ಸವಣೂರು: ವಿವಿಧ ಬೆಳೆಗಳು ಬೆಳವಣಿಗೆ ಹಂತದಲ್ಲಿವೆ. ಆದ್ದರಿಂದ ರೈತರು ತ್ವರಿತವಾಗಿ ತಮ್ಮ ಹೊಲಗಳಲ್ಲಿ ನಿಂತಿರುವ ನೀರನ್ನು ಬಸಿಗಾಲುವೆಗಳ ಮುಖಾಂತರ ಬಸಿದು ಹೋಗುವಂತೆ ಕ್ರಮ ವಹಿಸುವುದು ಅವಶ್ಯವಾಗಿದೆ ಎಂದು ಉಪ ಕೃಷಿ ನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.ಪಟ್ಟಣದ ರೈತರ ಜಮೀನುಗಳಲ್ಲಿ ಏರ್ಪಡಿಸಿದ್ದ ಡ್ರೋನ್ ಮುಖಾಂತರ ನ್ಯಾನೋ ಯೂರಿಯಾ ಬಳಕೆಯ ಕುರಿತು ರೈತರಿಗೆ ಮಾಹಿತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರೈತರಾದ ಹಾಜಿ ಬಳ್ಳಾರಿ, ಮೆಹಬೂಬ ಕುರಿ, ಮುತ್ತನಗೌಡ ಹೊಸಮನಿ, ಕೆ. ಪಾಸ್ತ ಕಂಪನಿಯ ಪ್ರತಿನಿಧಿ ಮಂಜುನಾಥ ಭೋವಿ, ಕೃಷಿ ಅಧಿಕಾರಿಗಳಾದ ಹಾಲಸಿದ್ದ ಗಾವಡೆ ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ, ರೈತರು ಇದ್ದರು.ದುಡಿಯಲು ಹೋಗಿದ್ದ ವೃದ್ಧ ಕಾಣೆ
ರಾಣಿಬೆನ್ನೂರು: ದುಡಿಯಲು ಮಂಗಳೂರಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದ ವ್ಯಕ್ತಿಯೊಬ್ಬ ಕಾಣೆಯಾದ ಘಟನೆ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಜರುಗಿದೆ.ಶಿವಪ್ಪ ಚನ್ನಬಸಪ್ಪ ಹುಲಗಿಹೊಳಿ(65) ಕಾಣೆಯಾದ ವ್ಯಕ್ತಿ. ಈತ 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಸಾದಗಪ್ಪು ಮೈಬಣ್ಣ, ತಲೆಯಲ್ಲಿ ಬಿಳಿ ಕೂದಲುಗಳು, ಬಿಳಿ ಮೀಸೆ ಹೊಂದಿದ್ದಾನೆ. ಕನ್ನಡ ಮಾತ್ರ ಮಾತನಾಡುತ್ತಿದ್ದು, ಓದಲು, ಬರೆಯಲು ಬರುವುದಿಲ್ಲ. ಈತನ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಆರಕ್ಷಕ ಉಪ ನಿರೀಕ್ಷಕರು, ಹಲಗೇರಿ ಪೊಲೀಸ್ ಠಾಣೆ ದೂ. 08373- 252333, ಮೊ. 9480804554 ಸಂಪರ್ಕಿಸಲು ಕೋರಲಾಗಿದೆ.