ನರೇಂದ್ರ ಮೋದಿ ಆಡಳಿತಕ್ಕೆ ಯಾರೂ ಸರಿಸಾಟಿಯಿಲ್ಲ: ಜೋಶಿ

KannadaprabhaNewsNetwork |  
Published : Nov 16, 2025, 02:15 AM IST
454 | Kannada Prabha

ಸಾರಾಂಶ

ಉತ್ತರ ಪ್ರದೇಶದಲ್ಲಿ ಉತ್ತಮ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಅದೊಂದು ದೊಡ್ಡ ರಾಜ್ಯವಾಗಿದ್ದು, ಮೂಲಸೌಕರ್ಯ ಒದಗಿಸುತ್ತಿರುವುದರಿಂದ ಬಹಳ ವೇಗವಾಗಿ ಬೆಳೆಯುತ್ತಿದೆ. ಆದ್ದರಿಂದ ಅಲ್ಲಿಯೂ ಸಹ ಬಿಹಾರ ಚುನಾವಣೆ ಪರಿಣಾಮ ಬೀರಲಿದ್ದು, ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ.

ಹುಬ್ಬಳ್ಳಿ:

ಬಿಜೆಪಿಯು ಎಲ್ಲೆಲ್ಲಿ ಶಕ್ತಿಯುತವಾಗಿ ಬೆಳೆಯುತ್ತಿದೆಯೋ ಅಲ್ಲಿ ಕಾಂಗ್ರೆಸ್ ಅಥವಾ ಇಂಡಿಯಾ ಬಣ ಗೆಲ್ಲಲು ಸಾಧ್ಯವಿಲ್ಲ. ಎನ್‌ಡಿಎ ಸುಶಾಸನ, ಅಭಿವೃದ್ಧಿ ಮಾಡಲ್ ಹಾಗೂ ನರೇಂದ್ರ ಮೋದಿ ಆಡಳಿತಕ್ಕೆ ಯಾರೂ ಸರಿಸಾಟಿ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರ ಪ್ರದೇಶದಲ್ಲಿ ಉತ್ತಮ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಅದೊಂದು ದೊಡ್ಡ ರಾಜ್ಯವಾಗಿದ್ದು, ಮೂಲಸೌಕರ್ಯ ಒದಗಿಸುತ್ತಿರುವುದರಿಂದ ಬಹಳ ವೇಗವಾಗಿ ಬೆಳೆಯುತ್ತಿದೆ. ಆದ್ದರಿಂದ ಅಲ್ಲಿಯೂ ಸಹ ಬಿಹಾರ ಚುನಾವಣೆ ಪರಿಣಾಮ ಬೀರಲಿದ್ದು, ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಹಾರ ಚುನಾವಣೆ ಫಲಿತಾಂಶದಿಂದ ರಾಹುಲ್ ಗಾಂಧಿಗೆ ಆಘಾತವಾಗಿದೆ. ಚುನಾವಣೆ ಪೂರ್ವದಲ್ಲಿ ಇವಿಎಂ ಹಾಗೂ ಮತಕಳ್ಳತನ ಎಂಬ ಹಲವಾರು ಆರೋಪ ಮಾಡಿದರೆ ಹೊರತು ಈ ಹಿಂದಿನ ಚುನಾವಣೆಯಲ್ಲಿ ತಮ್ಮ ಸೋಲಿಗೆ ಏನು ಕಾರಣ ಎಂಬುವುದನ್ನು ಪರಾಮರ್ಶೆ ಮಾಡಿಕೊಂಡು ಮುನ್ನುಗ್ಗುವ ಪ್ರಯತ್ನ ಮಾಡಲಿಲ್ಲ ಎಂದು ಟೀಕಿಸಿದರು.

ಈ ಹಿಂದೇ ಅನಿವಾರ್ಯವಾಗಿ ದೇಶದ ಚುಕ್ಕಾಣಿ ಕಾಂಗ್ರೆಸ್‌ಗೆ ದೊರಕಿತ್ತು. ಆದರೆ, ಈಗ ಉತ್ತಮ ನಾಯಕತ್ವ ನೀಡುವ ಬಿಜೆಪಿ ಹಾಗೂ ನರೇಂದ್ರ ಮೋದಿ ಇದ್ದು ಅವರು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಜೋಶಿ ಭವಿಷ್ಯ ನುಡಿದರು.

ಸೋಲಿನ ಶತಕದತ್ತ ರಾಹುಲ್ ಗಾಂಧಿ ದಾಪುಗಾಲು ಹಾಕುತ್ತಿದ್ದಾರೆ. ಈಗಲಾದರೂ ಅವರು ಸುಧಾರಣೆಯಾಗಬೇಕು ಎಂದಿರುವ ಜೋಶಿ, ವಿರೋಧ ಪಕ್ಷಗಳು ಇಷ್ಟೊಂದು ದುರ್ಬಲವಾಗಿ ಇರಬಾರದು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ರಾಜಕಾರಣಕ್ಕೆ ಎಚ್‌ಡಿಕೆ ಪರೋಕ್ಷ ಇಂಗಿತ
ಜೈಲಿನ ಬ್ಯಾರಕ್‌ಗಳಿಗೆ ಸಿಸಿಟಿವಿ ಕ್ಯಾಮೆರಾ!