ನಮೋಶಿಗೆ ಸ್ವಂತ ಕಾರಿಲ್ಲ- ಮಟ್ಟೂರ್‌ಗಿಂತ ಪತ್ನಿಯೇ ಸಿರಿವಂತೆ

KannadaprabhaNewsNetwork |  
Published : Oct 07, 2026, 01:30 AM IST
ಫೋಟೋ- ನಮೋಶಿ ನಮೋಶಿ | Kannada Prabha

ಸಾರಾಂಶ

ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಅಖಾಡದಲ್ಲಿರುವ ಬಿಜೆಪಿಯ ಶಶಿಲ್‌ ನಮೋಶಿ ಹಾಗೂ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ್‌ ಇಬ್ಬರು ಕೋಟಿ ಕುಳಗಳಾಗಿದ್ದಾರೆ. ಇವರಿಬ್ಬರೂ ನಾಮಪತ್ರದ ಜತೆ ಸಲ್ಲಿಸಿರುವ ಆಸ್ತಿಪಾಸ್ತಿ ವಿವರದ ಅಫಿದಾವಿತ್‌ನಲ್ಲಿ ತಮ್ಮ ಆಸ್ತಿ ವಿವರ ಚುನಾವಣಾ ಆಯೋಗಕ್ಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಅಖಾಡದಲ್ಲಿರುವ ಬಿಜೆಪಿಯ ಶಶಿಲ್‌ ನಮೋಶಿ ಹಾಗೂ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ್‌ ಇಬ್ಬರು ಕೋಟಿ ಕುಳಗಳಾಗಿದ್ದಾರೆ. ಇವರಿಬ್ಬರೂ ನಾಮಪತ್ರದ ಜತೆ ಸಲ್ಲಿಸಿರುವ ಆಸ್ತಿಪಾಸ್ತಿ ವಿವರದ ಅಫಿದಾವಿತ್‌ನಲ್ಲಿ ತಮ್ಮ ಆಸ್ತಿ ವಿವರ ಚುನಾವಣಾ ಆಯೋಗಕ್ಕೆ ನೀಡಿದ್ದಾರೆ.ಶಶಿಲ್‌ ನಮೋಶಿ ಸ್ವಂತಕ್ಕೆ ಕೈಯಲ್ಲಿ 2. 63 ಲಕ್ಷ ರು ನಗದು, ಕುಟುಂಬದವರು 3. 03 ಲಕ್ಷ ರು ನಗದು ಹೊಂದಿದ್ದಾರೆ. ಶಶಿಲ್‌ ನಮೋಶಿ ಬಳಿ ಸ್ವಂತಕ್ಕೆ ಕಾರಿಲ್ಲ. ಪತ್ನಿ ಪೂರ್ಣಿಮಾ ಇವರ ಹೆಸರಲ್ಲಿ 1 ಇನ್ನೋವಾ ಕಾರ್‌ ಇದೆ. ನಮೋಶಿಯವರು ಒಟ್ಟು 4. 06 ಕೋಟಿ ರು. ಚರಾಸ್ತಿ, 05 ಕೋಟಿ ರು. ಮೊತ್ತದ ಸ್ಥಿರಾಸ್ತಿ ಹೊಂದಿದ್ದಾರೆ.ಅವರ ಕುಟುಂಬದ ಸದಸ್ಯರ ಬಳಿ 2. 94 ಕೋಟಿ ರು. ಮೊತ್ತದ ಚರಾಸ್ತಿ 97 ಲಕ್ಷ ರು. ಮೊತ್ತದ ಸ್ಥಿರಾಸ್ತಿ ಇದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿರುವ ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.

-----ಬಾಕ್ಸ್-------

ಈಶಾನ್ಯ ಶಿಕ್ಷಕರ ಮತಕ್ಷೇತ್ರ ಕಣದಲ್ಲಿರುವ ಶರಣಪ್ಪ ಮಟ್ಟೂರ್‌ ಅವರಿಗಿಂತ ಅವರ ಪತ್ನಿಯೇ ಹೆಚ್ಚು ಸಿರಿವಂತೆಯಾಗಿದ್ದಾರೆ. ಇವರೂ ಕೂಡಾ ನಾಮಪತ್ರದ ಜತೆ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ತಮ್ಮ ಆಸ್ತಿಪಾಸ್ತಿ ವಿವರ ಆಯೋಗಕ್ಕೆ ಸಲ್ಲಿಸಿದ್ದಾರೆ.ಮಟ್ಟೂರ ಕೈಯಲ್ಲಿ 25 ಸಾವಿರ. ನಗದು, ಸ್ವಂತ ಕಾರಿದೆ. 150 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. ಮಟ್ಟೂರ ಪತ್ನಿಯ ಕೈಯಲ್ಲಿ 5 ಸಾವಿರ ರು. ನಗದು, ಪಿತ್ರಾರ್ಜಿತವೂ ಸಹಿತ 950 ಗ್ರಾಂ ಚಿನ್ನಾಭರಣ, 5 ಕೆಜಿ ಬೆಳ್ಳಿ ವಸ್ತುಗಳಿವೆ.ಒಟ್ಟಾರೆ, ಶರಣಪ್ಪ ಮಟ್ಟೂರ ಅವರು 1. 32 ಕೋಟಿ ರು ಸ್ತಿರಾಸ್ತಿ ಹೊಂದಿದ್ದಾರೆ. ಅವರ ಪತ್ನಿ 1. 90 ಕೋಟಿ ಮೊತ್ತದ ಸ್ತಿರಾಸ್ತಿ ಹೊಂದಿದ್ದಾರೆ. ಮಟ್ಟೂರ ಬಲಿ 7 ಎಕರೆ ಜಮೀನು ಸೇರಿದಂತೆ 1. 97 ಕೋಟಿ ರು ಮೊತ್ತದ ಸ್ತಿರಾಸ್ತಿ ಇದೆ. ಅವರ ಪತ್ನಿ ಹೆಸರಲ್ಲಿ 2. 20 ಕೋಟಿ ರು ಮೊತ್ತದಷ್ಟು ಸ್ತಿರಾಸ್ತಿ ಇದೆ ಎಂದು ಅವರು ಆಯೋಗಕ್ಕೆ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ವಿವರಿಸಿದ್ದಾರೆ.

---ಫೋಟೊ-----ಫೋಟೋ- ನಮೋಶಿ ನಮೋಶಿಫೋಟೋ- ಶರಣಪ್ಪ ಮಟ್ಟೂರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯಪುರ ಶಾಸಕ ಯತ್ನಾಳ್ ವಿರುದ್ಧ ದಾವಣಗೆರೆ ಕಾಂಗ್ರೆಸ್ ದೂರು
ಶಿಥಿಲ, ಹಳೇ ಪಶು ವೈದ್ಯಕೀಯ ಆಸ್ಪತ್ರೆಗಳ ಪಟ್ಟಿ ನೀಡಿ: ಶಾಂತನಗೌಡ