ನರೇಗಾ ಪರಿಶೀಲನೆಗೆ ಬಂದಿದ್ದ ತಂಡದೊಂದಿಗೆ ವಾಗ್ವಾದ

KannadaprabhaNewsNetwork |  
Published : Apr 25, 2025, 11:48 PM IST
25ಕೆಪಿಎಂಎಸ್‌ಕೆ 01:  | Kannada Prabha

ಸಾರಾಂಶ

ತಾಲೂಕಿನ ಬೆಂಚಮರಡಿ ಗ್ರಾಮಕ್ಕೆ ಉದ್ಯೋಗ ಖಾತರಿ ಕಾಮಗಾರಿ ಪರಿಶೀಲನೆಗೆ ಆಗಮಿಸಿದ್ದ ಕೇಂದ್ರ ತಂಡದ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ನಡೆದ ವಾಗ್ವಾದದಲ್ಲಿ ಗ್ರಾಮದ ಏಳು ಜನರ ವಿರುದ್ದ ಪ್ರಕರಣ ದಾಖಲಾಗಿದ್ದು ಅವರನ್ನು ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಸ್ಕಿತಾಲೂಕಿನ ಬೆಂಚಮರಡಿ ಗ್ರಾಮಕ್ಕೆ ಉದ್ಯೋಗ ಖಾತರಿ ಕಾಮಗಾರಿ ಪರಿಶೀಲನೆಗೆ ಆಗಮಿಸಿದ್ದ ಕೇಂದ್ರ ತಂಡದ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ನಡೆದ ವಾಗ್ವಾದದಲ್ಲಿ ಗ್ರಾಮದ ಏಳು ಜನರ ವಿರುದ್ದ ಪ್ರಕರಣ ದಾಖಲಾಗಿದ್ದು ಅವರನ್ನು ಬಂಧಿಸಲಾಗಿದೆ.ಗ್ರಾಮದಲ್ಲಿ ಎರಡು ಮೂರು ತಿಂಗಳಿಂದ ನೀರಿನ ಸಮಸ್ಯೆ ತೀವ್ರವಾಗಿದ್ದು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಬೇಸಿಗೆಯ ಈ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳದೆ ಖಾತರಿ ಕಾಮಗಾರಿ ಪರಿಶೀಲನೆಗೆ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು, ನೀರು ಪೂರೈಕೆಯಾಗದ ಕಾರಣ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳ ಕಡೆ ನೀರು ಚೆಲ್ಲಿ ಕಾರಿನ ಕಡೆ ನುಗ್ಗಿ ಗಾಳಿ ಬಿಡಲು ಯತ್ನಿಸಿದರು ಅಧಿಕಾರಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ತಮ್ಮ ತಮ್ಮ ಕಾರುಗಳಲ್ಲಿ ವಾಪಾಸು ತೆರಳಿದರು.ಸ್ಥಳಕ್ಕೆ ಬಂದ ಕವಿತಾಳ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆಯುತ್ತಿದ್ದಂತೆ ನೀರು ಕೇಳಿದರೆ ಬಂಧಿಸುವುದು ಯಾವ ನ್ಯಾಯ ಕುಡಿಯಲು ನೀರು ಕೇಳುವುದು ಅಪರಾಧವೇ ಬಂಧಿಸುವುದಾದರೆ ಗ್ರಾಮದ ಎಲ್ಲರನ್ನು ಬಂಧಿಸಿ ಎಂದು ಆಕ್ರೋಶ ಹೊರಹಾಕಿದರು.ಕೇಂದ್ರ ತಂಡದ ಅಧಿಕಾರಿ ಶಿವಶಂಕರ, ಜಿಪಂ ಯೋಜನಾ ನಿರ್ದೇಶಕ ಶರಣಬಸಪ್ಪ, ಮಸ್ಕಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ, ಪಾಮನಕಲ್ಲೂರು ಗ್ರಾಪಂ ಪಿಡಿಒ ಕೃಷ್ಣ ಹನುಗುಂದ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಳಿಂಗ ಸರ್ಪ ರಕ್ಷಣೆ
ಸಂವಿಧಾನ ದಿನಾಚರಣೆ: ವಿವಿಧ ಸ್ಪರ್ಧೆ ಆಯೋಜನೆ