ಕರ್ನಾಟಕ ಮುಸ್ಲಿಂ ಜಮಾಯತ್ ಎಸ್‌ಎಸ್‌ಎಫ್ ನಾಪೋಕ್ಲು ಶಾಖೆ ವತಿಯಿಂದ ವಿಷನ್ ಸ್ಪ್ರಿಂಗ್ ಫೌಂಡೇಶನ್ ಸಹಯೋಗದೊಂದಿಗೆ ಕಣ್ಣು ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ನಾಫೋಕ್ಲು ಪಟ್ಟಣದ ಮಸೀದಿ ಮದ್ರಸ ಸಭಾಂಗಣದಲ್ಲಿ ನಡೆದ ಶಿಬಿರವನ್ನು ಎಸ್‌ವೈಎಸ್ ಮಡಿಕೇರಿ ಶಾಖೆಯ ಮುನಿರ್ ಮಲ್ಲಾರಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲುಕರ್ನಾಟಕ ಮುಸ್ಲಿಂ ಜಮಾಯತ್ ಎಸ್‌ಎಸ್‌ಎಫ್ ನಾಪೋಕ್ಲು ಶಾಖೆ ವತಿಯಿಂದ ವಿಷನ್ ಸ್ಪ್ರಿಂಗ್ ಫೌಂಡೇಶನ್ ಸಹಯೋಗದೊಂದಿಗೆ ಕಣ್ಣು ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.ನಾಫೋಕ್ಲು ಪಟ್ಟಣದ ಮಸೀದಿ ಮದ್ರಸ ಸಭಾಂಗಣದಲ್ಲಿ ನಡೆದ ಶಿಬಿರವನ್ನು ಎಸ್‌ವೈಎಸ್ ಮಡಿಕೇರಿ ಶಾಖೆಯ ಮುನಿರ್ ಮಲ್ಲಾರಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಸ್‌ವೈಎಸ್ ರಾಜ್ಯ ಅಧ್ಯಕ್ಷ ಅಬ್ದುಲ್ ಅಫಿಲ್ ಸಅದಿ ಮಾತನಾಡಿ, ಮನುಷ್ಯನಿಗೆ ಆರೋಗ್ಯ ಬಲು ಮುಖ್ಯ. ಅದರಲ್ಲೂ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಕಣ್ಣಿನ ತಪಾಸಣಾ ಶಿಬಿರದಿಂದ ಜನಸಾಮಾನ್ಯರಿಗೆ ಪ್ರಯೋಜನವಾಗಿವಾಗಲಿದೆ. ಕಣ್ಣಿನ ಆರೋಗ್ಯವನ್ನು ಕಾಪಾಡುವುದು ಕಣ್ಣನ್ನು ಸಂರಕ್ಷಿಸುವುದು ಅತಿ ಅಗತ್ಯ ಎಂದರು. ವಿಷನ್ ಸ್ಪ್ರಿಂಗ್ ಫೌಂಡೇಶನ್‌ನ ಅವಿನಾಶ್ ಮಾತನಾಡಿ, ಸಂಸ್ಥೆಯ ವತಿಯಿಂದ ಸಾಮಾಜಿಕ ಉಪಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ, ಕಾಫಿ ಹಾಗೂ ಟೀ, ತೋಟದ ಕಾರ್ಮಿಕರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ಮಾಡಲಾಗುತ್ತಿದೆ. ಶಸ್ತ್ರಚಿಕಿತ್ಸೆ ಅಗತ್ಯ ಇದ್ದವರಿಗೆ ಮಡಿಕೇರಿಯ ಮೆಡಿಕಲ್ ಕಾಲೇಜಿನಲ್ಲಿ ಅಗತ್ಯ ಚಿಕಿತ್ಸೆಗೆ ಶಿಫಾರಸು ಮಾಡಲಾಗುತ್ತದೆ ಎಂದರು.ಕರ್ನಾಟಕ ಮುಸ್ಲಿಂ ಜಮಾಯತ್ ಮಾಜಿ ಅಧ್ಯಕ್ಷ ಮನ್ಸೂರ್ ಅಲಿ ಶುಭ ಹಾರೈಸಿದರು.ಎಸ್‌ಎಸ್‌ಎಫ್ ಅಧ್ಯಕ್ಷ ಯೂನಸ್ ಪಿ.ಯು. , ಎಸ್‌ವೈಎಸ್ ಅಧ್ಯಕ್ಷ ಅಬ್ಬಾಸ್ ಬಿ.ಎ., ಅರಫತ್ ಪಿಎಂ, ಅಬ್ದುಲ್ ರಹಮಾನ್ ಹಜಿ, ರಹೀಮ್ ಮಾಸ್ಟರ್, ಅಜಿದ್ ಪಿಎಂ, ಯೂನಸ್ ಅಬ್ದುಲ್ ರೆಹಮಾನ್ ಎಇ, ಶಾಹಿದ್ ಇಮಾಮ, ಆಸೀಫ್ ಎಂ ಎ, ಅಬ್ದುಲ್ ಅಜೀಜ್, ಶಾಹಿದ್, ಚಾಯಿ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.