ನೌಕರರ ಸಂಘ ತಾಲೂಕು ಅಧ್ಯಕ್ಷರಾಗಿ ನರಸಿಂಹ ಆಯ್ಕೆ

KannadaprabhaNewsNetwork |  
Published : Feb 09, 2025, 01:15 AM IST
ಫೋಟೋ 8ಪಿವಿಡಿ6ಅಧ್ಯಕ್ಷ ಆರ್‌.ಎಂ.ನರಸಿಂಹಫೋಟೋ 8ಪಿವಿಡಿ7ಕಾರ್ಯದರ್ಶಿ ಅರ್ಚನಾ 8ಪಿವಿಡಿ8ಗೌರವಾಧ್ಯಕ್ಷ ದೊಡ್ಡಯ್ಯ,8ಪಿವಿಡಿ9ವೇಣುಗೋಪಾಲರೆಡ್ಡಿ,8ಪಿವಿಡಿ10ಸಾಧಿಕ್‌ | Kannada Prabha

ಸಾರಾಂಶ

ಆಯ್ಕೆ ಪ್ರಕ್ರಿಯೆ ಬಳಿಕ ತಾಲೂಕು ಸಂಘದ ಅಧ್ಯಕ್ಷ ಆರ್.ಎಂ.ನರಸಿಂಹ ಮಾತನಾಡಿ, ಶಿಕ್ಷಕರ ಸಮಸ್ಯೆ ಹಾಗೂ ನ್ಯಾಯಯುತ ಬೇಡಿಕೆಯ ನಿವಾರಣೆಗಾಗಿ ಸಂಘ ರಚನೆಯಾಗಿದ್ದು, ಶಿಕ್ಷಣ ಇಲಾಖೆಯ ಸಮಸ್ತ ನೌಕರರನ್ನು ಒಳಗೊಂಡಿರುತ್ತದೆ.

ಕನ್ನಡಪ್ರಭವಾರ್ತೆ ಪಾವಗಡ

ಸರ್ಕಾರಿ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘದ ರಾಜ್ಯಾಧ್ಯಕ್ಷ ಚೌಡಪ್ಪ ಹಾಗೂ ಮಧುಗಿರಿ ಜಿಲ್ಲಾ ಅಧ್ಯಕ್ಷ ಸಿದ್ದೇಶ್ ಅವರ ಸಮ್ಮುಖದಲ್ಲಿ ಶನಿವಾರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಪಾವಗಡ ತಾಲೂಕು ಘಟಕದ ಅಧ್ಯಕ್ಷರಾಗಿ ತಾಲೂಕಿನ ರಾಜವಂತಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕ ಆರ್.ಎಂ.ನರಸಿಂಹ ಹಾಗೂ ಗೌರವಾಧ್ಯಕ್ಷರಾಗಿ ಉಪನ್ಯಾಸಕ ಓಬಳಾಪುರದ ದೊಡ್ಡಯ್ಯ ಅವರನ್ನು ನೇಮಕಗೊಳಿಸಿ ಅದೇಶ ಹೊರಡಿಸಲಾಗಿದೆ.

ತಾಲೂಕು ಸಂಘದ ಕಾರ್ಯದರ್ಶಿಯಾಗಿ ಶಿಕ್ಷಕಿ ಅರ್ಚನಾ, ಖಜಾಂಜಿ ಸಾದಿಕ್ ಉಲ್ಲಾ ಶರೀಫ್. ಜಿಲ್ಲಾ ಘಟಕದ ಸದಸ್ಯರಾಗಿ ಇಸಿಒ ವೇಣುಗೋಪಾಲ್ ರೆಡ್ಡಿ. ಹಿರಿಯ ಉಪಾಧ್ಯಕ್ಷರಾಗಿ ಶಿಕ್ಷಕರಾದ ಸಿಆರ್‌ಪಿ ಬಂಗಾರು ಲಿಂಗಂ, ಎಂ.ಪಿ.ಶಾಂತಕುಮಾರಿ ಹಾಗೂ ವೆಂಕಟಲಕ್ಷ್ಮೀಯವರನ್ನು ಆಯ್ಕೆಗೊಳಿಸಿ ಜವಾಬ್ದಾರಿ ವಹಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಬಳಿಕ ತಾಲೂಕು ಸಂಘದ ಅಧ್ಯಕ್ಷ ಆರ್.ಎಂ.ನರಸಿಂಹ ಮಾತನಾಡಿ, ಶಿಕ್ಷಕರ ಸಮಸ್ಯೆ ಹಾಗೂ ನ್ಯಾಯಯುತ ಬೇಡಿಕೆಯ ನಿವಾರಣೆಗಾಗಿ ಸಂಘ ರಚನೆಯಾಗಿದ್ದು, ಶಿಕ್ಷಣ ಇಲಾಖೆಯ ಸಮಸ್ತ ನೌಕರರನ್ನು ಒಳಗೊಂಡಿರುತ್ತದೆ. ಎಲ್ಲಾ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯ ನಿರ್ವಹಿಸಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಶಿಕ್ಷಣ ಕ್ಷೇತ್ರದ ನೌಕರರ ಸಹಕಾರದೊಂದಿಗೆ ಸದಾ ಸಮನ್ವಯ ಸಾಧಿಸಲು ಸಹಕಾರಿಯಾಗಿದೆ. ನೌಕರರು ಇಲಾಖೆಯ ಬೆನ್ನೆಲುಬಾಗಿ ಧನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗಿದೆ ಎಂದರು. ಸಂಘದ ಜಿಲ್ಲಾ ಖಜಾಂಚಿ ನಾಗವೀಣಾ. ಜಿಲ್ಲಾ ಕಾರ್ಯದರ್ಶಿ ರವೀಂದ್ರ ಹಾಗೂ ಇತರೆ ಅನೇಕ ಮಂದಿ ಸಂಘದ ಪದಾಧಿಕಾರಿಗಳಿದ್ದರು.

---------

ಫೋಟೋ 8ಪಿವಿಡಿ6

ಅಧ್ಯಕ್ಷ ಆರ್‌.ಎಂ.ನರಸಿಂಹ

ಫೋಟೋ 8ಪಿವಿಡಿ7

ಕಾರ್ಯದರ್ಶಿ ಅರ್ಚನಾ

8ಪಿವಿಡಿ8

ಗೌರವಾಧ್ಯಕ್ಷ ದೊಡ್ಡಯ್ಯ,

8ಪಿವಿಡಿ9

ವೇಣುಗೋಪಾಲರೆಡ್ಡಿ,

8ಪಿವಿಡಿ10

ಸಾಧಿಕ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕ್ಷೇತ್ರ ಘೋಷಿಸಿದ ನಿಖಿಲ್
ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ಚುರುಕು