ಬೆರಗಿನ ಕಲೆ ನೀಡಿದ ವಿಶ್ವಕರ್ಮರು: ಶಿಲ್ಪ ಮುರುಳಿ

KannadaprabhaNewsNetwork |  
Published : Jul 09, 2025, 12:23 AM ISTUpdated : Jul 09, 2025, 12:24 AM IST
ಪೋಟೋ೮ಸಿಎಲ್‌ಕೆ೩ ಚಳ್ಳಕೆರೆ ನಗರದ ವಿಶ್ವಕರ್ಮ ಕಲ್ಯಾಣಮಂಟಪದಲ್ಲಿ ವಿಶ್ವಕರ್ಮ ಸಮಾಜ ಹಮ್ಮಿಕೊಂಡಿದ್ದ ಧಾರ್ಮಿಕ ಜಾಗೃತಿ ಕಾರ್ಯಕ್ರಮವನ್ನು ನಗರಸಭೆಯ ಅಧ್ಯಕ್ಷೆ ಶಿಲ್ಪಮುರುಳಿ ಉದ್ಘಾಟಿಸಿದರು.      | Kannada Prabha

ಸಾರಾಂಶ

ವಿಶ್ವದಲ್ಲೇ ಕಲೆಯ ಮೌಲ್ಯ ಹಾಗೂ ವೈಭವವನ್ನು ನಾಡಿಗೆ ಸಾರಿದ ಕೀರ್ತಿ ವಿಶ್ವಕರ್ಮ ಸಮಾಜದ್ದು. ಇಂದಿಗೂ ಸಹ ವಿಶ್ವಕರ್ಮ ಸಮಾಜದ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಶಿಲ್ಪಕಲೆಯೂ ಸೇರಿದಂತೆ ಎಲ್ಲಾ ಕಲೆಗಳಲ್ಲೂ ವಿಶ್ವಕರ್ಮ ಸಮಾಜದ ತನ್ನ ವೈವಿಧ್ಯತೆಯನ್ನು ಮೆರೆದಿದೆ.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ವಿಶ್ವದಲ್ಲೇ ಕಲೆಯ ಮೌಲ್ಯ ಹಾಗೂ ವೈಭವವನ್ನು ನಾಡಿಗೆ ಸಾರಿದ ಕೀರ್ತಿ ವಿಶ್ವಕರ್ಮ ಸಮಾಜದ್ದು. ಇಂದಿಗೂ ಸಹ ವಿಶ್ವಕರ್ಮ ಸಮಾಜದ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಶಿಲ್ಪಕಲೆಯೂ ಸೇರಿದಂತೆ ಎಲ್ಲಾ ಕಲೆಗಳಲ್ಲೂ ವಿಶ್ವಕರ್ಮ ಸಮಾಜದ ತನ್ನ ವೈವಿಧ್ಯತೆಯನ್ನು ಮೆರೆದಿದೆ. ವಿಶ್ವಕರ್ಮ ಸಮಾಜ ವಿಭಿನ್ನವಾಗಿ ತನ್ನದೇಯಾದ ಗೌರವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ನಗರಸಭೆಯ ಅಧ್ಯಕ್ಷೆ ಶಿಲ್ಪ ಮುರುಳಿ ತಿಳಿಸಿದರು.

ನಗರದ ವಿಶ್ವಕರ್ಮ ಕಲ್ಯಾಣಮಂಟಪದಲ್ಲಿ ವಿಶ್ವಕರ್ಮ ಸಮಾಜ ಹಮ್ಮಿಕೊಂಡಿದ್ದ ಧಾರ್ಮಿಕ ಜಾಗೃತಿ ಕಾರ್ಯಕ್ರಮಕ್ಕೆ ಜ್ಯೋತಿಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು. ವಿಶ್ವಕರ್ಮ ಸಮಾಜದ ಇಂದು ಬೇರೆ ಎಲ್ಲಾ ಸಮಾಜಗಳಂತೆ ತನ್ನ ಅಸ್ಥಿತ್ವವವನ್ನು ಮೇಲ್ಟಕ್ಕೆ ಹೊಯುವಲ್ಲಿ ಯಶಸ್ವಿಯಾಗಿದೆ. ರಾಜಕೀಯ ಕ್ಷೇತ್ರವೂ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ವಿಶ್ವಕರ್ಮ ಸಮಾಜದ ಬಂಧುಗಳು ತಮ್ಮ ಕೊಡುಗೆ ನೀಡಲು ಯಶಸ್ವಿಯಾಗಿದ್ಧಾರೆ. ಮಂಗಳ ಕಾರ್ಯದಿಂದ ಎಲ್ಳಾ ಕಾರ್ಯದಲ್ಲೂ ನಾವು ಈ ಸಮಾಜದ ಕೊಡುಗೆಯನ್ನು ನೆನಪಿಸಿಕೊಳ್ಳಬೇಕಿದೆ ಎಂದರು.

ಶಹಾಪುರದ ವಿಶ್ವಕರ್ಮ ಏಕದಂಡಿಮಠದ ಶ್ರೀಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮ ಸಮಾಜ ತನ್ನ ಪೂರ್ವಜರು ನೀಡಿದ ಮಹಾನ್‌ ಕೊಡುಗೆಯಿಂದ ಜನರ ಮನದಲ್ಲಿ ಆಳಾವಾಗಿ ಬೇರೂರಿದೆ. ನಾವೆಲ್ಲರೂ ನಮ್ಮದೇಯಾದ ಕುಲಕಸುಬಿನಿಂದ ಬದುಕನ್ನು ಕಂಡುಕೊಂಡಿದ್ದೇವೆ. ಇಂದಿಗೂ ವಿಶ್ವಕರ್ಮ ಸಮಾಜ ಮೇಲ್ಪಂದಿಯಲ್ಲಿದೆ. ಅಮರಶಿಲ್ಪಿ ಜಕರಣಚಾರ್ಯರ ಶಿಲ್ಪಕಲೆ ವಿಶ್ವಖ್ಯಾತಿಯಾಗಿದೆ. ಮುಂಬರುವ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ವಿಶ್ವಕರ್ಮ ಸಮಾಜ ಗುರುತಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದರು.

ನಗರಸಭೆ ಉಪಾಧ್ಯಕ್ಷೆ ಸಿ.ಕವಿತಾ ಬೋರಯ್ಯ, ಸದಸ್ಯೆ ಆರ್.ಮಂಜುಳಾ, ತಾಲೂಕು ಅಧ್ಯಕ್ಷ ಎನ್.ಚಂದ್ರಶೇಖರಚಾರ್, ಕೆಪಿಸಿಸಿ ಕರಕುಶಲ ರಾಜ್ಯಪರಿಷತ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕಾರ್ಯದರ್ಶಿ ಸಿ.ಇ.ಪ್ರಸನ್ನ, ಉಪಾಧ್ಯಕ್ಷ ಎಸ್.ಶ್ರೀಧರಚಾರ್, ಮಾಜಿ ಅಧ್ಯಕ್ಷ ವೆಂಕಟೇಶ್‌ಚಾರ್, ಬಿಎನ್‌ಜಿ ವೆಂಕಟೇಶ್, ಎಂ.ಈ.ಜಗದೀಶ್ವರಚಾರ್, ಸರಸ್ವತಮ್ಮ, ರಾಜೇಶ್ವರಿ, ಸುಮಲತಾ, ರಾಮು ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!