ಮಡಿಕೇರಿ ತಾಲೂಕು ಕಸಾಪದ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಡಿಕೇರಿ ತಾಲೂಕು ಕಡಂಗ ಅರಪಟ್ಟು ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮೇ 20ರಂದು ಜರುಗಲಿದ್ದು, ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿಚಾರಗೋಷ್ಠಿ, ಗೀತ ಗಾಯನ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ
ನಾಪೋಕ್ಲು: ಮಡಿಕೇರಿ ತಾಲೂಕು ಕಸಾಪದ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಡಿಕೇರಿ ತಾಲೂಕು ಕಡಂಗ ಅರಪಟ್ಟು ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮೇ 20ರಂದು ಜರುಗಲಿದ್ದು, ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿಚಾರಗೋಷ್ಠಿ, ಗೀತ ಗಾಯನ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಕವಿ ಗೋಷ್ಠಿಯಲ್ಲಿ ಕವನ ವಾಚಿಸಲು ಆಸಕ್ತ ಕವಿ/ ಕವಿಯಿತ್ರಿಯರಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ.ಮಡಿಕೇರಿ ತಾಲೂಕಿನ ಆಸಕ್ತ ಕವಿ/ ಕವಿಯಿತ್ರಿಯರು ಕನ್ನಡ ಭಾಷೆಯ ಒಂದು ಕವನವನ್ನು ಈ ಕೆಳಗೆ ಸೂಚಿಸಿದ ವಿಳಾಸಕ್ಕೆ ಮೇ 5ರೊಳಗೆ ಕಳಹಿಸಿಕೊಡಬೇಕು. ಕವನವು 16 ಗೆರೆಗಳಿಗೆ ಸೀಮಿತವಾಗಿರಬೇಕು. ಕನ್ನಡ ಭಾಷೆಯ ಚುಟುಕು ಕವನ (4 ಸಾಲಿನ ಗರಿಷ್ಠ 4 ಕವನಗಳಿಗೆ ಮಾತ್ರ ಅವಕಾಶ)ಗಳು. ವಿಶೇಷವಾಗಿ ಮಕ್ಕಳ ಕವನ (6 ರಿಂದ 13 ವರ್ಷ ಒಳಪಟ್ಟವರು)ಗಳಿಗೂ ಅವಕಾಶ ಕಲ್ಪಿಸಲಾಗಿದೆ. ಕವನಗಳನ್ನು ಕಳುಹಿಸುವವರು ತಮ್ಮ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರವನ್ನು ತಪ್ಪದೆ ಕಳುಹಿಸಿಕೊಡಬೇಕು. ಮಾಹಿತಿಗಳಿಲ್ಲದ ಕವನಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಕವನಗಳನ್ನು ಮತ್ತು ಮಾಹಿತಿಯನ್ನು ಈ ಕೆಳಗೆ ಸೂಚಿಸಿದ ವ್ಯಾಟ್ಸಾಪ್ ಸಂಖ್ಯೆಗೆ ಕಳುಹಿಸಬಹುದು. ಕವನಗಳನ್ನು ಟೈಪ್ ಮಾಡಿ ಕಳುಹಿಸಬೇಕು. ವಾಟ್ಸಾಪ್ ನಲ್ಲಿ ಕವನದ ಛಾಯ ಪ್ರತಿಯನ್ನು ಕಳುಹಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ.ಬಂದ ಕವನಗಳನ್ನು ಪರಾಮರ್ಶಿಸಿ ಆಯ್ಕೆಯಾದ ಕವಿಗಳಿಗೆ ಕವನ ವಾಚನ ಮಾಡಲು ಅವಕಾಶ ನೀಡಲಾಗುವುದು. ವಾಟ್ಸಾಪ್ ಸೌಲಭ್ಯ ಇಲ್ಲದಿರುವವರು ಅಂಚೆ ಮೂಲಕ ಈ ವಿಳಾಸಕ್ಕೆ ಅಗತ್ಯ ಮಾಹಿತಿಯೊಂದಿಗೆ ಕಳುಹಿಸಿಕೊಡಬಹುದು. ಕವನ ಕಳುಹಿಸಬೇಕಾದ ವಿಳಾಸ: ಕಡ್ಲೇರ ತುಳಸಿ ಮೋಹನ್, ಅಧ್ಯಕ್ಷರು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್
ಬೆಟಗೇರಿ ಗ್ರಾಮ ಮತ್ತು ಅಂಚೆ, ಮಡಿಕೇರಿ ತಾಲೂಕು, 571201
ಮೊಬೈಲ್ ಸಂಖ್ಯೆ-9483110940ಗೆ ಕಳುಹಿಸುವಂತೆ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಬಾಳೆಯಡ ದಿವ್ಯಾ ಮಂದಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.