ಮೈಮುಲ್ ನಿಂದ ನಂದಿನಿ ದೋಸೆ, ಇಡ್ಲಿ ಹಿಟ್ಟು ಬಿಡುಗಡೆ; ಸಂಪ್ರದಾಯದೊಂದಿಗೆ ಬೆಸೆದ ರುಚಿ ಎಂಬ ಧ್ಯೇಯದ ಅಡಿಯಲ್ಲಿ ಲೋಕಾರ್ಪಣೆ

KannadaprabhaNewsNetwork | Published : May 16, 2025 2:10 AM
Follow Us

ಸಾರಾಂಶ

ಮೈಮುಲ್ ವ್ಯಾಪ್ತಿಯಲ್ಲಿ 5 ಉತ್ಪನ್ನಗಳನ್ನು ಮೈಸೂರು ಜಿಲ್ಲೆಯ ಜತೆಗೆ ವಿವಿಧ ಜಿಲ್ಲೆಗಳಿಗೂ ಸಪ್ಲೈ ಮಾಡಲಾಗುತ್ತಿದೆ. ಇದರ ಜತೆಗೆ ಟೆಟ್ರಾ ಪ್ಯಾಕ್ ಘಟಕವನ್ನು ಕೂಡ ಪ್ರಾರಂಭ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ಜಿಲ್ಲಾ ಹಾಲು ಒಕ್ಕೂಟವು (ಮೈಮುಲ್) ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಸಹಭಾಗಿತ್ವದಲ್ಲಿ ಸಂಪ್ರದಾಯದೊಂದಿಗೆ ಬೆಸೆದ ರುಚಿ ಎಂಬ ಧ್ಯೇಯದ ಅಡಿಯಲ್ಲಿ ನಂದಿನಿ ಇಡ್ಲಿ, ದೋಸೆ ಹಿಟ್ಟನ್ನು ಗುರುವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.ನಗರದ ಬನ್ನೂರು ಹೊರ ವರ್ತುಲ ರಸ್ತೆಯಲ್ಲಿರುವ ಎಂ ಪ್ರೋ ಹೊಟೇಲ್ ಸಭಾಂಗಣದಲ್ಲಿ ಮೈಮುಲ್ ವ್ಯಾಪ್ತಿಯಲ್ಲಿ ನಂದಿನಿ ಇಡ್ಲಿ, ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಮೈಮುಲ್ ಅಧ್ಯಕ್ಷ ಆರ್. ಚೆಲುವರಾಜು ಬಿಡುಗಡೆಗೊಳಿಸಿದರು.ನಂತರ ಆರ್. ಚೆಲುವಾಜು ಮಾತನಾಡಿ, ಇಡ್ಲಿ, ದೋಸೆ ಹಿಟ್ಟನ್ನು 400 ಗ್ರಾಂ (40 ರೂ.) ಮತ್ತು 900 ಗ್ರಾಂ (80 ರೂ.) ಪ್ಯಾಕ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಅಕ್ಕಿ, ಉದ್ದಿನ ಬೇಳೆ, ಮೆಂತ್ಯೆ, ಉಪ್ಪು, ನೀರು, ಹಾಲಿನ ಉತ್ಪನ್ನವಾದ ವೇ ಪೌಡರ್ ಬಳಸಿ ಹಿಟ್ಟನ್ನು ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತಿದೆ. ಇದು ನೈಸರ್ಗಿಕವಾಗಿದ್ದು, ಸೋಡಾ, ಯಾವುದೇ ಸಂರಕ್ಷಕಗಳನ್ನು ಸೇರಿಸಿಲ್ಲ. ಆರೋಗ್ಯಕರ ಮತ್ತು ರುಚಿಕರವಾಗಿರುತ್ತದೆ ಎಂದು ಹೇಳಿದರು.ಕೆಎಂಎಫ್ ನಿಂದ ಉತ್ಪಾದನೆಯಾಗುತ್ತಿರುವ 70 ಹೆಚ್ಚು ಉತ್ಪನ್ನಗಳು ಮೈಸೂರು ಜಿಲ್ಲೆ ಹಾಗೂ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಬಹಳ ಯಶಸ್ವಿಯಾಗಿ ಮಾರಾಟವಾಗುತ್ತಿದೆ. ಹಾಲು, ಮೊಸರನ್ನೇ ವ್ಯಾಪರ ಮಾಡಿದರೆ ಹೈನುಗಾರಿಕೆ ಬೆಳೆಯಲು ಕಷ್ಟವಾಗುತ್ತದೆ ಎಂಬ ಮನವರಿಕೆಯಿಂದ ರೈತರ ಪರವಾಗಿ ರೈತರ ಬೆನ್ನೆಲುಬಾಗಿರುವ ಕೆಎಂಎಫ್ ಕೂಡ ರೈತರಿಗೆ ಸಹಕಾರಿಯಾಗಿ ನಿಲ್ಲುತ್ತಿದೆ ಎಂದರು.ರಾಜ್ಯದಲ್ಲಿ 1 ಕೋಟಿ ಲೀಟರ್ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. ಇದರಲ್ಲಿ ಹಾಲು ಮೊಸರು ಕರ್ನಾಟಕದಲ್ಲಿ 50 ಲಕ್ಷ ಲೀಟರ್ ಮಾರಾಟವಾಗುತ್ತಿದೆ. ಉಳಿದ 50 ಲಕ್ಷ ಲೀಟರ್ ಹಾಲು, ಮೊಸರು ಹಾಗೂ ಹಾಲಿನ ಉತ್ಪನ್ನಗಳನ್ನು ತಯಾರಿಸಿ ವಿವಿಧ ರಾಜ್ಯಗಳಲ್ಲಿ ಮಾರಾಟ ಮಾಡುವ ಮೂಲಕ ಪರಿಚಯಿಸಲಾಗುತ್ತಿದೆ ಎಂದು ಅವರು ತಿಳಿಸಿದರು.ಮೈಮುಲ್ ವ್ಯಾಪ್ತಿಯಲ್ಲಿ 5 ಉತ್ಪನ್ನಗಳನ್ನು ಮೈಸೂರು ಜಿಲ್ಲೆಯ ಜತೆಗೆ ವಿವಿಧ ಜಿಲ್ಲೆಗಳಿಗೂ ಸಪ್ಲೈ ಮಾಡಲಾಗುತ್ತಿದೆ. ಇದರ ಜತೆಗೆ ಟೆಟ್ರಾ ಪ್ಯಾಕ್ ಘಟಕವನ್ನು ಕೂಡ ಪ್ರಾರಂಭ ಮಾಡಲಾಗಿದೆ.ಮೈಮುಲ್ ನಿರ್ದೇಶಕರಾದ ಎ.ಟಿ. ಸೋಮಶೇಖರ್, ಕೆ.ಜಿ. ಮಹೇಶ್, ಕೆ. ಉಮಾಶಂಕರ್, ಸಿ. ಓಂಪ್ರಕಾಶ್, ಬಿ.ಎನ್. ಸದಾನಂದ, ದ್ರಾಕ್ಷಾಯಿಣಿ ಬಸವರಾಜು, ಲೀಲಾ ನಾಗರಾಜು, ಶಿವಗಾಮಿನಿ, ಮಲ್ಲಿಕಾ ರವಿಕುಮಾರ್ ಮೊದಲಾದವರು ಇದ್ದರು.ಮೈಸೂರು ಜಿಲ್ಲೆಯಲ್ಲಿ ಉತ್ಪತ್ತಿಯಾಗುತ್ತಿರುವ 9 ಲಕ್ಷ ಲೀಟರ್ ಹಾಲಿನಲ್ಲಿ ಕೇವಲ 3 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಮೊಸರು, ಮಜ್ಜಿಗೆಯಿಂದ 1 ಲಕ್ಷ ಲೀಟರ್ ಹಾಗೂ ಇನ್ನಿತರ ಉತ್ಪನ್ನಗಳು 50 ಸಾವಿರ ಲೀಟರ್ ಮಾರಟವಾಗುತ್ತಿದೆ. ಹೀಗಾಗಿ, ಪೌಡರ್ ಪ್ಲಾಂಟ್, ಪನ್ನೀರ್ ಘಟಕ ಆರಂಭಿಸಲು ನಿರ್ಧರಿಸಲಾಗಿದೆ.- ಆರ್. ಚೆಲುವರಾಜು, ಮೈಮುಲ್ ಅಧ್ಯಕ್ಷ