ನಾಪೋಕ್ಲು: ರಾಷ್ಟ್ರೀಯ ಕ್ರೀಡಾ ದಿನಾಚರಣೆ

KannadaprabhaNewsNetwork | Published : Aug 31, 2024 1:44 AM

ಸಾರಾಂಶ

ಕ್ರೀಡಾ ನಿಲಯದ ಕ್ರೀಡಾಪಟುಗಳಿಗೆ ಹಾಕಿ ಸ್ಟಿಕ್‌ಗಳನ್ನು ವಿತರಿಸಲಾಯಿತು. ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿ ವಿಜೇತರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಡಿಕೇರಿಯ ಕ್ರೀಡಾ ಇಲಾಖೆ ಸಭಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಯಿತು.

ಕೊಡಗು ಜಿಲ್ಲಾ ದೈಹಿಕ ಶಿಕ್ಷಣ ಸಂಯೋಜಕ ಗಾಯತ್ರಿ, ಮೇಜರ್ ಧ್ಯಾನಚ೦ದ್ ಅವರಿಗೆ ಗೌರವ ಅರ್ಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಟಿ. ವಿಸ್ಮಯ ವಹಿಸಿದ್ದರು. ಅಥ್ಲೆಟಿಕ್ಸ್ ತರಬೇತುದಾರ ಮಹಾಬಲ ಕೆ., ಹಾಕಿ ತರಬೇತುದಾರರಾದ ಬಿಂದಿಯಾ ಪಾಲ್ಗೊಂಡಿದ್ದರು. ಕ್ರೀಡಾ ನಿಲಯದ ಕ್ರೀಡಾಪಟುಗಳಿಗೆ ಹಾಕಿ ಸ್ಟಿಕ್‌ಗಳನ್ನು ವಿತರಿಸಲಾಯಿತು. ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿ ವಿಜೇತರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.ಕ್ರೀಡಾಕೂಟದ ವಿಜೇತರು:ಗುಡ್ಡಗಾಡು ಓಟದ ಸ್ಪರ್ಧೆ: 14 ವರ್ಷ ವಯೋಮಿತಿಯ ಬಾಲಕರ ವಿಭಾಗ; ವೀನ್ ಎಸ್‌.ಡಿ. ಪ್ರಥಮ, ರಾಹುಲ್ ಜಿ.ಎಂ. ದ್ವಿತೀಯ, ಯುವಕೆಟಿ ತೃತೀಯ. 14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗ; ನಿಸರ್ಗ ಎಸ್ಎ ಪ್ರಥಮ, ಅಂಚಲ್ತೇಜಮ್ಮ ಸಿ.ಕೆ. ದ್ವಿತೀಯ, ನಿಷ್ಮಾ ತೃತೀಯ.

ಶಟಲ್ ಬ್ಯಾಡ್ಮಿಂಟನ್: 16 ವರ್ಷ ವಯೋಮಿತಿಯ ಬಾಲಕಿಯರ ಸಿಂಗಲ್ಸ್‌ ವಿಭಾಗ; ಆದ್ಯ ಕೆ.ಎಲ್. ಪ್ರಥಮ, ವರ್ಷಿತಾ ಕಾರ್ಯಪ್ಪ ದ್ವಿತೀಯ. ಬಾಲಕರ ವಿಭಾಗ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್; ತಣವ್ ಪೂವಣ್ಣ ಮತ್ತು ದೃವ್ ಮುತ್ತಣ್ಣ ಎಂ.ಯು. ಪ್ರಥಮ, ಹೃದಯ ಎಸ್.ಪಿ. ಮತ್ತು ಹೃಷಿಲ್ ಎಂ. ದ್ವಿತೀಯ. ಬಾಲಕಿಯರ ವಿಭಾಗ; ಎಂ.ವಿ. ಶ್ರೀನಿಧಿ ಮತ್ತು ಅಧಿತ್ರಿ ರವಿಕಿರಣ್ ಕೃಷ್ಣ ಪ್ರಥಮ, ಪ್ರಜ್ಞಾ ಬಿ.ಪಿ. ಮತ್ತು ವಿ೦ಪಲ್ ದೇಚಮ್ಮ ಪಿ.ಎಂ ದ್ವಿತೀಯ.

ಟೇಬಲ್ ಟೆನ್ನಿಸ್ ಸಿಂಗಲ್ಸ್: 16ವರ್ಷದ ವಯೋಮಿತಿಯ ಬಾಲಕರ ವಿಭಾಗ; ಐವಾನ್‌ ವಸೀಂ ಪ್ರಥಮ, ಲಿತಿಶ್ ಕೆ. ದ್ವಿತೀಯ.

ಬಾಲಕಿಯರ ವಿಭಾಗ ಎ೦. ಲೋಚನ ಸೂರಜ್ ಪ್ರಥಮ, ಶೀತಲ್ ಎಂ.ಎ ದ್ವಿತೀಯ. ಟೇಬಲ್ ಟೆನಿಸ್ ಡಬಲ್ಸ್: 16 ವರ್ಷ ವಯೋಮಿತಿಯ ಬಾಲಕರ ವಿಭಾಗ ನಿತೀಶ್ ಕೆ. ಮತ್ತು ಐವಾನ್ ವಸೀಂ ಪ್ರಥಮ,

ಸುಧನ್ವ ಜಿ.ಎಸ್. ಮತ್ತು ಅವನೀಶ್ ಜಿ.ಎಚ್. ದ್ವಿತೀಯ. ಬಾಲಕಿಯರ ವಿಭಾಗ; ಲೋಚನ ಸೂರಜ್ ಮತ್ತು ಲಿಪಿಕಾ ಪ್ರಥಮ, ಶೀತಲ್ ಎಂ.ಎ ಮತ್ತು ಪ್ರಕೃತಿ ಎಸ್.ಪಿ. ದ್ವಿತೀಯ.

Share this article