೆ ಆಕಾರಗಳು, 216 ಫ್ಲಾಶ್ ಕಾರ್ಡುಗಳನ್ನು ಗುರುತಿಸುವ ಮೂಲಕ ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ದಾಖಲೆ ಬರೆಸಿದೆ. ಈ ಅಸಾಧಾರಣ ನೆನಪಿನ ಶಕ್ತಿ ನಾಲ್ಕು ತಿಂಗಳ ಮಗುವಲ್ಲಿ ಇದೆ ಎಂದರೆ ಆಶ್ಚರ್ಯ ಸಂಗತಿ. ಇವರ ಪೋಷಕರು ಇವನ ಅಸಾಧಾರಣ ನೆನಪಿನ ಶಕ್ತಿಯನ್ನು ಗುರುತಿಸಿ ವಿಡಿಯೋ ಚಿತ್ರೀಕರಣ ಮಾಡಿ ನೊಬೆಲ್ ಆಫ್ ರೆಕಾರ್ಡ್ ಕಳಿಸಿದ್ದಾರೆ. ವರ್ಲ್ಡ್ ರೆಕಾರ್ಡ್ನ ತಂಡವು ಪರಿಶೀಲಿಸಿ ಮತ್ತು ಪರೀಕ್ಷಿಸಿ ಬಳಿಕ ಪ್ರಮಾಣಪತ್ರ ನೀಡಿದೆ. ಮಗುವಿನ ಈ ಸಾಧನೆಯು ತಂದೆ ತಾಯಿ ಹಾಗೂ ಊರಿನವರಿಗೆ ಇನ್ನಿಲ್ಲದ ಸಂತಸ ತಂದಿದೆ. ಚಳ್ಳಕೆರೆ ಶಾಸಕರಾದ ಟಿ. ರಘುಮೂರ್ತಿಯವರು ಹಾಗೂ ಜಿಲ್ಲಾಧಿಕಾರಿ ವೆಂಕಟೇಶ್ ಈ ಮಗುವಿನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಗೌರವಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!