ನಾಪೋಕ್ಲು: 25ರಂದು ಆರೋಗ್ಯ ತಪಾಸಣೆ, ಉಚಿತ ಶಸ್ತ್ರಚಿಕಿತ್ಸೆ ಶಿಬಿರ

KannadaprabhaNewsNetwork |  
Published : Feb 22, 2024, 01:46 AM IST
ನಾಪೋಕ್ಲು ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ  ಪತ್ರಿಕಾಗೋಷ್ಠಿಯಲ್ಲಿ ಕೊಡವ ಸಮಾಜದ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಬೆಂಗಳೂರಿನ ಸಪ್ತಗಿರಿ ಮೆಡಿಕಲ್ ಕಾಲೇಜಿನ ಪ್ರತಿನಿಧಿ ನಿರಂಜನ್  ಶೆಟ್ಟಿ ಮತ್ತುಇನ್ನಿತರರು  ಉಪಸ್ಥಿತರಿದ್ದವರು. | Kannada Prabha

ಸಾರಾಂಶ

ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬೆಂಗಳೂರು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮಡಿಕೇರಿ, ಎ.ಕೆ ಸುಬ್ಬಯ್ಯ ಎಜುಕೇಶನ್ ಟ್ರಸ್ಟ್ ,ಕೊಡವ ಸಮಾಜ ಸ್ಪೋರ್ಟ್ಸ್ ಕಲ್ಚರಲ್ ಅಸೋಸಿಯೇಷನ್ ಹಾಗೂ ಶ್ರೀರಾಮ ಟ್ರಸ್ಟ್ ೨೫ರಂದು ನಾಪೋಕ್ಲಿನಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿವೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು ಸ್ಥಳಿಯ ನಂದಿನಿ ಆಸ್ಪತ್ರೆಯ ಬೆಳ್ಳಿ ಹಬ್ಬದ ಪ್ರಯುಕ್ತ ಸೂಪರ್ ಸ್ಪೆಷಾಲಿಟಿ ರೋಗಗಳ ಉಚಿತ ಬೃಹತ್ ತಪಾಸಣೆ ಮತ್ತು ಅರ್ಹ ಫಲಾನುಭವಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ ಮತ್ತು ಇತರ ಚಿಕಿತ್ಸೆಗಳ ಶಿಬಿರ 25ರಂದು ಸ್ಥಳೀಯ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.

ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬೆಂಗಳೂರು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮಡಿಕೇರಿ, ಎ.ಕೆ ಸುಬ್ಬಯ್ಯ ಎಜುಕೇಶನ್ ಟ್ರಸ್ಟ್ ,ಕೊಡವ ಸಮಾಜ ಸ್ಪೋರ್ಟ್ಸ್ ಕಲ್ಚರಲ್ ಅಸೋಸಿಯೇಷನ್ ಹಾಗೂ ಶ್ರೀರಾಮ ಟ್ರಸ್ಟ್ ಶಿಬಿರ ಆಯೋಜಿಸಿವೆ ಎಂದು ನಂದಿನಿ ಆಸ್ಪತ್ರೆಯ ನಿರ್ದೇಶಕ ಹಾಗೂ ಕೊಡವ ಸಮಾಜದ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಬಿರದಲ್ಲಿ ತಜ್ಞರಾದ ಡಾ. ಸುಧೀರ್, ಡಾ. ಪ್ರದೀಪ್ ಕುಮಾರ್, ಡಾ. ನಟರಾಜ್ ಸಣ್ಣಪ್ಪನವರ್, ಡಾ. ಎಚ್. ಕೆ ನಾಗರಾಜ್ ,ಡಾ. ಕೇಶವ್ , ಡಾ. ಮೋನಿಶ್ ,ಡಾ. ಮನೋಜ್ ಗೌಡ , ಡಾ. ಕರಣ್ ಶೆಟ್ಟಿ ಪಾಲ್ಗೊಳ್ಳಲಿರುವರು ಎಂದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ಶಿಬಿರ ಉದ್ಘಾಟಿಸುವರು. ನಂದಿನಿ ಆಸ್ಪತ್ರೆಯ ನಿರ್ಧೆಶಕ ಹಾಗೂ ಕೊಡವ ಸಮಾಜದ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಅಧ್ಯಕ್ಷತೆ ವಹಿಸುವರು.

ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ, ವಿಧಾನ ಪರಿಷತ್ ಸದಸ್ಯರಾದ ಮoಡೆಪoಡ ಸುಜಾಕುಶಾಲಪ್ಪ, ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಕೆ ಎಂ, ಕೊಡಗು ಜಿಲ್ಲಾ ಶಸ್ತ್ರಚಿಕಿತ್ಸಕ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಬೋಧಕ ಡಾ. ನಂಜುಂಡಯ್ಯ ಎಂ, ಕೊಡಗು ಜಿಲ್ಲಾ ಸ್ಥಾನಿಯ ವೈದ್ಯ ಅಧಿಕಾರಿ , ವೈದ್ಯಕೀಯ ವಿಜ್ಞಾನ ಸಂಸ್ಥೆ ಬೋಧಕ ಡಾ.ವಿ.ಎಸ್. ಸತೀಶ್, ಉಪ ಮುಖ್ಯ ವೈದ್ಯಾಧಿಕಾರಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಬೋಧಕ ಆಸ್ಪತ್ರೆ ಡಾ. ಶುಶ್ರುತ್ ಗೌಡ, ನಾಪೋಕ್ಲು

ಗ್ರಾಮ ಪಂಚಾಯತಿ ಅಧ್ಯಕ್ಷೆ ವನಜಾಕ್ಷಿ ಆರ್, ಆರ್, ಹೊದ್ದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಎಚ್.ಎ. ಹಂಸ, ಶ್ರೀರಾಮ ಟ್ರಸ್ಟ್‌ ಅಧ್ಯಕ್ಷ ಡಾ. ಬೊಪ್ಪಂಡ ಜಾಲಿ ಬೋಪಯ್ಯ ಉಪಸ್ಥಿತರಿರುವರೆಂದು ತಿಳಿಸಿದರು .

ಬೆಂಗಳೂರಿನ ಸಪ್ತಗಿರಿ ಮೆಡಿಕಲ್ ಕಾಲೇಜಿನ ಪ್ರತಿನಿಧಿ ನಿರಂಜನ್ ಶೆಟ್ಟಿ ಮಾತನಾಡಿ ಶಿಬಿರದಲ್ಲಿ ಹೃದಯ ರೋಗ, ಮೂತ್ರಪಿಂಡ, ನರರೋಗ ತೊಂದರೆ ಉಳ್ಳವರು ಪಾಲ್ಗೊಳ್ಳಬಹುದಾಗಿದೆ. ಪ್ರಾರಂಭಿಕ ಹಂತದಲ್ಲಿರುವ ಗುಣಪಡಿಸಲಾಗುವಂತಹ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ಮತ್ತು ಗರ್ಭ ಕೊರಳಿನ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ತಜ್ಞ ವೈದ್ಯರ ಸಲಹೆ ಮೇರೆಗೆ ಶಿಬಿರದಲ್ಲಿ ಉಚಿತವಾಗಿ ಬಿಪಿ, ಇಸಿಜಿ ಎಕೋ ಸ್ಕ್ಯಾನಿಂಗ್ ಮಾಡಲಾಗುವುದು.ಆಯುಷ್ಮಾನ್ ಭಾರತ್ , ಯಶಸ್ವಿನಿ ಯೋಜನೆ ಹೊಂದಿದವರಿಗೆ ಚಿಕಿತ್ಸೆ ನೀಡಲಾಗುವುದು ಎಂದರು.

ಕೊಡವ ಸಮಾಜದ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್, ಶ್ರೀ ರಾಮ ಟ್ರಸ್ಟ್ ಕಾರ್ಯದರ್ಶಿ ನಾಯಕಂಡ ದೀಪು ಚಂಗಪ್ಪ, ಕೊಡವ ಸಮಾಜದ ಉಪಾಧ್ಯಕ್ಷ ಕೊಂಡೀರ ನಂದಾ, ಸಹಕಾರ್ಯದರ್ಶಿ ಕರವಂಡ ಸರು ಸೋಮಣ್ಣ, ಶ್ರೀ ರಾಮ ಟ್ರಸ್ಟ್ ನಿರ್ದೇಶಕ ಕಲಿಯಂಡ ಕೌಶಿಕ್, ಬೊಳ್ಳಚೆಟ್ಟೀರ ಸುರೇಶ್, ಕೊಡವ ಸಮಾಜದ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ನಿರ್ದೇಶಕ ಕಲಿಯಂಡ ದೀಪು ಚಂಗಪ್ಪ, ಅರೆಯಡ ಗಣೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!