ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿನ ಕೆಪಿಎಸ್ ಶಾಲೆಯ ಆಟದ ಮೈದಾನದಲ್ಲಿ ಬೊಟ್ಟೋಳಂಡ ಕುಟುಂಬಸ್ಥರು ಆಯೋಜಿಸಿದ್ದ ಮೂರನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮೊದಲ ಬಾರಿ ಪೊನ್ನೋಲತಂಡ ಕುಟುಂಬಸ್ಥರು ಕೊಡವ ಹಗ್ಗಜಗ್ಗಾಟ ಕ್ರೀಡಾಕೂಟ ಆರಂಭಿಸಿದ್ದರು. ನಂತರದ ದಿನಗಳಲ್ಲಿ ಇದು ಹಾಕಿ ನಮ್ಮೆಯಂತೆ ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆ,. ಈ ಬಾರಿ 9 ಮಹಿಳಾ ತಂಡಗಳು ಕೂಡ ಪಾಲ್ಗೊಂಡಿರುವುದು ವಿಶೇಷ ಎಂದರುಕೊಡವ ಜನಾಂಗದಲ್ಲಿ ಹಬ್ಬದ ರೂಪದಲ್ಲಿ ಕ್ರೀಡೆ ಆಚರಿಸಲಾಗುತ್ತಿದೆ. ಮುಂದಿನ ವರ್ಷ ಐದು ತಂಡಗಳು ಸ್ಪರ್ಧೆ ಆಯೋಜಿಸಲು ಮುಂದೆ ಬಂದಿರುವುದು ಹೆಮ್ಮೆಯ ವಿಷಯ ಎಂದರು.
ಕೊಡಗು ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಮಾತನಾಡಿ, ಕ್ರೀಡೆಯಿಂದ ಸಮಾಜದಲ್ಲಿ ಪರಸ್ಪರ ಸಮರಸ್ಯ ಮೂಡಲು ಸಹಕಾರಿ ಎಂದರು.
ಆಶಿಕಾ ಬೋಪಣ್ಣ ಪ್ರಾರ್ಥಿಸಿದರು. ಬೊಟ್ಟೋಳಂಡ ಗಣೇಶ್ ಗಣಪತಿ ಸ್ವಾಗತಿಸಿದರು. ಮಾಳೆಟಿರ ಶ್ರೀನಿವಾಸ್ ಮತ್ತು ಬಾಳೆಯಡ ದಿವ್ಯ ಮಂದಪ್ಪ ನಿರೂಪಿಸಿದರು. ಭವಾನಿ ಜಗದೀಶ್ ವಂದಿಸಿದರು.
ಪ್ರದರ್ಶನ ಪಂದ್ಯದಲ್ಲಿ ನಾಪೋಕ್ಲು ತಂಡ ಅವಳಿ ಗೆಲವು
ಬೊಟ್ಟೋಳಂಡ ಕುಟುಂಬದ ಕ್ರೀಡಾ ಸಮಿತಿ ಅಧ್ಯಕ್ಷ ಬೊಟ್ಟೋಳಂಡ ಬಿ. ಗಣೇಶ್ ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಪೇರೂರು ಗ್ರಾಮದ ಕುಟುಂಬದ ಪಟ್ಟೆದಾರ ಬೊಟ್ಟೋಳಂಡ ಪೂಣಚ್ಚ, ಟೂರ್ನಮೆಂಟ್ ಡೈರೆಕ್ಟರ್ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಪೊನ್ನೋಲತಂಡ ಕುಟುಂಬದ ಅಧ್ಯಕ್ಷ ಪೊನ್ನೋಲತಂಡ ಬಿದ್ದಯ್ಯ, ಚೆಟ್ಟಂಗಡ ಕುಟುಂಬದ ಕಾರ್ಯದರ್ಶಿ ಚೆಟ್ಟಂಗಡ ರವಿ ಸುಬ್ಬಯ್ಯ, ಬೊಟ್ಟೋಳಂಡ ಕಾಫಿ ಹಿರಿಯರಾದ ಬಿ.ಡಿ.ಬಿದ್ದಯ್ಯ ,ಬೊಟ್ಟೋಳಂಡ ವಾಸು ಮುತ್ತಪ್ಪ, ,ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.ಆಕರ್ಷಕ ಮೆರವಣಿಗೆ:ಬೆಳಗ್ಗೆ ನಾಪೋಕ್ಲು ರಾಮಮಮದಿರದಲ್ಲಿ ಪೂಜೆ ಸಲ್ಲಿಸಿ ಪಟ್ಟಣದಿಂದ ಆಟದ ಮೈದಾನದವರೆಗೆ ಅಬಾಲವೃದ್ಧರಾದಿಯಾಗಿ ಕೊಡವ ಸಾಂಪ್ರದಾಯಿಕ ದಿರಿಸಿನಲ್ಲಿ ದುಡಿಕೊಟ್ ಪಾಟ್‌ನೊಂದಿಗೆ ಆಕರ್ಷಕ ಮೆರವಣಿಗೆ ನಡೆಯಿತು.