ಬಳ್ಳಾರಿ: ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಾರಾಯಣ ಹೆಲ್ತ್ ಸಂಸ್ಥೆಯು ತನ್ನ ಆಸ್ಪತ್ರೆಗಳ ಜಾಲಗಳ ಮೂಲಕ 10 ಸಾವಿರಕ್ಕೂ ಅಧಿಕ ಆರ್ಥೋಪೆಡಿಕ್ ಹಾಗೂ ಸಾವಿರಕ್ಕೂ ಅಧಿಕ ರೋಬೋಟಿಕ್ ಮೊಣಕಾಲು ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ ಎಂದು ನಾರಾಯಣ ಹೆಲ್ತ್ ಸಂಸ್ಥೆಯ ಆರ್ಥೋಪೆಡಿಕ್ ಆಂಕಾಲಜಿಸ್ಟ್ ಡಾ. ಸುಮನ್ ಎಂ. ಭೈರೇಗೌಡ ತಿಳಿಸಿದರು.
ಸ್ಪೈನ್ ಸರ್ಜನ್ ಡಾ. ವಿನು ರಾಜ್ ಅವರು ಮಾತನಾಡಿ, ಸೋಂಕು ಮತ್ತು ಕುಸಿತಕ್ಕೊಳಗಾದ ಎಳೆಯ ಬೆನ್ನುಮೂಳೆಗೆ ಚಿಕಿತ್ಸೆ ನೀಡುವಾಗ ಸಣ್ಣ ತಪ್ಪಿಗೂ ಅವಕಾಶವಿರುವುದಿಲ್ಲ. ಓ-ಆರ್ಮ್ ಮತ್ತು 3ಡಿ ನ್ಯಾವಿಗೇಷನ್ ನಮಗೆ ಮಿಲಿಮೀಟರ್‌ಗಿಂತಲೂ ಸೂಕ್ಷ್ಮ ನಿಖರತೆಯನ್ನು ಒದಗಿಸಿದ್ದರಿಂದ ನರಗಳಿಗೆ ಹಾನಿಯಾಗದಂತೆ ಚಿಕಿತ್ಸೆ ನೀಡಲು ಸಾಧ್ಯವಾಯಿತು. ಇದರಿಂದಾಗಿ ಬಾಲಕಿ 48 ಗಂಟೆಗಳಲ್ಲೇ ಎದ್ದು ನಿಲ್ಲಲು ಸಾಧ್ಯವಾಯಿತು ಎಂದು ವಿವರಿಸಿದರು.ಕೀಲು ಕಸಿಗೆ ಸುಧಾರಿತ ರೋಬೋಟಿಕ್ ತಂತ್ರಜ್ಞಾನಗಳ ಜೊತೆಗೆ ಬೆನ್ನುಮೂಳೆ, ಟ್ರಾಮಾ ಹಾಗೂ ಆರ್ಥೋಪೆಡಿಕ್ ಆಂಕಾಲಜಿ ಉಪ-ವಿಭಾಗಗಳಲ್ಲಿ ನುರಿತ ತಜ್ಞರ ಸೇವೆಯನ್ನು ಸಂಯೋಜಿಸುವ ಮೂಲಕ ನಾರಾಯಣ ಹೆಲ್ತ್ ಸಂಸ್ಥೆಯು ರೋಗಿಗಳು ದೂರದ ಊರುಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಿದೆ. ಅತ್ಯಾಧುನಿಕ ರೋಬೋಟಿಕ್ಸ್ ಹಾಗೂ ಸುಧಾರಿತ ಸೌಲಭ್ಯಗಳ ಮೂಲಕ ರೋಗಿಗಳಿಗೆ ತ್ವರಿತ, ಗುಣಮಟ್ಟದ ಪರಿಹಾರ ಒದಗಿಸಲು ಸಂಸ್ಥೆ ಬದ್ಧವಾಗಿದೆ.
ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಹಾಗೂ ನುರಿತ ತಜ್ಞರ ನೆರವಿನಿಂದಾಗಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ರೋಗಿಗಳಿಗೆ ದೂರದ ಮಹಾನಗರಗಳಿಗೆ ತೆರಳುವ ಅನಿವಾರ್ಯತೆ ತಪ್ಪಿದ್ದು, ಸುಧಾರಿತ ಚಿಕಿತ್ಸೆ ಸ್ಥಳೀಯವಾಗಿಯೇ ಲಭ್ಯವಾಗುತ್ತಿದೆ ಎಂದು ತಿಳಿಸಿದರು.