ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯ ಮತ ಎಣಿಕೆ ಮುಕ್ತಾಯಗೊಂಡು ನರಸಿಂಹ ಅಡಿ(ಗುರು) 59 ಮತಗಳನ್ನು ಪಡೆದು ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಶಿರಸಿ
ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯ ಮತ ಎಣಿಕೆ ಮುಕ್ತಾಯಗೊಂಡು ನರಸಿಂಹ ಅಡಿ(ಗುರು) 59 ಮತಗಳನ್ನು ಪಡೆದು ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಪ್ರದೀಪ ರಾಮಚಂದ್ರ ಶೆಟ್ಟಿ 50 ಮತ ಪಡೆದು ಪರಾಜಿತರಾಗಿದ್ದಾರೆ.ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷ ಸ್ಥಾನದಲ್ಲಿ ಮಾರುತಿ ನಾಯ್ಕ ಹೊನ್ನಾವರ (91), ಬಸವರಾಜ ವಿ.ಪಾಟೀಲ ಮುಂಡಗೋಡ (78), ಸುಮಂಗಲಾ ಹೊನ್ನೆಕೊಪ್ಪ ಶಿರಸಿ (63) ಆಯ್ಕೆಯಾಗಿದ್ದು ಇನ್ನೋರ್ವ ಅಭ್ಯರ್ಥಿ ನರಸಿಂಹ ಸಾತೊಡ್ಡಿ (46) ಪರಾಜಿತರಾಗಿದ್ದಾರೆ.ಮುಂಜಾನೆ ಮತದಾನ ಆರಂಭವಾಗಿ ಮತ ಎಣಿಕೆ ಮುಕ್ತಾಯವಾಗುವ ವರೆಗೆ ಮತ್ತು ಅಭ್ಯರ್ಥಿಗಳ ಆಯ್ಕೆ ಘೋಷಣೆ ಮಾಡುವವರೆಗೂ ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆ ನಡೆಯಿತು. ಅವಿರೋಧ:ಇನ್ನು ಇದಕ್ಕೂ ಮೊದಲು ಜಿಲ್ಲಾ ಪತ್ರಿಕಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಬೆಟ್ಟಕೊಪ್ಪ, ಖಜಾಂಚಿಯಾಗಿ ರಾಜೇಂದ್ರ ಶಿಂಗನಮನೆ, ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ವಿಠ್ಠಲದಾಸ ಕಾಮತ್, ಕಾರ್ಯದರ್ಶಿಯಾಗಿ ಜೆ.ಆರ್. ಸಂತೋಷಕುಮಾರ್, ಪ್ರಭಾವತಿ ಗೋವಿ, ಅನಂತ ದೇಸಾಯಿ ಜೋಯಿಡಾ ಹಾಗೂ ಕಾರ್ಯಕಾರಣಿ ಸದಸ್ಯರಾಗಿ ಸಂದೇಶ ಭಟ್ ಬೆಳಖಂಡ, ಪ್ರವೀಣ ಹೆಗಡೆ ಕೊಂಬೆಮನೆ, ರವಿ ಹೆಗಡೆ ಗಡಿಹಳ್ಳಿ, ಜಯರಾಜ ಗೋವಿ, ಫಯಾಜ್ ಮುಲ್ಲಾ, ಶಾಂತೇಶ್ ಬೆನಕನಕೊಪ್ಪ, ಸತೀಶ್ ತಾಂಡೇಲ, ಸುಧೀರ್ ಕಡ್ನೀರ್, ಶ್ರೀಧರ ಹೆಗಡೆ, ಹರೀಶ್ ಅವಿರೋಧವಾಗಿ ಆಯ್ಕೆಯಾದರು.ಮುಖ್ಯ ಚುನಾವಣಾಧಿಕಾರಿಯಾಗಿ ಅಶೋಕ ಹಾಸ್ಯಗಾರ, ಸಹಾಯಕರಾಗಿ ರಘುಪತಿ ಯಾಜಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಆರ್.ಪಿ. ಹೆಗಡೆ, ಅಶ್ವಿನಿ ಗೌಡ ಸಹಕರಿಸಿದರು. 112 ಮತ ಚಲಾವಣೆ
ಅಧ್ಯಕ್ಷರಾಗಿ ಆಯ್ಕೆಯಾದ ನರಸಿಂಹ ಅಡಿ 9 ಮತಗಳ ಅಂತರದಿಂದ ಜಯ ಗಳಿಸಿದರು. ಒಟ್ಟೂ 130 ಮತಗಳಲ್ಲಿ 112 ಮತ ಚಲಾವಣೆಗೊಂಡಿತು. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸೇರಿ ಒಟ್ಟೂ 5 ಮತಗಳು ತಿರಸ್ಕೃತಗೊಂಡವು. ಗೆದ್ದ ಅಭ್ಯರ್ಥಿಗಳಿಗೆ ಜಿಲ್ಲೆಯ ಪತ್ರಕರ್ತರ ತಂಡ ಅಭಿನಂದನೆ ಸಲ್ಲಿಸಿತು. ಪತ್ರಕರ್ತರಾದ ಮಂಜುನಾಥ ಈರಗೊಪ್ಪ, ಮಹಾದೇವ ನಾಯ್ಕ ಸಹಕಾರ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.