ತೀವ್ರ ಹಣಾಹಣಿ: ಕುಲ್ಲೆಟಿರ-ಚೆಪ್ಪುಡಿರ ಫೈನಲ್‌ ಪ್ರವೇಶ

KannadaprabhaNewsNetwork |  
Published : May 02, 2026, 02:45 AM IST
ನಾಪೋಕ್ಲುವಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವಕೌಟುಂಬಿಕ ಹಾಕಿ ಪಂದ್ಯಾವಳಿಯ ದೃಶ್ಯ | Kannada Prabha

ಸಾರಾಂಶ

ಇಲ್ಲಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಪುರುಷರ ಹಾಕಿ ಪಂದ್ಯಾಟದಲ್ಲಿ ಮೊದಲ ಸೆಮಿಫೈನಲ್ ಕುಲ್ಲೆಟಿರ ಮತ್ತು ಪಳಂಗಂಡ ತಂಡಗಳ ನಡುವೆ ನಡೆಯಿತು.

ದುಗ್ಗಳ ಸದಾನಂದ ನಾಪೋಕ್ಲು: ಇಲ್ಲಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಪುರುಷರ ಹಾಕಿ ಪಂದ್ಯಾಟದಲ್ಲಿ ಮೊದಲ ಸೆಮಿಫೈನಲ್ ಕುಲ್ಲೆಟಿರ ಮತ್ತು ಪಳಂಗಂಡ ತಂಡಗಳ ನಡುವೆ ನಡೆಯಿತು. ಎರಡು ತಂಡಗಳ ನಡುವಿನ ಪಂದ್ಯ ವೀಕ್ಷಕರ ಕುತೂಹಲಕ್ಕೆ ಕಾರಣವಾಯಿತು. ಪಂದ್ಯದಲ್ಲಿ ತಂಡಗಳು 2-2 ಗೋಲು ಗಳಿಸಿದವು. ಟೈ ಬ್ರೆಕರ್ ನಲ್ಲಿ ತಂಡವು 2-1 ಅಂತರದಿಂದ ಪಳಂಗಂಡ ವಿರುದ್ಧ ಕುಲ್ಲೆಟಿರ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.ಮತ್ತೊಂದು ಪಂದ್ಯದಲ್ಲಿ ಚೆಪ್ಪುಡಿರ ಹಾಗೂ ಪರದಂಡ ತಂಡಗಳು ಬಿರುಸಿನ ಆಟವಾಡಿದವು. ಪಂದ್ಯದಲ್ಲಿ ಚೆಪ್ಪುಡಿರ ತಂಡವು ಪಳಂಗಂಡ ತಂಡವನ್ನು 4-3ರಿಂದ ಮಣಿಸಿ ಫೈನಲ್ ಪ್ರವೇಶಿಸಿತು. ಪರದಂಡ ತಂಡದ ಪರ ರಂಜನ್ ಅಯ್ಯಪ್ಪ 2, ಪ್ರಜ್ವಲ್ ಪೂವಣ್ಣ 1 ಗೋಲು ಬಾರಿಸಿದರೇ, ಚೆಪ್ಪುಡಿರ ತಂಡದ ಪರ ದಿವಾನ್ ಸುಬ್ಬಯ್ಯ, ಪ್ರಣವ್, ಚೇತನ್ ಚಿಣ್ಣಪ್ಪ ಮತ್ತು ವಚನ್ ಚಿಣ್ಣಪ್ಪ ತಲಾ 1 ಗೋಲ್ ಬಾರಿಸಿದರು.

ಶನಿವಾರ ಅಂತಿಮ ಹಣಾಹಣಿ ನಡೆಯಲಿದೆ.

ಮಹಿಳಾ ವಿಭಾಗ: ಮಹಿಳೆಯರ 5 ಏ ಹಾಕಿ ಪಂದ್ಯಾವಳಿಯಲ್ಲಿ ಕಂಬಿರಂಡ ಮತ್ತು ಕೇಚೆಟಿರ ತಂಡಗಳು ಫೈನಲ್ ನಲ್ಲಿ ಸ್ಪರ್ಧಿಸಿದವು. ಗುರುವಾರ ನಡೆದ ಪಂದ್ಯ ವೀಕ್ಷಕರ ಮನತಣಿಸಿತು. ಪಂದ್ಯದಲ್ಲಿ ಎರಡು ತಂಡಗಳು ಸಮಬಲದ ಹೋರಾಟ ನಡೆಸಿದವು. ಪಂದ್ಯದಲ್ಲಿ ಎರಡು ತಂಡಗಳು 2-2 ಗೋಲು ಗಳಿಸಿದವು. ಫಲಿತಾಂಶಕ್ಕಾಗಿ ಟೈ ಬ್ರೇಕರ್ ಮೊರೆ ಹೋಗಬೇಕಾಯಿತು. ಟೈ ಬ್ರೇಕರ್ ನಲ್ಲಿ ಕೆಚೆಟ್ಟಿರ 2-1 ಅಂತರದಿಂದ ಕಂಬಿರಂಡ ವಿರುದ್ಧ ಗೆಲುವು ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಕಂಬಿರಂಡ ತಂಡ ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಹೆ ಸಂಸ್ಥಾಪಕ ಡಾ.ಟಿ.ಎಂ.ಎ. ಪೈ 128ನೇ ಜನ್ಮದಿನೋತ್ಸವ
ನನ್ನ ಯಶಸ್ಸಿಗೆ ಕೊಡವರ ಆಶೀರ್ವಾದ ಅಮೂಲ್ಯ: ಹರ್ಷಿಕಾ ಪೂಣಚ್ಚ