ಆರೋಗ್ಯ ವೃದ್ಧಿಗೆ ನಂದಿನಿ ಹಾಲು, ಉತ್ಪನ್ನ ಹೆಚ್ಚು ಸಹಕಾರಿ: ಬಿ.ಆರ್. ಪ್ರಭುಶಂಕರ

KannadaprabhaNewsNetwork |  
Published : Jul 06, 2025, 01:48 AM IST
ಬಳ್ಳಾರಿಯಲ್ಲಿ ನಂದಿ ಶಾಲೆಯಲ್ಲಿ ಏರ್ಪಡಿಸಿದ್ದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಅರಿವು ಕಾರ್ಯಕ್ರಮದಲ್ಲಿ ಕ್ವಿಜ್ ನಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. | Kannada Prabha

ಸಾರಾಂಶ

ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಆರೋಗ್ಯದ ಸಮತೋಲನಕ್ಕೆ ಬೇಕಾದ ಅಗತ್ಯ ಪೋಷಕಾಂಶ ಒಳಗೊಂಡಿದ್ದು, ಆರೋಗ್ಯ ವೃದ್ಧಿಗೆ ಹೆಚ್ಚು ಸಹಕಾರಿಯಾಗಿವೆ.

ರಾಬಕೊವಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಆರೋಗ್ಯದ ಸಮತೋಲನಕ್ಕೆ ಬೇಕಾದ ಅಗತ್ಯ ಪೋಷಕಾಂಶ ಒಳಗೊಂಡಿದ್ದು, ಆರೋಗ್ಯ ವೃದ್ಧಿಗೆ ಹೆಚ್ಚು ಸಹಕಾರಿಯಾಗಿವೆ ಎಂದು ರಾಬಕೊವಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್. ಪ್ರಭುಶಂಕರ ಹೇಳಿದರು.

ನಗರದ ನಂದಿ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ಜೀವನದಲ್ಲಿ ಹಾಲಿನ ಪ್ರಾಮುಖ್ಯತೆ ಅಗತ್ಯವಾಗಿದ್ದು, ಹಾಲಿನಲ್ಲಿರುವ ಕ್ಯಾಲ್ಸಿಯಂ, ಪ್ರೋಟಿನ್, ವಿಟಮಿನ್-ಬಿ2 ಸೇರಿದಂತೆ ಪೋಷಕಾಂಶಗಳು ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿವೆ. ನಂದಿನಿ ಹಾಲು ಸೇರಿದಂತೆ ಎಲ್ಲ ಉತ್ಪನ್ನಗಳು ಗುಣಮಟ್ಟಕ್ಕೆ ಹೆಸರಾಗಿವೆ. ಜನರ ಆರೋಗ್ಯ ದೃಷ್ಟಿಯನ್ನಿರಿಸಿಕೊಂಡು ವಿವಿಧ ಉತ್ಪನ್ನ ತಯಾರಿಸಲಾಗುತ್ತಿದೆ. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸುವುದು ಅರಿವು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ರಾಬಕೊವಿ ಹಾಲು ಒಕ್ಕೂಟದ ವ್ಯವಸ್ಥಾಪಕ (ಮಾ) ಮೋಹನ್ ಎಲ್. ಶಿಂಧೆ ಮಾತನಾಡಿ, ಡೇರಿ ಉದ್ಯಮಕ್ಕೆ ಸಂಬಂಧಿಸಿದ ಯಾವುದೇ ರೀತಿಯಲ್ಲಿ ಸಾಧ್ಯವಿರುವ ಉಪಕ್ರಮಗಳ ಬಗ್ಗೆ ಬೆಂಬಲಿಸಲು ಅವಕಾಶ ಒದಗಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಅರಿವು ಕಾರ್ಯಕ್ರಮ ಕುರಿತು ಕ್ವಿಜ್ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಂದಿ ಶಾಲೆಯ ನಿರ್ದೇಶಕ ಕೆ.ಉಮೇರ ಅಹಮ್ಮದ್, ಶಾಲಾ ಪ್ರಾಂಶುಪಾಲ ಕಕ್ಷನ್ ಜಬೀನ್, ಸಂಯೋಜಕ ಮುನೀರ್ ಶೇಕ್, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವ್ಯವಸ್ಥಾಪಕ (ಡೇರಿ) ಸಿದ್ದರಾಮಪ್ಪ ಶಿವರಾಯ ಕಣ್ಣೂರ, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಸಹಾಯಕ ವ್ಯವಸ್ಥಾಪಕ ಎರ‍್ರಿಸ್ವಾಮಿ ರೆಡ್ಡಿ, ಗುಣಮಟ್ಟ ನಿರ್ವಹಣೆಯ ಉಪ ವ್ಯವಸ್ಥಾಪಕ ಟಿ. ಮಲ್ಲಿಕಾರ್ಜುನ, ಉಪ ವ್ಯವಸ್ಥಾಪಕ ಟಿ. ಮಲ್ಲಿಕಾರ್ಜುನ, ಖರೀದಿ ವಿಭಾಗದ ಪ್ರಭಾರ ಉಪ ವ್ಯವಸ್ಥಾಪಕ ನಾಗರಾಜ ಶರ್ಮಾ, ಮಾರುಕಟ್ಟೆ ಸೂಪರ್‌ವೈಸರ್‌ಗಳಾದ ಲೋಹಿತ್ ಕುಮಾರ್, ಎಲ್.ಪ್ರಸನ್ನ ಕುಮಾರ, ಸಿ.ಎನ್. ಮಂಜುನಾಥ, ಬಾಬು ಬಿ. ಸೇರಿದಂತೆ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.

ಬಳಿಕ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ನಂದಿನಿ ಹಾಲು ವಿತರಿಸಲಾಯಿತು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ