ಎಲ್ಲರ ಸಹಕಾರದಿಂದ ನಂದಿ ಸಹಕಾರ ಸಂಘ ಅಭಿವೃದ್ಧಿ: ಪಾಲಾಕ್ಷಪ್ಪ

KannadaprabhaNewsNetwork |  
Published : Sep 30, 2025, 01:00 AM IST
ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳನ್ನು ಗೌರವಿಸಲಾಯಿತು | Kannada Prabha

ಸಾರಾಂಶ

ನಂದಿ ಪತ್ತಿನ ಸಹಕಾರ ಸಂಘದ ವ್ಯವಹಾರ ಅಗಾಧವಾಗಿ ವಿಸ್ತಾರಗೊಂಡಿದ್ದು, ಸಂಘದ ಅಭಿವೃದ್ಧಿಗೆ ಷೇರುದಾರರ ಸಹಿತ ಗ್ರಾಹಕರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಇಲ್ಲಿನ ಶ್ರೀ ನಂದಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಪಾಲಾಕ್ಷಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ನಂದಿ ಪತ್ತಿನ ಸಹಕಾರ ಸಂಘದ ವ್ಯವಹಾರ ಅಗಾಧವಾಗಿ ವಿಸ್ತಾರಗೊಂಡಿದ್ದು, ಸಂಘದ ಅಭಿವೃದ್ಧಿಗೆ ಷೇರುದಾರರ ಸಹಿತ ಗ್ರಾಹಕರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಇಲ್ಲಿನ ಶ್ರೀ ನಂದಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಪಾಲಾಕ್ಷಪ್ಪ ತಿಳಿಸಿದರು.

ಪಟ್ಟಣದ ನೊಳಂಭ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ನಡೆದ ಸರ್ವ ಸದಸ್ಯರ 23ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ನಂದಿ ಪತ್ತಿನ ಸಹಕಾರ ಸಂಘ ಸಮಾಜದಲ್ಲಿನ ಆರ್ಥಿಕ ದುರ್ಬಲರ ಏಳ್ಗೆಯನ್ನು ಗಮನದಲ್ಲಿರಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದು ಈ ದಿಸೆಯಲ್ಲಿ ಸಂಘದ ಆರ್ಥಿಕ ನೆರವಿನಿಂದ ಹಲವರು ಸದೃಡ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದ ಅವರು ಸಮಾಜದ ಎಲ್ಲ ವರ್ಗದ ಜನತೆಗೆ ಆರ್ಥಿಕ ಶಕ್ತಿಯನ್ನು ಕಲ್ಪಿಸಿಕೊಡುವ ಉದ್ದೇಶಕ್ಕೆ ಪೂರಕವಾಗಿ ಸಂಘ ಕಾರ್ಯ ನಿರ್ವಹಿಸುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಪ್ರತಿ ವರ್ಷ ಸಂಘದ ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದ್ದು,ಸಂಘದ ವ್ಯವಹಾರ ಅಗಾಧವಾಗಿ ವಿಸ್ತಾರಗೊಂಡಿದೆ ಎಂದ ಅವರು ಪ್ರಮುಖ ಸ್ಥಳದಲ್ಲಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಸದಸ್ಯರು,ಆಡಳಿತ ಮಂಡಳಿಯ ಜತೆಗೆ ನೊಳಂಭ ವೀರಶೈವ ಲಿಂಗಾಯತ ಸಮಾಜ ಬಾಂಧವರು ಸಹಕರಿಸಿದ್ದನ್ನು ಸಂಘ ಸದಾ ಸ್ಮರಿಸಲಿದೆ. ಸಾರ್ವಜನಿಕರ ಪ್ರಶಂಸೆಗೆ ಕಾರಣವಾದ ಸಂಘದ ಎಲ್ಲ ಯಶಸ್ಸಿಗೆ ಷೇರುದಾರರು ಬಹು ಮುಖ್ಯ ಕಾರಣಕರ್ತರಾಗಿದ್ದಾರೆ ಎಂದರು.

ಷೇರುದಾರರ ಮರಣೋತ್ತರ ನಿಧಿಯನ್ನು 10 ಸಾವಿರ ರು.ಗೆ ಹೆಚ್ಚಳಗೊಳಿಸಿ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನ ಅರ್ಥಿಕ ವರ್ಷದ ಅಂತ್ಯಕ್ಕೆ ಸಂಘ 1.12 ಕೋಟಿ ರು. ಷೇರು ಬಂಡವಾಳ ಹೊಂದಿದ್ದು 7.64 ಕೋಟಿ ರು. ಠೇವಣಿ ಮೂಲಕ ಠೇವಣಿ ಸಂಗ್ರಹದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. 64.4 ಲಕ್ಷ ರು. ಕಟ್ಟಡ ನಿಧಿ ಹೊಂದಿರುವ ಸಂಘ ಜಾಮೀನು ಸಾಲ,ಠೇವಣಿ ಸಾಲ,ವಾಹನ ಸಾಲ,ಆಭರಣ ಸಾಲ ಹಾಗೂ ಸ್ಥಿರಾಸ್ತಿ,ಗೃಹ ಆಧಾರ ಸಾಲವಾಗಿ 4 ಕೋಟಿ ರು. ವಿತರಿಸಲಾಗಿದ್ದು ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ 34.12 ಕೋಟಿ ರು. ವ್ಯವಹಾರದಿಂದ 18.66 ಲಕ್ಷ ರು. ನಿವ್ವಳ ಲಾಭಗಳಿಸಲಾಗಿದೆ. ಷೇರುದಾರರಿಗೆ ಶೇ.9 ಲಾಭಾಂಶ ನೀಡಲಾಗುವುದು ಎಂದು ಘೋಷಿಸಿದರು.

ನಂದಿಗುಡಿ ಬೃಹನ್ಮಠದ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಸಂಘ ತಾಲೂಕಿನಲ್ಲಿ ಜನಸಾಮಾನ್ಯರ ಆರ್ಥಿಕ ಪ್ರಗತಿಗೆ ಸ್ಪಂದಿಸುತ್ತಿದ್ದು ಶ್ರೀ ಮಠ ಈ ದಿಸೆಯಲ್ಲಿ ಸಂಘದ ಕಾರ್ಯವನ್ನು ಬೆಂಬಲಿಸಲಿದೆ ಎಂದರು.

ಪುರಸಭಾ ಸದಸ್ಯ,ಸಂಘದ ನಿರ್ದೇಶಕ ಮಯೂರ್ ದರ್ಶನ್ ಉಳ್ಳಿ,ತಾ.ನೊಳಂಭ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಜಿ.ಲೋಹಿತ್ ಮತ್ತಿತರರು ಮಾತನಾಡಿದರು.

ಶ್ರೀಗಳನ್ನು ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಬಸವರಾಜಪ್ಪ, ನಿರ್ದೇಶಕ ಸುರೇಶ್, ಮಂಜಪ್ಪ, ಸಂಗಪ್ಪ, ರವಿಕುಮಾರ್, ಯುವರಾಜ, ಸುಚಿತ್ರ, ಸುವರ್ಣ ಕಾರ್ಯದರ್ಶಿ ಹೂವಣ್ಣ, ಸಿಬ್ಬಂದಿ ವಸಂತಕುಮಾರ್, ನಿರಂಜನ ತಟ್ಟೆಹಳ್ಳಿ, ಮೋಹನಕುಮಾರ್, ರಾಮಲಿಂಗಪ್ಪ, ಮಧುಕೇಶ್ವರ್, ರಾಜು ಮತ್ತಿತರರು ಹಾಜರಿದ್ದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ