ರಾಜ್ಯಕ್ಕೆ ಪ್ರತಿ ದಿನ 46 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಬೇಡಿಕೆ: ಟಿ.ಡಿ.ರಾಜೇಗೌಡ

KannadaprabhaNewsNetwork |  
Published : Oct 03, 2024, 01:18 AM ISTUpdated : Oct 03, 2024, 01:19 AM IST
ಟಿ.ಡಿ.ರಾಜೇಗೌಡ | Kannada Prabha

ಸಾರಾಂಶ

ನರಸಿಂಹರಾಜಪುರ, ರಾಜ್ಯಕ್ಕೆ ಪ್ರತಿ ದಿನ 46 ಸಾವಿರ ಮೆಗಾವಿಟ್ ವಿದ್ಯುತ್ ಬೇಡಿಕೆ ಇದ್ದು ಮುಂದಿನ 10 ವರ್ಷಕ್ಕೆ ಬೇಕಾಗುವ ವಿದ್ಯುತ್ ಬಗ್ಗೆ ಸರ್ವೆ ಕಾರ್ಯ ನಡೆಯುತ್ತಿದೆ ಎಂದು ರಾಜ್ಯ ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.

ಪಾವಗಡದ ಸೋಲಾರ್ ವಿದ್ಯುತ್ ಘಟಕ ಪ್ರಪಂಚದಲ್ಲೇ ಅತಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವ ಘಟಕ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ರಾಜ್ಯಕ್ಕೆ ಪ್ರತಿ ದಿನ 46 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದು ಮುಂದಿನ 10 ವರ್ಷಕ್ಕೆ ಬೇಕಾಗುವ ವಿದ್ಯುತ್ ಬಗ್ಗೆ ಸರ್ವೆ ಕಾರ್ಯ ನಡೆಯುತ್ತಿದೆ ಎಂದು ರಾಜ್ಯ ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಜಾರ್ಜ್ ಅವರು ವಿದ್ಯುತ್ ಬೇಡಿಕೆ ಬಗ್ಗೆ ಸಮೀಕ್ಷೆ ನಡೆಸಿದ್ದಾರೆ. ಯಾವ, ಯಾವ ಮಾರ್ಗದಲ್ಲಿ ವಿದ್ಯುತ್ ಉತ್ಪಾದನೆ ಮಾಡಬೇಕು ಎಂಬ ಬಗ್ಗೆ ಪ್ಲಾನ್ ಮಾಡುತ್ತಿದ್ದಾರೆ. ಮುಂದಿನ 1 ತಿಂಗಳಲ್ಲಿ ಪಾವಗಡದಲ್ಲಿ 2 ಸಾವಿರ ಮೆಗಾ ವ್ಯಾಟ್ ವಿದ್ಯುತ್‌ ಉತ್ಪಾದನೆ ಮಾಡುವ ಸೋಲಾರ್ ಘಟಕಕ್ಕೆ ಟೆಂಡರ್ ಕರೆದಿದ್ದೇವೆ. ಪಾವಗಡದಲ್ಲಿ 13 ಸಾವಿರ ಎಕರೆಯಲ್ಲಿ ಪ್ರಪಂಚದಲ್ಲೇ ಅತಿ ದೊಡ್ಡ ಸೋಲಾರ್ ವಿದ್ಯುತ್ ಸ್ಥಾವರ ಇದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ, ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಪಾವಗಡದ ಸೋಲಾರ್ ವಿದ್ಯುತ್ ಘಟಕ ಪ್ರಪಂಚದಲ್ಲೇ ಅತಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವ ಘಟಕವಾಗಿತ್ತು. ಈಗ 4 ನೇ ಸ್ಥಾನಕ್ಕೆ ಇಳಿದಿದೆ. ಮತ್ತೆ 1 ನೇ ಸ್ಥಾನಕ್ಕೆ ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಲ್ಲಿ ಇಂಧನ ಸಚಿವ ಜಾರ್ಜ್ ಪ್ರಯತ್ನ ನಡೆಸುತ್ತಿದ್ದಾರೆ ಎಂದರು. ಪ್ರಸ್ತುತ ಪಾವಗಡದಲ್ಲಿ 2 ಸಾವಿರ ಮೆಗಾವಿಟ್ ಸೋಲಾರ್ ಘಟಕಕ್ಕೆ, ಮದುಗಿರಿಯಲ್ಲಿ 500 ಮೆಗಾವ್ಯಾಟ್ ಘಟಕಕ್ಕೆ, ಕುಸುಮೆಸಿಯಲ್ಲಿ 3 ಸಾವಿರ ಮೆಗಾವ್ಯಾಟ್ , ಕಲುಬರಗಿಯಲ್ಲಿ 100 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಬಜೆಟ್ ನಲ್ಲೂ ಗ್ರೀನ್ ಎನರ್ಜಿ ಹೈಡ್ರೋಜನ್, ನೀರಿನಿಂದ ವಿದ್ಯುತ್ ಉತ್ಪಾದನೆಗೂ ಹಣ ಮೀಸಲಿಡಲಾಗಿದೆ ಎಂದರು. -- ಬಾಕ್ಸ್--

ಕಳೆದ 21 ರಿಂದ ಡೆನ್ಮಾರ್ಕ್, ಸ್ಪೀಡನ್, ಜರ್ಮನಿ ದೇಶಕ್ಕೆ ಸೋಲಾರ್ ಹಾಗೂ ಇತರ ವಿದ್ಯುತ್ ಉತ್ಪಾದನೆ ಬಗ್ಗೆ ಅಧ್ಯಯನ ಮಾಡಲು ನಾನು, ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುದ್ರಪ್ಪಯ್ಯ ಹಾಗೂ ಅಧಿಕಾರಿಗಳ ತಂಡದೊಂದಿಗೆ ಪ್ರವಾಸ ಮಾಡಿದ್ದೆ. ಅಲ್ಲಿ ವಿದ್ಯುತ್ ಗೆ ಸಂಬಂಧ ಪಟ್ಟ ಸಮ್ಮೇಳನ ನಡೆದಿತ್ತು. ಅದರ ಚರ್ಚೆಯಲ್ಲಿ ನಾನು ಭಾಗವಹಿಸಿದ್ದೆ. ಡೆನ್ಮಾರ್ಕನಲ್ಲಿ ಅತಿ ದೊಡ್ಡ ಸೋಲಾರ್ ಸ್ಥಾವರ ವೀಕ್ಷಣೆ ಮಾಡಿದ್ದೇವೆ. ಕೃಷಿ ಚಟುವಟಿಕೆ ವೇಸ್ಟ್ ಇತರ ಕಸಗಳನ್ನು ಪರಿವರ್ತಿಸಿ ವಿದ್ಯುತ್ ತೆಗೆಯುವ ವಿಧಾನ, ಗ್ರೀನ್‌ ಲ್ಯಾಬ್, ಇರಿಗೇಶನ್ ಸಿಸ್ಟಮ್ ನಲ್ಲಿ ವಿದ್ಯುತ್ ಉತ್ಪಾದನೆ ಅಧ್ಯಯನ ಮಾಡಿದ್ದೇವೆ. ನಮ್ಮ ದೇಶದ ವಿದ್ಯುತ್ ಉತ್ಪಾದನೆ ಮಾಡುವ ವಿಧಾನವನ್ನು ವಿದೇಶದ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿದ್ಯುತ್ ಉತ್ಪಾದನೆ ಬಗ್ಗೆ ಡೆನ್ಮಾರ್ಕನಲ್ಲಿ ನಡೆದ ಸಮ್ಮೇಳನದಲ್ಲಿ ಚರ್ಚೆಯಾಗಿದೆ ಎಂದರು. ನಮ್ಮ ದೇಶದಲ್ಲಿ ಬ್ರಿಟಿಷರ ಕಾಲದಲ್ಲಿ ಹಾಕಿರುವ ವಿದ್ಯುತ್ ತಂತಿಯಿಂದಲೇ ವಿದ್ಯುತ್ ಹೋಗಬೇಕಾಗಿದೆ. ಆ ಲೈನಿನಲ್ಲಿ ಸೋಲಾರ್ ವಿದ್ಯುತ್ ಸಮರ್ಪಕವಾಗಿ ಹರಿಯಲು ಸಾಧ್ಯವಾಗುವುದಿಲ್ಲ. ಅದಕ್ಕೆ ಪರ್ಯಾಯವಾಗಿ ಯಾವ ರೀತಿಯಲ್ಲಿ ವಿದ್ಯುತ್ ಪರಿಕರಣಗಳನ್ನು ಉಪಯೋಗಿಸಿ ಕೊಳ್ಳಬಹುದು ಎಂದು ಚರ್ಚೆ ನಡೆಸಲಾಗಿದೆ. ಅಲ್ಲಿನ ರಾಯಭಾರಿ ಕಚೇರಿಗೂ ಭೇಟಿ ನೀಡಿದ್ದೇವೆ ಎಂದರು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ