19ರಂದು ನಮ್ಮೂರ ಕನ್ನಡಹಬ್ಬ, ಪೊಲೀಸರಿಗೆ ಅಭಿನಂದನಾ ಕಾರ್ಯಕ್ರಮ: ಪ್ರೇಮಲತಾ ಕೃಷ್ಣಸ್ವಾಮಿ

KannadaprabhaNewsNetwork |  
Published : Dec 09, 2025, 01:15 AM IST
7ಕೆಜಿಎಲ್ 86ಕೊಳ್ಳೇಗಾಲದ ಬಸವಲಿಂಗಪ್ಪ ಸಮೂಹ ಸಂಸ್ಥೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪ್ರೇಮಲತಾ ಕೖಷ್ಣಸ್ವಾಮಿ ಮಾತನಾಡಿದರು. ಹಷ೯, ಶಿವಾನಂದ, ರಾಜೇಶ್ ಇದ್ದರು. | Kannada Prabha

ಸಾರಾಂಶ

2 ದಿನ ಜರುಗುವ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು, ರಾಜಕಾರಣಿಗಳು, ವಿವಿಧ ಮಠದ ಸ್ವಾಮೀಜಿಗಳು ಸೇರಿದಂತೆ ಹಲವು ಮಂದಿ ಪಾಲ್ಗೊಳ್ಳುವರು. ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಎಚ್.ಕೃಷ್ಣಸ್ವಾಮಿ ಮೆಮೋರಿಯಲ್ ಟ್ರಸ್ಟ್, ರೋಟರಿ ಮಿಡ್ ಟೌನ್, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಾಗೂ

ಜೀ ಕನ್ನಡ ವಾಹಿನಿ ಇವರ ಸಹಯೋಗದಲ್ಲಿ ಡಿ.19 ಮತ್ತು 20ರಂದು ಪಟ್ಟಣದ ಎಂ.ಜಿ.ಎಸ್.ವಿ ಮೈದಾನದಲ್ಲಿ ಎರಡು ದಿನಗಳ ಕಾಲ ‘ನಮ್ಮೂರ ಕನ್ನಡ ಹಬ್ಬ ಹಾಗೂ ಪೊಲೀಸರಿಗೆ ನಮನ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯುವ ದಸರಾ ಮಾದರಿ ಜರುಗುವ ಈ ಕಾರ್ಯಕ್ರಮಕ್ಕೆ ಪಟ್ಟಣದ ಜನತೆ ಸಹಕರಿಸಬೇಕು ಎಂದು ಎಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೇಮಲತಾ ಕೃಷ್ಣಸ್ವಾಮಿ ಹೇಳಿದರು.

ಪಟ್ಟಣದ ಬಸವಲಿಂಗಪ್ಪ ವಿಶ್ವಚೇತನ ಸಮೂಹ ಸಂಸ್ಥೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನತೆಗೆ ಉತ್ತಮ ಮನರಂಜನೆ ಒದಗಿಸಬೇಕು, ನಮ್ಮ ಪ್ರತಿಭೆಗಳನ್ನು ಗೌರವಿಸಬೇಕು, ಸಾಧಕ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿಯನ್ನು ಅಭಿನಂದಿಸಬೇಕು ಎಂಬುದು ನಮ್ಮ ಉದ್ದೇಶ, ಅಲ್ಲದೆ ನಮ್ಮ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸುವುದು ಸಹ ನಮ್ಮ ಸಂಸ್ಥೆಯ ಗುರಿಯಾಗಿದ್ದು, ಕಾರ್ಯಕ್ರಮದ ವೇದಿಕೆಯಲ್ಲಿ ಎಲ್ಲಾ ತಂದೆ- ತಾಯಂದಿರಿಗೆ ಸಮರ್ಪಿತ ಎರಡು ಹೊಸ ಸುಮಧುರ ಗೀತೆಗಳ ಧ್ವನಿಸುರುಳಿ ಬಿಡುಗಡೆ ಮಾಡಲಾಗುವುದು ಎಂದರು.

2 ದಿನ ಜರುಗುವ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು, ರಾಜಕಾರಣಿಗಳು, ವಿವಿಧ ಮಠದ ಸ್ವಾಮೀಜಿಗಳು ಸೇರಿದಂತೆ ಹಲವು ಮಂದಿ ಪಾಲ್ಗೊಳ್ಳುವರು. ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದರು.

ನಗರಸಭೆಯ ಮಾಜಿ ಉಪಾಧ್ಯಕ್ಷ ಹರ್ಷ, ರೋಟರಿ ಕ್ಲಬ್ ನ ಪುಟ್ಟರಸಶೆಟ್ಟಿ, ಔಷಧಿ ವ್ಯಾಪಾರಿಗಳ ಸಂಘದ ಶಿವಾನಂದ, ಸಂಪತ್ತು, ಲಯನ್ಸ್ ಕ್ಲಬ್ ಅಧ್ಯಕ್ಷ ಮಾದೇಶ್, ಮುಖಂಡರಾದ ನಾಗರಾಜು, ಬಸಲಿಂಗಪ್ಪ ಪ್ರೌಢಶಾಲೆ ಮುಖ್ಯಶಿಕ್ಷಕ ಅಕ್ಬರ್, ಸಂಯೋಜಕ ರಾಜೇಶ್ ಇನ್ನಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೋಗಾನಂದಗೆ ಯುವ ವಿಜ್ಞಾನ ಪ್ರಶಸ್ತಿ ಪ್ರದಾನ
ಆರೈಕೆದಾರರಿಗೆ ಕಾಸಿಲ್ಲದೇ ಮುಚ್ಚಿದ ಕೂಸಿನ ಮನೆ!