ಉದ್ಬೂರು ಗೇ ಟ್‌ನಲ್ಲಿ ನಂದಿನಿ ನೂತನ ಮಳಿಗೆ ಲೋಕಾರ್ಪಣೆ

KannadaprabhaNewsNetwork |  
Published : Jun 21, 2025, 12:49 AM IST
36 | Kannada Prabha

ಸಾರಾಂಶ

ಮೈಸೂರು- ಎಚ್.ಡಿ. ಕೋಟೆ ಮುಖ್ಯರಸ್ತೆಯ ಉದ್ಬೂರು ಗೇಟ್ ನಲ್ಲಿ ನೂತನ ನಂದಿನಿ ಮಳಿಗೆಯನ್ನು ಶುಕ್ರವಾರ ದೀಪ ಬೆಳಗಿಸಿ ಟೇಪ್ ಕತ್ತರಿಸುವ ಮೂಲಕ ಲೋಕಾರ್ಪಣೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು- ಎಚ್.ಡಿ. ಕೋಟೆ ಮುಖ್ಯರಸ್ತೆಯ ಉದ್ಬೂರು ಗೇಟ್ ನಲ್ಲಿ ನೂತನ ನಂದಿನಿ ಮಳಿಗೆಯನ್ನು ಶುಕ್ರವಾರ ದೀಪ ಬೆಳಗಿಸಿ ಟೇಪ್ ಕತ್ತರಿಸುವ ಮೂಲಕ ಲೋಕಾರ್ಪಣೆಗೊಳಿಸಲಾಯಿತು.

ಮೈಮುಲ್ ನಿರ್ದೇಶಕ ಕೆ. ಉಮಾಶಂಕರ್ ಮಾತನಾಡಿ, ಊದ್ಬೂರು ಗೇಟ್ ನಲ್ಲಿ ಹೊಸ ನಂದಿನಿ ಮಳಿಗೆ ಲೋಕಾರ್ಪಣೆ ಮಾಡಿದ್ದೇವೆ. ನಂದಿನಿಯ 68 ಉತ್ಪನ್ನಗಳ ಜೊತೆಗೆ ಅನೇಕ ವಿಭಿನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದೇವೆ. ಇಡೀ ದೇಶದಲ್ಲಿ ನಂದಿನಿ ಮಾರಾಟ ಮಾಡುತ್ತಿದ್ದು, ದೇಶದಲ್ಲಿ ಎಷ್ಟು ಉತ್ಪನ್ನಗಳಿವೆಯೋ ಅದೆಲ್ಲದಕ್ಕಿಂತಲೂ ಕಡಿಮೆ ದರದಲ್ಲಿ ನಂದಿನಿ ಹಾಲಿನ ಉತ್ಪನ್ನಗಳಿವೆ. ಯಾವುದೇ ಅತಿಯಾದ ಲಾಭದ ಆಸೆ ಇಲ್ಲದೆ ಗ್ರಾಹಕರು ಹಾಗೂ ರೈತರ ಹಿತದೃಷ್ಠಿಯಿಂದ ಕೆಎಂಎಫ್ ಇವುಗಳನ್ನು ನಿಭಾಯಿಸಿಕೊಂಡು ಹೋಗುತ್ತಿದೆ ಎಂದರು.

ಎಲ್ಲರೂ ನಂದಿನಿ ಉತ್ಪನ್ನಗಳನ್ನು ಬಳಸಲು ತಿಳಿಸಬೇಕು. ಇದಕ್ಕಾಗಿಯೇ ಗ್ರಾಹಕರಿಗಾಗಿ ಸಮೃದ್ಧಿ ಹಾಲು, ಮೊಸರು ಲೈಟ್, ಗೋದಿ ಲಡ್ಡು, ಕ್ಯಾಷ್ಯು ಬರ್ಫಿ, ಪನ್ನೀರ್, ರಾಗಿ ಅಂಬಲಿ, ಪ್ರೋಬಯೋಟಿಕ್ ಮಜ್ಜಿಗೆ, ಮ್ಯಾಂಗೋ ಲಸ್ಸಿ, ಪ್ರೋಬಯೋಟಿಕ್ ಮೊಸರು ಇಷ್ಟು ಉತ್ಪನ್ನಗಳ ಮೇಲೆ ಶೇ.15 ರಷ್ಟು ರಿಯಾಯಿತಿ ನೀಡುತ್ತಿದ್ದೇವೆ. ಸಾರ್ವಜನಿಕರು ಹಾಗೂ ಗ್ರಾಹಕರು ಈ ರಿಯಾಯಿತಿಯ ಸದುಪಯೋಪಡಿಸಿಕೊಂಡು ಬೇರೆ ಉತ್ಪನ್ನಗಳ ಮೇಲೆ ವ್ಯಾಮೋಹಕ್ಕೆ ಒಳಗಾಗದೇ ನಂದಿನಿ ಉತ್ಪನ್ನಗಳನ್ನೇ ಹೆಚ್ಚೆಚ್ಚು ಬಳಸುವ ಮೂಲಕ ರೈತರ ಹಿತವನ್ನು ಕಾಯಬೇಕು ಎಂದು ಅವರು ಕರೆ ನೀಡಿದರು.

ಮೈಸೂರು ಜಿಲ್ಲಾ ಹಾಲು ಒಕ್ಕೂಟಗಳ ಸಹಕಾರ ಸಂಘಗಳ ನಿಯಮಿತದ ಅಧ್ಯಕ್ಷ ಆರ್. ಚೆಲುವರಾಜು, ನಿರ್ದೇಶಕರಾದ ಎ.ಟಿ. ಸೋಮಶೇಖರ್, ಕೆ.ಜಿ. ಮಹೇಶ್, ಕೆ. ಉಮಾಶಂಕರ್, ಸಿ. ಓಂಪ್ರಕಾಶ್, ಕೆ. ಈರೇಗೌಡ, ದ್ರಾಕ್ಷಯಿಣಿ ಬಸವರಾಜಪ್ಪ, ಲೀಲಾಂಬಿಕೆ ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ. ಗುರುಸ್ವಾಮಿ, ಬಿ.ಎ. ಪ್ರಕಾಶ್, ಎ.ಬಿ. ಮಲ್ಲಿಕಾ ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಸುರೇಶ್ ನಾಯ್ಕ್, ಮಾರುಕಟ್ಟೆ ವ್ಯವಸ್ಥಾಪಕ ಎಚ್.ಕೆ. ಜಯಶಂಕರ್, ಆಡಳಿತ ಮಂಡಳಿ ಸದಸ್ಯರು ಮತ್ತು ನೌಕರರು, ಮಳಿಗೆ ಮಾಲೀಕ ಬಸವರಾಜು, ತಾಪಂ ಮಾಜಿ ಸದಸ್ಯ ಸಿದ್ದರಾಮೇಗೌಡ, ಧನಗಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬಸಪ್ಪ, ಅಧ್ಯಕ್ಷ ಬಸವರಾಜು, ಜಿಪಂ ಮಾಜಿ ಸದಸ್ಯ ರವಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ