ಕಾರ್ಕಳ : ಗುರುವಾರ ನಿಧನರಾದ ದೇಶ ಕಂಡ ಅತ್ಯಂತ ಪ್ರತಿಭಾಶಾಲಿ ನಟ ನಾನಾ ಪಾಟೇಕರ್ ಅವರಿಗೂ ಇಲ್ಲಿನ ಮುಂಡ್ಕೂರು ಗ್ರಾಮಕ್ಕೂ ವಿಶೇಷ ನಂಟಿತ್ತು. ಸುಮಾರು 25 ವರ್ಷಗಳ ಹಿಂದೆ ನಾನಾ ಅವರು ಇಲ್ಲಿಗೆ ಭೇಟಿ ನೀಡಿದ್ದು, ಇಲ್ಲಿನ ಶಾಲೆ ಮತ್ತು ದೇವಾಲಯಗಳ ಅಭಿವೃದ್ಧಿಗೆ ಸಹಾಯ ಮಾಡಿದ್ದರು, ನಂತರವೂ ಅನೇಕ ಬಾರಿ ಯಾವುದೇ ಪ್ರಚಾರವಿಲ್ಲದೇ ಈ ಹಳ್ಳಿಗೆ ಬಂದು ಹೋಗಿದ್ದರು.
ಇಲ್ಲಿನ ಮುಲ್ಲಡ್ಕದ ಗುರುಪ್ರಸಾದ್ ಸುಧಾಕರ ಶೆಟ್ಟಿ ಅವರು ಮತ್ತು ನಾನಾ ಸ್ನಹಿತರಾಗಿದ್ದು, ಇದೇ ಕಾರಣಕ್ಕೆ ಅವರು ಮುಲ್ಲಡ್ಕ ಬ್ರಹ್ಮ ಬೈದರ್ಕಳ ಗರಡಿ ಹಾಗೂ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಗೂ ಅವರು ನೆರವು ನೀಡಿದ್ದರು.
ಮುಂಡ್ಕೂರಿನ ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 60ನೇ ವರ್ಷದ ಸಂಭ್ರಮಕ್ಕೆ, ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಗ್ರಂಥಾಲಯ ಕೊಠಡಿ ನಿರ್ಮಾಣಕ್ಕೆ ಧನಸಹಾಯ, ಕಂಪ್ಯೂಟರ್‌ಗಳನ್ನೂ ಕೊಡುಗೆಯಾಗಿ ನೀಡಿದ್ದರು.ಮುಂಡ್ಕೂರಿನಲ್ಲಿ ಗುರುಕುಲ ಮಾದರಿಯ ಶಿಕ್ಷಣ ನೀಡುವ ಶಾಲೆಯೊಂದನ್ನು ಆರಂಭಿಸಬೇಕು ಎಂದವರು ಹೇಳಿದ್ದರು ಎಂದು ಊರಿನ ಹಿರಿಯರು ನೆನಪಿಸಿಕೊಂಡಿದ್ದಾರೆ.ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ನಿಧನದ ಸುದ್ದಿ ಕಾರ್ಕಳ ತಾಲೂಕಿನ ಮುಂಡ್ಕೂರಿನ ಜನರಿಗೆ ಕೇವಲ ಒಬ್ಬ ಖ್ಯಾತ ನಟನ ಅಗಲಿಕೆ ಎನ್ನಲಾಗದು. ಎರಡೂವರೆ ದಶಕಕ್ಕೂ ಹೆಚ್ಚು ಕಾಲ ತಮ್ಮ ಊರಿನೊಂದಿಗೆ ಆತ್ಮೀಯವಾಗಿ ಬೆಸೆದುಕೊಂಡಿದ್ದ ‘ನಾನಾಜೀ’ಯನ್ನು ಕಳೆದುಕೊಂಡ ನೋವಾಗಿದೆ. ಅಭಿನಯದಾಚೆಗೂ ಮಾನವೀಯತೆ ಮೆರೆದ ಅವರು ಮುಂಡ್ಕೂರಿನ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಳು ಇಂದಿಗೂ ಸ್ಮರಣೀಯವಾಗಿವೆ.ಗ್ರಾಮೀಣ ಮಕ್ಕಳ ಶಿಕ್ಷಣದ ಬಗ್ಗೆಯೂ ನಾನಾಜೀ ವಿಶೇಷ ಕಾಳಜಿ ಹೊಂದಿದ್ದರು. ಮುಂಡ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ಬಾರಿ ಖುದ್ದಾಗಿ ಭೇಟಿ ನೀಡಿದ್ದ ಅವರು, 2017ರಲ್ಲಿ ಆಶ್ರಯ ಟ್ರಸ್ಟ್ ಸಹಯೋಗದೊಂದಿಗೆ ಶಾಲೆಯಲ್ಲಿ ಕಂಪ್ಯೂಟರ್ ಕೊಠಡಿ ಸ್ಥಾಪನೆ, ಗ್ರಂಥಾಲಯ ಆಧುನೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದ್ದರು. ಮುಂಡ್ಕೂರಿನ ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿಗೂ ಗ್ರಂಥಾಲಯ, ಕಂಪ್ಯೂಟರ್ ಕೊಠಡಿ ಹಾಗೂ ಕಂಪ್ಯೂಟರ್ ಕೊಡುಗೆ ನೀಡಿದ್ದರು. ನಾನಾ ಪಾಟೇಕರ್ ಅವರ ನೆರವಿನೊಂದಿಗೆ ವಿದ್ಯಾವಾಶ್ರಯ ಟ್ರಸ್ಟ್ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ವಾರ್ಷಿಕವಾಗಿ ಸುಮಾರು ₹20 ಲಕ್ಷ ವೆಚ್ಚ ಮಾಡುತ್ತಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಇದರ ಪರಿಣಾಮ ವಿದ್ಯಾರ್ಥಿಗಳ ಸಂಖ್ಯೆ 90ರಿಂದ 143ಕ್ಕೆ ಏರಿಕೆಯಾಗಿದೆ ಎಂಬ ಮಾಹಿತಿಯೂ ಇದೆ.
ತುಳುನಾಡಿನ ಕೀರ್ತಿ ಜಾಗತಿಕ ಮಟ್ಟದಲ್ಲಿ ಬೆಳಗಿಸಿದ ಅಂತಾರಾಷ್ಟ್ರೀಯ ಪವರ್‌ಲಿಫ್ಟರ್ ಬೋಳ ಅಕ್ಷತಾ ಪೂಜಾರಿ ಬದುಕಿನಲ್ಲೂ ನಾನಾ ಪಾಟೇಕರ್ ತಂದೆಯಂತೆಯೇ ನಿಂತಿದ್ದರು. ಮುಂಡ್ಕೂರಿಗೆ ಬಂದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಆರಂಭವಾದ ಪರಿಚಯ ಕ್ರಮೇಣ ಗಾಢವಾದ ತಂದೆ-ಮಗಳ ಬಾಂಧವ್ಯವಾಗಿ ಬೆಳೆದಿತ್ತು.
ಮುಂಬೈನ ಖ್ಯಾತ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರೊಂದಿಗೂ ನಾನಾ ಪಾಟೇಕರ್ ಅವರದ್ದು ಅಣ್ಣ-ತಮ್ಮನಂತಹ ಬಾಂಧವ್ಯವಾಗಿತ್ತು. ದಯಾ ನಾಯಕ್ ಅವರ ಎನ್‌ಕೌಂಟರ್ ಕಾರ್ಯಾಚರಣೆ ಮತ್ತು ಬದುಕಿನ ಸಂಘರ್ಷವನ್ನು ಆಧರಿಸಿದ ‘ಅಬ್ ತಕ್ ಛಪ್ಪನ್’ ಚಿತ್ರದಲ್ಲಿ ನಾನಾ ಪಾಟೇಕರ್ ಅವರೇ ದಯಾ ನಾಯಕ್ ಪಾತ್ರದಲ್ಲಿ ನಟಿಸಿದ್ದರು. ಆದರೆ ಚಿತ್ರಕ್ಕೂ ಮುನ್ನವೇ ಇವರ ನಡುವೆ 25 ವರ್ಷಕ್ಕೂ ಹೆಚ್ಚಿನ ಆತ್ಮೀಯ ಸಂಬಂಧವಿತ್ತು. ದಯಾ ನಾಯಕ್ ಸಂಕಷ್ಟದಲ್ಲಿದ್ದಾಗ ನಾನಾಜೀ ಸಾಂತ್ವನ ನೀಡಿದ್ದರು