ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮೈಸೂರಿನ ಜಲದರ್ಶಿನಿಯಲ್ಲಿ ಸಚಿವರಿಗೆ ಶಾಲು ಹಾರ ತೊಡಿಸಿ ಪುಷ್ಪಗುಚ್ಛ ನೀಡುವ ಮೂಲಕ ಅಭಿನಂದಿಸಿದರು. ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ₹83 ಕೋಟಿ ಅನುದಾನ ಪೈಕಿ ಈಗಾಗಲೇ ₹31 ಕೋಟಿ ಅನುದಾನ ನೀಡಲಾಗಿದೆ. ಉಳಿಕೆ 52 ಕೋಟಿ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುವಂತೆ ಚಾಮುಲ್ ಅಧ್ಯಕ್ಷರು ಮನವಿ ಮಾಡಿದರು. ಐಸ್ ಕ್ರೀಂ ಪ್ಲಾಂಟ್ ಹಾಗೂ ಮೈಸೂರು ಪಾಕ್ ಘಟಕ ಸ್ಥಾಪನೆಗೆ ಚಾಮುಲ್ ಅಭಿವೃದ್ಧಿಗಾಗಿ ಹಣ ಬಿಡುಗಡೆಗೊಳಿಸುವಂತೆ ಬೇಡಿಕೆ ಸಲ್ಲಿಸಿದರು.
ಈ ವೇಳೆ ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಚಾಮುಲ್ ಅಭಿವೃದ್ಧಿಗೆ ಆದಷ್ಟು ಬೇಗ ಅನುದಾನ ಬಿಡುಗಡೆಗೆ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಈ ಸಂಧರ್ಭದಲ್ಲಿ ಚಾಮುಲ್ ಎಂಡಿ ರಾಜಕುಮಾರ್, ಕಾಂಗ್ರೆಸ್ ನಾಯಕ ಕಿನಕಹಳ್ಳಿ ರಾಚಯ್ಯ, ಮಾಂಬಳ್ಳಿ ಮೋಹನ್, ನಗರಸಭೆ ಮಾಜಿ ಸದಸ್ಯ, ಯುವ ನಾಯಕ ಮುಡಿಗುಂಡ ಶಾಂತರಾಜು, ನಾಗರಾಜು ಇನ್ನಿತರರಿದ್ದರು.