ಅಧಿಕ ಇಳುವರಿಗೆ ನ್ಯಾನೊ ತಂತ್ರಜ್ಞಾನ ಉಪಯುಕ್ತ: ಹಂಸವೇಣಿ

KannadaprabhaNewsNetwork |  
Published : Aug 31, 2025, 01:08 AM IST
30 ಬೀರೂರು 1ಬೀರೂರು ಸಮೀಪದ ಜೋಡಿತಿಮ್ಮಾಪುರ ಗ್ರಾಮದ ಬಿ.ಜಿ.ಗೋವಿಂದಪ್ಪ ಅವರ ಜಮೀನಿನಲ್ಲಿ ಕೃಷಿ ಇಲಾಖೆ ಮತ್ತು ಇಫ್ಕೊ ಸಂಸ್ಥೆ ವತಿಯಿಂದ ಡ್ರೋನ್ ಮೂಲಕ ರಾಗಿ ಬೆಳೆಗೆ ನ್ಯಾನೊ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ ನಡೆಸಲಾಯಿತು | Kannada Prabha

ಸಾರಾಂಶ

ಬೀರೂರು, ‘ಬೆಳೆಗಳಿಗೆ ಮಿತಿಮೀರಿ ರಾಸಾಯನಿಕಗಳ ಬಳಕೆ ಮಾಡುವುದರಿಂದ ಭೂಮಿ ಫಲವತ್ತತೆ ಕಳೆದುಕೊಂಡು ಮಣ್ಣಿನಲ್ಲಿರುವ ಎರೆಹುಳುವಿನಂತ ಸೂಕ್ಷ್ಮ ಜೀವಿಗಳು ನಶಿಸಿ ಹೋಗುತ್ತಿವೆ. ನ್ಯಾನೊ ಯೂರಿಯಾ ಗೊಬ್ಬರ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಉತ್ತಮ ಫಸಲು ರೈತರ ಕೈಸೇರುತ್ತವೆ’ ಎಂದು ತರೀಕೆರೆ ಕೃಷಿ ಉಪ ನಿರ್ದೇಶಕಿ ಹಂಸವೇಣಿ ತಿಳಿಸಿದರು.

- ಡ್ರೋನ್ ಮೂಲಕ ನ್ಯಾನೊ ಯೂರಿಯಾ, ಡಿಎಪಿ ರಸಗೊಬ್ಬರ ಸಿಂಪಡಣೆ ಪ್ರಾತ್ಯಕ್ಷಿಕೆ

ಕನ್ನಡಪ್ರಭವಾರ್ತೆ, ಬೀರೂರು

‘ಬೆಳೆಗಳಿಗೆ ಮಿತಿಮೀರಿ ರಾಸಾಯನಿಕಗಳ ಬಳಕೆ ಮಾಡುವುದರಿಂದ ಭೂಮಿ ಫಲವತ್ತತೆ ಕಳೆದುಕೊಂಡು ಮಣ್ಣಿನಲ್ಲಿರುವ ಎರೆಹುಳುವಿನಂತ ಸೂಕ್ಷ್ಮ ಜೀವಿಗಳು ನಶಿಸಿ ಹೋಗುತ್ತಿವೆ. ನ್ಯಾನೊ ಯೂರಿಯಾ ಗೊಬ್ಬರ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಉತ್ತಮ ಫಸಲು ರೈತರ ಕೈಸೇರುತ್ತವೆ’ ಎಂದು ತರೀಕೆರೆ ಕೃಷಿ ಉಪ ನಿರ್ದೇಶಕಿ ಹಂಸವೇಣಿ ತಿಳಿಸಿದರು.ಬೀರೂರು ಹೋಬಳಿ ಜೋಡಿತಿಮ್ಮಾಪುರ ಗ್ರಾಮದ ಜಮೀನು ಒಂದರಲ್ಲಿ ಕೃಷಿ ಇಲಾಖೆ ಮತ್ತು ಇಫ್ಕೊ ಸಂಸ್ಥೆಯಿಂದ ದ್ರವ ರೂಪದ ರಸಗೊಬ್ಬರಗಳ ಉಪಯೋಗ, ಡ್ರೋನ್ ಮೂಲಕ ನ್ಯಾನೊ ಯೂರಿಯಾ, ಡಿಎಪಿ ರಸಗೊಬ್ಬರ ಸಿಂಪಡಣೆ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.‘ನ್ಯಾನೊ ಗೊಬ್ಬರ ಉಪಯೋಗಿಸುವುದರಿಂದ ರೈತರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯಲು ಸಹಾಯಕವಾಗುತ್ತದೆ. ರೈತರ ಆದಾಯ ವೃದ್ಧಿಸುವ ಉದ್ದೇಶದಿಂದ ಈ ತಂತ್ರಜ್ಞಾನ ಜಾರಿಗೆ ತರಲಾಗಿದೆ. ಸಾಂಪ್ರದಾಯಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ, ಪರಿಸರಕ್ಕೆ ಹಾನಿಯಾಗದಂತೆ ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ನ್ಯಾನೊ ರಸಗೊಬ್ಬರ ನೆರವಾಗುತ್ತವೆ. ಡ್ರೋನ್ ಮೂಲಕ ಸಿಂಪಡಣೆ ಮಾಡುವುದರಿಂದ ರೈತರಿಗೆ ಸಮಯ ಹಾಗೂ ಹಣ ಉಳಿತಾಯವಾಗುವ ಜತೆಗೆ ಕಾರ್ಮಿಕರ ವೆಚ್ಚವೂ ಉಳಿಯುತ್ತದೆ. ಸಸ್ಯಗಳಿಗೆ ನೇರವಾಗಿ ದ್ರವರೂಪದ ಗೊಬ್ಬರ ದೊರೆತು ಆಹಾರ ಉತ್ಪಾದನೆ ಮಾಡುವ ಹಸಿರು ಎಲೆಗಳ ಮೇಲೆ ಸಿಂಪಡಣೆಯಾಗುವುದರಿಂದ ಎಲೆಗಳಿಂದ ನೇರವಾಗಿ ಕಾಂಡಕ್ಕೆ ಹೋಗಿ, ಬೆಳೆಗಳು ಪುಷ್ಟಿ ಪಡೆದು ಉತ್ತಮವಾಗುತ್ತವೆ’ ಎಂದರು.ಇಫ್ಕೊ ಸಂಸ್ಥೆ ಸಂಯೋಜಕ ಅತಾವುಲ್ಲಾ ‘ಡ್ರೋನ್ ಮೂಲಕ ರಸಗೊಬ್ಬರ ಸಿಂಪಡಣೆ ಕುರಿತು’ ಮಾತನಾಡಿ, ‘ನ್ಯಾನೊ ಯೂರಿಯಾ ದ್ರಾವಣವನ್ನು ಎಕರೆಗೆ ಅರ್ಧ ಲೀಟರ್‌ ನಂತೆ ಬಳಸಬೇಕು. 10 ಲೀ. ಸಾಮರ್ಥ್ಯದ ಈ ಡ್ರೋನ್‌ ಗೆ ಅರ್ಧ ಲೀಟರ್ ನ್ಯಾನೊ ಗೊಬ್ಬರ ಬೆರೆಸಿ ಸಿಂಪಡಣೆ ಮಾಡಬೇಕು. ಡ್ರೋನ್ ಇಲ್ಲದಿದ್ದರೆ ರೈತರ ಸ್ಪ್ರೇಯರ್ ಕ್ಯಾನ್‌ ಗೆ ಒಂದು ಲೀಟರ್ ನೀರಿಗೆ 4 ಎಂಎಲ್ ನ್ಯಾನೊ ಯೂರಿಯಾ ಬೆರೆಸಿ ಸಿಂಪಡಣೆ ಮಾಡಬೇಕು. ಭೂಮಿ ಮೇಲೆ ರಾಸಾಯನಿಕ ಗೊಬ್ಬರಗಳ ಅಡ್ಡಪರಿಣಾಮ ತಡೆಯಲು ಹಾಗೂ ರಸಗೊಬ್ಬರಗಳು ಹೆಚ್ಚು ಪರಿಣಾಮಕಾರಿಯಾಗಲು ಇಫ್ಕೊ ಸಂಸ್ಥೆ ದ್ರವ ರೂಪದಲ್ಲಿ ಗೊಬ್ಬರಗಳನ್ನು ಪರಿಚಯಿಸುತ್ತಿದೆ’ ಎಂದು ಮಾಹಿತಿ ನೀಡಿದರು.ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಉಷಾಕುಮಾರಿ ಮಾತನಾಡಿದರು. ಕಡೂರು ಸಹಾಯಕ ಕೃಷಿ ನಿರ್ದೇಶಕ ಅಶೋಕ್ ಎಂ., ಕೃಷಿ ಅಧಿಕಾರಿಗಳಾದ ನಾಗರಾಜ್, ಜಯಶ್ರೀ, ಕರಿಯಪ್ಪ ದಕ್ಷ ಡ್ರೋನ್ ಸಂಸ್ಥೆಯ ಶರತ್, ಆತ್ಮಾ ವಿಭಾಗದ ತಾಂತ್ರಿಕ ವ್ಯವಸ್ಥಾಪಕಿ ಲತಾ, ಗ್ರಾಮದ ಮುಖಂಡ ಬಿ.ಜಿ.ಬಸಪ್ಪ, ಜಮೀನು ಮಾಲೀಕ ಬಿ.ಜಿ.ಗೋವಿಂದಪ್ಪ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು30 ಬೀರೂರು 1ಬೀರೂರು ಸಮೀಪದ ಜೋಡಿತಿಮ್ಮಾಪುರ ಗ್ರಾಮದ ಬಿ.ಜಿ.ಗೋವಿಂದಪ್ಪ ಜಮೀನಿನಲ್ಲಿ ಕೃಷಿ ಇಲಾಖೆ ಮತ್ತು ಇಫ್ಕೊ ಸಂಸ್ಥೆಯಿಂದ ಡ್ರೋನ್ ಮೂಲಕ ರಾಗಿ ಬೆಳೆಗೆ ನ್ಯಾನೊ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ ನಡೆಸಲಾಯಿತು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ