ನಾರಾಯಣ್‌ಗೆ ಪತಂಜಲಿ ಯೋಗ ಸಮಿತಿಯಿಂದ ಸನ್ಮಾನ

KannadaprabhaNewsNetwork |  
Published : Jun 22, 2025, 11:48 PM IST
22ಎಚ್ಎಸ್ಎನ್11:  | Kannada Prabha

ಸಾರಾಂಶ

ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿ ಈಗ ಯೋಗದ ಸೇವೆಯಲ್ಲಿ ನಿರತರಾಗಿರುವ ಡಾ. ನಾರಾಯಣ್ ಅವರಿಗೆ ಶ್ರೀ ಉದ್ಬವ ಗಣಪತಿ ಯೋಗ ಕೇಂದ್ರದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರತಿದಿನದ ನಾವು ಯೋಗಾಭ್ಯಾಸ ಮಾಡುವುದರಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಸದಾ ಆನಂದದಿಂದ ಇರುವ ಬಗ್ಗೆ ತಿಳಿಸಿದರು. ಕುವೆಂಪು ಯೋಗ ಕೇಂದ್ರದ ನಾಗರಾಜ್ ಯೋಗದಿಂದ ತಾವು ಪಡೆದಿರುವ ಸದುಪಯೋಗದ ಬಗ್ಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿ ಈಗ ಯೋಗದ ಸೇವೆಯಲ್ಲಿ ನಿರತರಾಗಿರುವ ಡಾ. ನಾರಾಯಣ್ ಅವರಿಗೆ ಶ್ರೀ ಉದ್ಬವ ಗಣಪತಿ ಯೋಗ ಕೇಂದ್ರದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಇದೇ ವೇಳೆ ಯೋಗಾಭ್ಯಾಸ, ಅಗ್ನಿಹೋತ್ರ ಮಾಡಿ ತದನಂತರ ಡಾ. ನಾರಾಯಣ್‌ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾವು ಸರ್ಕಾರಿ ಸೇವೆಯಲ್ಲಿದ್ದಾಗ ಮಾಡಿದ ಸಾಧನೆಗಳನ್ನು ವಿವರಿಸುತ್ತಾ, ನಿವೃತ್ತಿ ನಂತರ ನನಗೆ ಯೋಗದ ಲಭಿಸಿರುವ ಬಗ್ಗೆ ತಿಳಿಸಿ ಇನ್ನು ಮುಂಚೆ ಯೋಗದ ಅನುಭವ ಲಭಿಸಿದ್ದರೆ ಇನ್ನು ಹೆಚ್ಚಿನ ಸಾಧನೆ ಮಾಡಬಹುದಾಗಿತ್ತು ಎಂದು ತಿಳಿಸುತ್ತಾ ಯೋಗದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಪತಂಜಲಿ ಜಿಲ್ಲಾ ಯೋಗ ಮಾರ್ಗದರ್ಶಕರಾದ ಜಿ. ಲೋಕನಾಥ್ ಮಾತನಾಡಿ, ಶ್ರೀ ಉದ್ಬವ ಗಣಪತಿ ಯೋಗ ಕೇಂದ್ರದಲ್ಲಿ ಉತ್ಸಾಹಿ ಯೋಗ ಸಾಧಕರು ಇದ್ದು, ಎಲ್ಲಾ ಸಕ್ರಿಯವಾಗಿ ಯೋಗ ಸೇವೆ ಮಾಡುತ್ತಾ ಈ ಕೇಂದ್ರವನ್ನು ಹಾಸನದಲ್ಲಿಯೇ ಆದರ್ಶ ಯೋಗ ಕೇಂದ್ರ ಮಾಡೋಣ ಎಂದು ಸಲಹೆ ನೀಡಿದರು. ಪತಂಜಲಿ ರಾಜ್ಯ ಸಮಿತಿ ಸದಸ್ಯರಾದ ಶ್ರೀ ಸುರೇಶ್ ಪ್ರಜಾಪತಿ ಮಾತನಾಡಿ, ಪ್ರತಿದಿನದ ನಾವು ಯೋಗಾಭ್ಯಾಸ ಮಾಡುವುದರಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಸದಾ ಆನಂದದಿಂದ ಇರುವ ಬಗ್ಗೆ ತಿಳಿಸಿದರು. ಕುವೆಂಪು ಯೋಗ ಕೇಂದ್ರದ ನಾಗರಾಜ್ ಯೋಗದಿಂದ ತಾವು ಪಡೆದಿರುವ ಸದುಪಯೋಗದ ಬಗ್ಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪತಂಜಲಿ ಜಿಲ್ಲಾ ಪ್ರಭಾರಿಗಳಾದ ಗಿರೀಶ್ ಜಿ ಎಲ್ಲರನ್ನು ಸ್ವಾಗತಿಸಿದರು. ಪತಂಜಲಿ ಯುವ ಭಾರತ್ ಜಿಲ್ಲಾ ಪ್ರಭಾರಿಗಳಾದ ದೊರೆಸ್ವಾಮಿ ನಿರೂಪಣೆ ಮಾಡಿದರು. ಭಜನೆ ಮಾಡಿ, ಸಾಮೂಹಿಕ ನೃತ್ಯದ ಮೂಲಕ ಕಾರ್ಯಕ್ರಮ ಮುಗಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಪ್ರಭಾರಿಗಳಾದ ಶ್ರೀಮತಿ ಶಾರದ, ಪ್ರಭಾರಿಗಳಾದ ನಾಗೇಶ್, ಕೇಶವಮೂರ್ತಿ, ಶಾಂತಣಗೌಡ, ಶಿವನಂಜೇಗೌಡ್ರು, ಪತಂಜಲಿ ಜಿಲ್ಲಾ ಮಾರ್ಗದರ್ಶಕರಾದ ಚಂದ್ರಶೇಖರ್, ದೇವರಾಜ್ ಹಾಜರಿದ್ದರು, ಅಶ್ವಿನಿ, ರೂಪಮುರುಳಿ, ಸಂದ್ಯಾ, ಉಷಾ, ನಾಗರತ್ನ, ಧರ್ಮಾ ನಂದ್, ಪವಿತ್ರ ಹಾಗೂ ಇತರರು ಭಾಗವಹಿಸಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ