ಹುಬ್ಬಳ್ಳಿ:
ಇಲ್ಲಿನ ಕೆಎಂಸಿಆರ್‌ಐಗೆ ಭೇಟಿ ನೀಡಿ ಗಲಾಟೆಯಲ್ಲಿ ಗಾಯಗೊಂಡಿರುವ ಜಯಪ್ಪ ಕುರುಬರ, ಲೋಹಿತ್ ಕುರುಬರ ಹಾಗೂ ಶಿವರಾಜ್ ಕುರುಬರ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಮಾತನಾಡಿದರು. ಕಾನೂನಿನ ಮುಂದೆ ಎಲ್ಲರೂ ಸಮಾನರು. ಯಾವುದೇ ವ್ಯಕ್ತಿ ಅಥವಾ ಗುಂಪು ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡಬಾರದು. ನರೇಗಲ್‌ನಲ್ಲಿ ನಡೆದಿರುವ ಈ ಹಲ್ಲೆ ಪ್ರಕರಣದ ಎಲ್ಲ ಆರೋಪಿಗಳ ವಿರುದ್ಧ ಸರ್ಕಾರ ಯಾವುದೇ ಒತ್ತಡ ಅಥವಾ ಪಕ್ಷಪಾತಕ್ಕೆ ಮಣಿಯದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿ, ಎಲ್ಲ ಆರೋಪಿಗಳನ್ನು ತಕ್ಷಣ ಬಂಧಿಸಿ, ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದರು. ಈ ವೇಳೆ ಹಾವೇರಿ ಬಿಜೆಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಕುರುಬರ, ಜಿ.ಎಸ್. ಕುರುಬರ, ಶ್ರೀರಾಮಸೇನಾ ಕಾರ್ಯಕರ್ತ ವೆಂಕಟೇಶ್ ದಾಸರ, ಯಶೋದಾ ತಾಂಬೆ, ವೀರಯ್ಯ ಸಾಲಿಮಠ, ಶಾಮ ಸುಂದರ, ಅಣ್ಣಪ್ಪ ದಿವಟಗಿ, ಸಚಿನ ಕಾಟವೆ, ಆನಂದ ಬಾಕಳೆ, ಸುನಿಲ ಕಾಟವೆ, ಸಚಿನ ಪೂಜಾರಿ, ಸಂತೋಷ್ ಸೇರಿದಂತೆ ಉಪಸ್ಥಿತರಿದ್ದರು.