ಕನ್ನಡಪ್ರಭ ವಾರ್ತೆ ಮದ್ದೂರು
ನಿಖಿಲ್ ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ಜಿಪಂ ಮಾಜಿ ಸದಸ್ಯ ಎಸ್ .ಗುರುಚರಣ್ ಸೇರಿ ಜೆಡಿಎಸ್ ಮತ್ತು ಮೈತ್ರಿ ಪಕ್ಷದ ಮುಖಂಡರು ಸಾಥ್ ನೀಡಿದರು.
ಕ್ಷೇತ್ರ ವ್ಯಾಪ್ತಿ ನಿಡಘಟ್ಟ, ರುದ್ರಾಕ್ಷಿಪುರ, ಸೋಮನಹಳ್ಳಿ, ಹೆಮ್ಮನಹಳ್ಳಿ, ಕೆಸ್ತೂರು, ಮಲ್ಲನಕುಪ್ಪೆ, ಮುದಿಗೆರೆ, ಬೆಸಗರಹಳ್ಳಿ, ವಳಗೆರೆಹಳ್ಳಿ, ಗೆಜ್ಜಲಗೆರೆ, ನಗರಕೆರೆ ಗ್ರಾಪಂ ವ್ಯಾಪ್ತಿಗಳಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಮೈತ್ರಿ ಪಕ್ಷದ ನಾಯಕರು ಸುಡುಬಿಸಿಲನ್ನೂ ಲೆಕ್ಕಿಸದೇ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮತ ಬೇಡಿದರು.ನಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿ.ಎ.ಕೆರೆ, ಮತ್ತು ಭಾರತೀನಗರ ಗ್ರಾಪಂ ವ್ಯಾಪ್ತಿಯ ಗುರುದೇವರಹಳ್ಳಿ, ದೊಡ್ಡ ಅರಸಿನಕೆರೆ, ಮಾದರಹಳ್ಳಿ, ಯಡಗನಹಳ್ಳಿ, ಕಾಡುಕೊತ್ತನಹಳ್ಳಿ, ಕೆ.ಶೆಟ್ಟಿಹಳ್ಳಿ, ಭಾರತೀನಗರ, ತೊರೆ ಬೊಮ್ಮನಹಳ್ಳಿ, ಕೂಳಗೆರೆ, ಕೆ .ಬೆಳ್ಳೂರು, ಕೆ.ಹೊನ್ನಲಗೆರೆ ಗ್ರಾಪಂ ವ್ಯಾಪ್ತಿಗಳಲ್ಲಿ ಪ್ರಚಾರ ನಡೆಸಿದರು.
ಸಂಜೆ ಮದ್ದೂರು ಪಟ್ಟಣ ಹಾಗೂ ಶಿವಪುರದಲ್ಲೂ ಸಹ ತೆರೆದ ವಾಹನದಲ್ಲಿ ಮೈತ್ರಿ ಪಕ್ಷದ ಮುಖಂಡರೊಂದಿಗೆ ಪ್ರಚಾರ ನಡೆಸಿ, ತಮ್ಮ ತಂದೆ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಬಹುಮತ ನೀಡಿ ಗೆಲುವು ದೊರಕಿಸಿ ಕೊಡುವಂತೆ ಕಳಕಳಿಯ ಮನವಿ ಮಾಡಿದರು. ನಿಖಿಲ್ ಹೋದ ಕಡೆಗಳಲ್ಲಿ ಪಟಾಕಿ ಸಿಡಿಸಿ, ಭಾರಿ ಗಾತ್ರದ ಹೂವಿನ ಹಾರ ಹಾಕಿ ಅದ್ಧೂರಿಯಾಗಿ ಬರಮಾಡಿಕೊಂಡರು.