ಕನ್ನಡಪ್ರಭ ವಾರ್ತೆ ನಾಪೋಕ್ಲು
ಬುಧವಾರ ನಡೆದ ಅಂತಿಮ ಪಂದ್ಯದಲ್ಲಿ ಎರಡೂ ತಂಡಗಳು ಉತ್ತಮ ಸೆಣೆಸಾಟ ನಡೆಸಿದವು. ಪಂದ್ಯದಲ್ಲಿ ಎರಡೂ ತಂಡಗಳು 2-2 ಅಂತರದ ಸಮಬಲ ಸಾಧಿಸಿದವು. ಬಲ್ಲಮಾವಟಿ ತಂಡದ
ಪರ ಆಟಗಾರರಾದ ನೆರವಂಡ ಕವನ್, ಕುಶಾಲ್ ಬೋಪಯ್ಯತಲಾ ಒಂದು ಗೋಲು ಗಳಿಸಿದರು. ನಾಪೋಕ್ಲು ತಂಡದ ಪರ ಕೇಲೆಟಿರಮುತ್ತಣ್ಣ ಹಾಗೂ ಕುಲ್ಲೇಟಿರ ನಾಚಪ್ಪ ಗೋಲು ದಾಖಲಿಸಿದರು. ನಂತರ ನಡೆದ ಪೆನಾಲ್ಟಿ ಶೂಟ್ ಔಟ್ ನಲ್ಲಿ ನಾಪೋಕ್ಲು ಎ ತಂಡವು ಬಲ್ಲಮಾವಟಿ ಯೆಲ್ಲೋ ತಂಡದ ವಿರುದ್ಧ 4-2 ಅಂತರದ ಗೆಲುವು ಸಾಧಿಸಿತು.ಇದಕ್ಕೂ ಮೊದಲು ನಾಪೋಕ್ಲು ಎ ಮತ್ತು ಯವಕಪಾಡಿ ತಂಡಗಳ ನಡುವೆ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ನಾಪೋಕ್ಲು ಎ ತಂಡ 4 -1 ಅಂತರದಿಂದ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯ ನಾಪೋಕ್ಲು
ಮಹಿಳೆಯರ ಹಗ್ಗ ಜಗ್ಗಾಟ:
ತಂಡಗಳ ನಡುವೆ ಪ್ರಶಸ್ತಿಗಾಗಿ ಸೆಣೆಸಾಟ ನಡೆದು ನಾಪೋಕ್ಲು ತಂಡ ಗೆಲುವು ಸಾಧಿಸಿತು.
ಪ್ರತಿ ವರ್ಷ ಹಾಕಿ ಪಂದ್ಯಾವಳಿಯನ್ನು ಆಯೋಜಿಸುವುದರಿಂದ ಗ್ರಾಮೀಣ ಭಾಗದ ಹಲವು ಪ್ರತಿಭೆಗಳು ಹೊರಬರಲು ಸಾಧ್ಯವಾಗಿದೆ. ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತಾಗಲಿ ಎಂದು ಆಶಿಸಿದರು.
ನಾಲ್ ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅತಿಥಿಗಳಾಗಿ ಒಲಂಪಿಯನ್ ಮನೆಯಪಂಡ ಸೋಮಯ್ಯ ಕೂರ್ಗ್ ಹಾಕಿ ಅಸೋಸಿಯೇಷನ್ ನ ಅಧ್ಯಕ್ಷ ಪಳಂಗಡ ಲವ ಕುಮಾರ್, ಹಗ್ಗ ಜಗ್ಗಾಟ ಪಂದ್ಯಾವಳಿಯ ಟ್ರೊಫಿ ದಾನಿಗಳಾದ ತೋಲಂಡ ಸೋಮಯ್ಯ, ಬೊಟ್ಟೋಳಂಡ ಸದಾ, ನಾಪೋಕ್ಲು ಕೊಡವ ಸಮಾಜ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ, ಕೂಪದಿರ ಗಣಪತಿ, ಉದ್ಯಮಿ ಮಂಡಿರ ದೇವಿ, ಕ್ಲಬ್ ನ ಉಪಾಧ್ಯಕ್ಷ ಕೈಬುಲಿರ ಉಮೇಶ್ ಉತ್ತಪ್ಪ, ಕಾರ್ಯದರ್ಶಿ ಚಂಗೇಟಿರ ಕುಮಾರ್ ಸೋಮಣ್ಣ, ಖಜಾಂಜಿ ಚೀಯಂಡಿ ದಿನೇಶ್ , ಸಹ ಕಾರ್ಯದರ್ಶಿ ಮಚ್ಚುರ ಯದುಕುಮಾರ್ ಹಾಗೂ ನಿರ್ದೇಶಕರು ಮತ್ತು ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ಅಂಕುರ್ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಂದ ವಿಶೇಷ ವಾದ್ಯ ಮೇಲೆಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಲಾಯಿತು. ಶಿಕ್ಷಕಿ ನುಚ್ಚಿಮಣಿಯಂಡ ರಸಿತಾ ಮುತ್ತಣ್ಣ ಪ್ರಾರ್ಥಿಸಿ ಕ್ಲಬ್ ಸಂಚಾಲಕ
ಅಜ್ಜೆಟ್ಟಿರ ವಿಕ್ರಂ, ಕರವಂಡ ಸೀಮಾ ಗಣಪತಿ ಕಾರ್ಯ ನಿರ್ವಹಿಸಿದರು.