ಕನ್ನಡಪ್ರಭವಾರ್ತೆ ಮೂಲ್ಕಿ
ಕಟೀಲಿನ ಸಾನಿಧ್ಯ ಸಭಾ ಭವನದಲ್ಲಿ ಜರಗಿದ ಕಟೀಲು ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು ವಿದೇಶಿಯರ ದಾಳಿಯಿಂದ ನಮ್ಮ ಸಂಸ್ಕೃತಿ ನಾಶ ಪಡಿಸುವ ಪ್ರಯತ್ನ, ಶಿಕ್ಷಣ ಪದ್ಧತಿಯ ಬದಲಾವಣೆ, ಆಹಾರ ಪದ್ಧತಿಯಲ್ಲಿನ ಬದಲಾವಣೆ, ಆರಾಧನೆ, ವೇಷಭೂಷಣ ಇವೆಲ್ಲ ವ್ಯತ್ಯಾಸವಾಗುವುದನ್ನು ಗಮನಿಸುತ್ತಾ ಜಾಗೃತರಾಗುವ ಅಗತ್ಯವಿದೆ ಎಂದು ಹೇಳಿದರು.
ಸಂಘದ ಹಿರಿಯ ದಂಪತಿಗಳನ್ನು ಗೌರವಿಸಿದ ಮಂಗಳೂರು ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಬಿ. ಪುರಾಣಿಕ್ ಮಾತನಾಡಿ ವೇದ ಪಠಣ, ಕೇಳುವಿಕೆಯಿಂದ ಯಾವ ಧನಾತ್ಮಕ ಪರಿಣಾಮ ಆಗುತ್ತದೆ ಎಂದು ವಿದೇಶಿಯರು ಅರಿತಿದ್ದು ಆದರೆ ನಾವು ಮರೆತಿದ್ದೇವೆ. ವಿದ್ಯೆ, ಆಹಾರ, ಔಷಧಿಯನ್ನು ಮಾರಾಟ ಮಾಡದೆ ಅತಿ ಆಸೆ ಪಡದೆ ಕೊಟ್ಟ ಹಣಕ್ಕೆ ಕಳಿಸುವ ಕೊಡುವ ಪರಂಪರೆ ನಮ್ಮದು. ಆದರೆ ಈಗ ಇವೆಲ್ಲವೂ ವ್ಯಾಪಾರವಾಗಿದೆ. ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಕೊಡುವ ಅಗತ್ಯ ಇದ್ದು ಬ್ರಾಹ್ಮಣರ ಮನೆಯ ಮಕ್ಕಳು ದುಶ್ಚಟಗಳಿಗೆ ಬಲಿ ಬೀಳದೆ ಜಪ ತಪ ಭಜನೆ ಅಧ್ಯಯನದ ಮೂಲಕ ಒಳ್ಳೆಯ ಬದುಕು ನಡೆಸುವಂತಾಗಬೇಕು. ನಾವು ಕೋಟ ,ಶಿವಳ್ಳಿ, ಸ್ಥಾನಿಕ ದೇಶಸ್ಥ ಎಂದು ಬಿಕ್ಕಟ್ಟು ತಾರದೆ ಬ್ರಾಹ್ಮಣರು ಎಲ್ಲ ಒಗ್ಗಟ್ಟು ಆಗಬೇಕೆಂದು ಹೇಳಿದರು.ಕಟೀಲು ದೇಗುಲದ ಅರ್ಚಕ ವೆಂಕಟರಮಣ ಆಸ್ರಣ್ಣ ಮಾತನಾಡಿ ಸಂಘಟನೆಯ ಮೂಲಕ ಬ್ರಾಹ್ಮಣರು ಒಂದಾಗಿ ಸತ್ಕಾರ್ಯಗಳನ್ನು ಮಾಡಬೇಕು. ಮಕ್ಕಳಿಗೆ ನಮ್ಮ ಭಾಷೆ, ಕಲೆಗಳನ್ನು, ಆಚರಣೆಗಳನ್ನು ಕಳಿಸುವಂತಾಗಬೇಕು ಎಂದರು. ನಂದಿನಿ ಬ್ರಾಹ್ಮಣ ಸಭಾದ ಅಧ್ಯಕ್ಷ ಡಾ. ಪದ್ಮನಾಭ ಭಟ್ ಎಕ್ಕಾರು ಅಧ್ಯಕ್ಷತೆಯನ್ನು ವಹಿಸಿದ್ದು ಕೊಡೆತ್ತೂರು ವೇದವ್ಯಾಸ ಉಡುಪ, ಸಿ ಎ ಗಣೇಶ ರಾವ್, ಅಜಾರು ನಾಗರಾಜ ರಾವ್, ಜ್ಯೋತಿ ಉಡುಪ, ಶ್ರೀಶ ಆಚಾರ್ಯ ಮತ್ತಿತರರಿದ್ದರು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.