- ಗರ್ತಿಕೆರೆ ನಾರಾಯಣ ಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ ಅಭಿಮತ । ಪ್ರತಿಭಾ ಪುರಸ್ಕಾರ
ಕನ್ನಡಪ್ರಭ ವಾರ್ತೆ ದಾವಣಗೆರೆ ನಾವುಗಳು ಬರೆದಿಟ್ಟಂತೆ ಜೀವನ ಮಾಡಲು ಅಸಾಧ್ಯ. ಆದರೆ, ಬರೆದಿಡುವಂಥ ಉತ್ತಮ ಜೀವನ ಮಾಡಲು ಸಾಧ್ಯವಿದೆ. ಮನುಕುಲದ ಏಳಿಗೆಗೆ ಶ್ರಮಿಸಿದ ನಾರಾಯಣ ಗುರು ಅವರ ಸೇವಾ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಗರ್ತಿಕೆರೆ ನಾರಾಯಣ ಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ ನುಡಿದರು.
ನಗರದ ಜಿಲ್ಲಾ ಆರ್ಯ ಈಡಿಗ ಸಂಘ ವತಿಯಿಂದ ಶನಿವಾರ ನಗರದ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಭಾರತ ಕಂಡ ಸಮಾಜ ಸುಧಾರಣೆ ಮಾಡಿದ ಅಪರೂಪದ ಸಂತರು, ದಾರ್ಶನಿಕರಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಹ ಒಬ್ಬರು. ಶೋಷಣೆಮುಕ್ತ, ಸಮಸಮಾಜ ನಿರ್ಮಾಣಕ್ಕಾಗಿ ಅವಿರತ ಶ್ರಮಿಸಿದವರು ಎಂದರು.ಮನುಷ್ಯನ ಮನಸ್ಸನ್ನು, ಬದುಕನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕಿದೆ. ಶಿಕ್ಷಣ ಮನುಷ್ಯನಿಗೆ ಗೌರವವನ್ನು ತಂದು ಕೊಡುತ್ತದೆ. ಶಿಕ್ಷಣ ಎಂಬುದು ಹುಲಿಯ ಹಾಲಿನಂತೆ, ಕುಡಿದವರು ಘರ್ಜಿಸಲೇ ಬೇಕು. ಅಂದರೆ ಶಿಕ್ಷಣದಿಂದ ಅಮೂಲಾಗ್ರ ಬದಲಾವಣೆ ಸಾಧ್ಯವಿದೆ ಎಂದು ನುಡಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಆರ್ಯ ಈಡಿಗ ಸಂಘದ ಪ್ರಮುಖ ಬೇಡಿಕೆಗಳನ್ನು ನಿಯಮಾನುಸಾರ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ಗಮನಕ್ಕೆ ತಂದು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಈಡಿಗ ಸಮುದಾಯದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿದರು. ಸಿಎಂ ಕರ್ತವ್ಯಾಧಿಕಾರಿ ಎಂ.ಶ್ರೀನಿವಾಸ, ಮಡಿಕೇರಿ ಎಸಿಪಿ ಎಸ್.ಮಹೇಶ ಕುಮಾರ, ಅಧಿಕಾರಿಗಳಾದ ಕೆ.ಆನಂದ, ಡಾ.ಲಕ್ಷ್ಮಿಕಾಂತ, ಕೆ.ಎನ್.ಸಂತೋಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಂಘದ ಗೌರವಾಧ್ಯಕ್ಷ ಎಚ್.ಶಂಕರ್ ಪಾಲ್ಗೊಂಡಿದ್ದರು.
- - -
- ದಿನೇಶ ಕೆ. ಶೆಟ್ಟಿ, ದೂಡಾ ಅಧ್ಯಕ್ಷ
-21ಕೆಡಿವಿಜಿ32: